ನಾನು ಸಾಯೋದರೊಳಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರ್ಬೇಕು, ಬಡ ಜನರ ಕಷ್ಟ ಪರಿಹಾರ ಆಗಬೇಕೆನ್ನುವುದು ಹೆಚ್​ಡಿ ದೇವೇಗೌಡರ ಕನಸು -ಹೆಚ್​ಡಿ ಕುಮಾರಸ್ವಾಮಿ

|

Updated on: May 07, 2023 | 3:04 PM

ನಾನೂ ಸಾಯೋದರೊಳಗೆ ನಾನು ಕಟ್ಟಿ ಬೆಳೆಸಿದ ಪಕ್ಷ ಅಧಿಕಾರಕ್ಕೆ ಬರಬೇಕು. ಅದರಿಂದ ಕರ್ನಾಟಕದ ಬಡ ಜನರ ಕಷ್ಟ ಪರಿಹಾರ ಆಗಬೇಕು ಅನ್ನೋದು ದೇವೇಗೌಡರ ಕನಸಿದೆ. ಮಾಗಡಿ ಜನತೆ ನನ್ನನ್ನ ಬೆಳಸಿದವರು. ಈ ಬಾರಿ ಎ.ಮಂಜುನಾಥ್ ರನ್ನ ಗೆಲ್ಲಿಸಿ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ನಾನು ಸಾಯೋದರೊಳಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರ್ಬೇಕು, ಬಡ ಜನರ ಕಷ್ಟ ಪರಿಹಾರ ಆಗಬೇಕೆನ್ನುವುದು ಹೆಚ್​ಡಿ ದೇವೇಗೌಡರ ಕನಸು -ಹೆಚ್​ಡಿ ಕುಮಾರಸ್ವಾಮಿ
ಮಾಗಡಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಪ್ರಚಾರ
Follow us on

ರಾಮನಗರ: ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರ ಮತಯಾಚನೆ ಮಾಡಿದ್ದಾರೆ. ಕುದೂರು ಗ್ರಾಮದಲ್ಲಿ ಪ್ರಚಾರ ಮಾಡಿದ ವೇಳೆ ಹೆಚ್​ಡಿ ದೇವೇಗೌಡರನ್ನು ನೆನಪಿಸಿಕೊಂಡರು. ಹೆಚ್​​ಡಿ ದೇವೇಗೌಡರು ರಾಜ್ಯದ ಜನತೆಯ ಕಷ್ಟನೋಡಿ ಕಣ್ಣೀರು ಹಾಕಿದ್ದಾರೆ. ನಮ್ಮ ಮಕ್ಕಳು ಮಂತ್ರಿ ಆಗಲ್ಲ ಅಂತಾ ಕಣ್ಣೀರು ಹಾಕಿದ್ದಲ್ಲ. ಮೂರು ತಿಂಗಳ ಹಿಂದೆ H.D.ದೇವೇಗೌಡರಿಗೆ ಮರೆವು ಆಗಿತ್ತು. ನಾವು ಶಿವನ ಭಕ್ತರು, ಶಿವನೇ ಅವರಿಗೆ ಮರುಜೀವ ಕೊಟ್ಟಿದ್ದಾನೆ. ದೇವೇಗೌಡರು ಪ್ರತಿದಿನ ಮೂರು ಕಡೆ ಪ್ರಚಾರ ಮಾಡುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ದೇವೇಗೌಡರ ಕನಸು ಎಂದರು.

ರಾಮನಗರ, ಮಾಗಡಿ ಕ್ಷೇತ್ರ ನನ್ನನ್ನ ರಾಜಕೀಯವಾಗಿ ಬೆಳೆಸಿದ ಕ್ಷೇತ್ರ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕಾದರೆ ನಾನೇ ಕಾರಣ ಅಂತಾರೆ. ನಾನೂ 38 ಸೀಟ್‌ಗಳನ್ನ ಇಟ್ಟುಕೊಂಡು ಸರ್ಕಾರ ರಚನೆ ಮಾಡಿದ್ವಿ. ನಾನೂ ಇವರಿಂದ ಮಂತ್ರಿ ಆಗಿಲ್ಲ, ನನ್ನ ಕರ್ನಾಟಕ ಜನತೆ ಆಶೀರ್ವಾದದಿಂದ ಮಂತ್ರಿ ಆದೆ. ಕ್ಷೇತ್ರದಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ನಾನು ಏನು ಹೇಳಲ್ಲ. ಅವರಿಗೆ ನಮ್ಮ ಮಾಗಡಿ ರಂಗನಾಥ್ ಸ್ವಾಮಿಯೇ ನೋಡಿಕೊಳ್ಳುತ್ತಾನೆ ಎಂದು ಪರೋಕ್ಷವಾಗಿ ಬಾಲಕೃಷ್ಣ ಮೇಲೆ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರ ಗಲಾಟೆ: 11ಜನರ ವಿರುದ್ಧ ಕೇಸ್​ ದಾಖಲು

ಆರ್ಥಿಕವಾಗಿ ಇದ್ದರೆ 150 ರಿಂದ 160 ಗೆಲ್ಲುತ್ತಿದ್ದೆವು. ನಾಯಕ ಕುಮಾರಸ್ವಾಮಿ ಗೆಲ್ಲಲ್ಲ ಅಂದಿದ್ದಾರೆ. ದೇವೇಗೌಡರ ಮಗ ಕುಮಾರಸ್ವಾಮಿ ಅಲ್ಲ, ಕುಮಾರಸ್ವಾಮಿ ತಂದೆ ದೇವೇಗೌಡ ಅನ್ನುತ್ತಿದ್ದಾರೆ. ಇದಕ್ಕೆಲ್ಲ ಕಾರಣ ರಾಮನಗರ ಜನತೆ ಆಶೀರ್ವಾದ. 80 ರಿಂದ 90 ಕ್ಷೇತ್ರ ಗೆಲ್ಲೋದು ಗ್ಯಾರಂಟಿ. ಈ ಬಾರಿ ಕಾಂಗ್ರೆಸ್ ಬಿಜೆಪಿಗಿಂತ ಮುಂದೆ ಇರುತ್ತೇವೆ. ಬಿಜೆಪಿಯವರು ಕಾಂಗ್ರೆಸ್ 85% ಅಂತಾರೆ, ಕಾಂಗ್ರೆಸ್ ಬಿಜೆಪಿ 40% ಅಂತಾರೆ. ಅದೇ ಜೆಡಿಎಸ್ ಪಕ್ಷ ನಮ್ಮ ತಂದೆ ದೇವೇಗೌಡರು ಪ್ರಧಾನಮಂತ್ರಿಯಾದರು ಭ್ರಷ್ಟಾಚಾರ ಮಾತ್ರ ಇಲ್ಲ. ಎ.ಮಂಜುನಾಥ್ ಜಾಗದಲ್ಲಿ ಆತ ಇದ್ದರೆ ಆಪರೇಷನ್ ಕಮಲದಲ್ಲಿ 30 ಕೋಟಿ ತಗೆದುಕೊಂಡು ಬಿಜೆಪಿ ಹೋಗುತ್ತಿದ್ದ. ಮಂಜುನಾಥ್ ನನ್ನ ಜೊತೆ ಪ್ರಾಮಾಣಿಕ ಆಗಿದ್ದಾನೆ. ಹಾಗಾಗಿ ಅವನಿಗೆ ಮತ ನೀಡಿ. ನನಗೆ ನಂಬಿಕೆ ಇದೆ ನಾನೂ ಬದುಕಿರೋ ವರೆಗೆ ನನ್ನನ್ನ ಬಿಟ್ಟು ಅಲ್ಲಾಡುವುದಿಲ್ಲ. ಪಂಚರತ್ನ ಜಾರಿಗೆ ಬರಬೇಕಾದರೆ ಜೆಡಿಎಸ್‌ಗೆ ಓಟ್ ನೀಡಿ. ದೇಶದಲ್ಲೆ ರಾಮನಗರ ಮಾದರಿ ಜಿಲ್ಲೆ ಮಾಡುತ್ತೇವೆ‌. ಈ ಚುನಾವಣೆಯಲ್ಲಿ ನನ್ನ ಚರ್ಮ ಒಂದು ಸುಲಿದಿಲ್ಲ. ದುಡ್ಡಿಲ್ಲದೇ ಚುನಾವಣೆ ನಡೆಸುತ್ತಿದ್ದೇನೆ. ಯಾರೋ ನಾಲ್ಕು ಜನ ಕೊಟ್ಟಿರೋ ದುಡ್ಡು ಕೊಟ್ಟು ಅಭ್ಯರ್ಥಿಗಳನ್ನ ನಿಲ್ಲಿಸಿದ್ದೇನೆ‌. 150-160 ಸೀಟು ಬರುತ್ತೆ ಆದರೆ ದುಡ್ಡಿನ ಕೊರತೆ ಇದೆ. ಎಲ್ಲಿ 35 ರಷ್ಟು ಸೀಟು ಗೊತಾ ಆಗುವ ಆತಂಕ ಇದೆ ಎಂದು ಪ್ರಚಾರದ ವೇಳೆ ಹೆಚ್​ಡಿ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ನಾನೂ ಸಾಯೋದರೊಳಗೆ ನಾನು ಕಟ್ಟಿ ಬೆಳೆಸಿದ ಪಕ್ಷ ಅಧಿಕಾರಕ್ಕೆ ಬರಬೇಕು. ಅದರಿಂದ ಕರ್ನಾಟಕದ ಬಡ ಜನರ ಕಷ್ಟ ಪರಿಹಾರ ಆಗಬೇಕು ಅನ್ನೋದು ದೇವೇಗೌಡರ ಕನಸಿದೆ. ಮಾಗಡಿ ಜನತೆ ನನ್ನನ್ನ ಬೆಳಸಿದವರು. ಈ ಬಾರಿ ಎ.ಮಂಜುನಾಥ್ ರನ್ನ ಗೆಲ್ಲಿಸಿ. ಸರ್ಕಾರ ಬಂದ ಆರು ತಿಂಗಳಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 9 ಕಡೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

ಇದನ್ನೂ ಓದಿ: ರೇಟ್​ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ; ಚುನಾವಣಾ ಆಯೋಗದ ನೋಟಿಸ್​ಗೆ ಡಿಕೆ ಶಿವಕುಮಾರ್‌ ಉತ್ತರ

ನಾನೂ ಜೆಡಿಎಸ್ ಪಕ್ಷದ ನಿಯತ್ತಿನ ನಾಯಿ

ಇನ್ನು ಇದೇ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್, ನಾನೂ ಜೆಡಿಎಸ್ ಪಕ್ಷದ ನಿಯತ್ತಿನ ನಾಯಿ. ಆಪರೇಷನ್ ಕಮಲ ವೇಳೆ ನನಗೂ ಆಫರ್ ಕೊಟ್ಟಿದ್ರು. ಸಚಿವ ಮಾಡುತ್ತೇನೆ ಅಂದ್ರು ಆದರೂ ಕೂಡ ನಾನೂ ಜೆಡಿಎಸ್ ಪಕ್ಷ ಬಿಡಲಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರ ನಿಯತ್ತಿನ ನಾಯಿ ಆಗಿ ಕೆಲಸ ಮಾಡುತ್ತೇನೆ. ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕಾದರೆ ನನ್ನನ್ನು ಗೆಲ್ಲಿಸಿ ಎಂದು ಪರೋಕ್ಷವಾಗಿ ಬಾಲಕೃಷ್ಣ ಮೇಲೆ ಎ.ಮಂಜು ಗುಡುಗಿದರು. ಹಿಂದುಳಿದ ತಾಲೂಕು ಹಣೆ ಪಟ್ಟಿ ಇದೆ. ಅದನ್ನ ಹೋಗಲಾಡಿಸುತ್ತೇನೆ ನನ್ನನ್ನು ಉಳಿಸಿಕೊಳ್ಳಿ. ಕುಮಾರಣ್ಣ ಮುಖ್ಯಮಂತ್ರಿ ಆಗಬೇಕಾದರೆ ನನ್ನನ್ನು ಗೆಲ್ಲಿಸಿ ಎಂದರು.

ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:04 pm, Sun, 7 May 23