Holalkere Election 2023 Winner: ಹೊಳಲ್ಕೆರೆಯಲ್ಲಿ ಅರಳಿದ ಕಮಲ, ಎಂ ಚಂದ್ರಪ್ಪಗೆ ಗೆಲುವು, ಆಂಜನೇಯಗೆ ಸೋಲು

|

Updated on: May 13, 2023 | 5:22 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಬಹಿರಂಗಗೊಂಡಿದ್ದು, ಹೊಳಲ್ಕೆರೆಯಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್​ನ ಪ್ರಬಲ ನಾಯಕ ಹೆಚ್​ ಆಂಜನೇಯ ಅವರು ಸೋಲು ಅನುಭವಿಸಿದ್ದಾರೆ.

Holalkere Election 2023 Winner: ಹೊಳಲ್ಕೆರೆಯಲ್ಲಿ ಅರಳಿದ ಕಮಲ, ಎಂ ಚಂದ್ರಪ್ಪಗೆ ಗೆಲುವು, ಆಂಜನೇಯಗೆ ಸೋಲು
ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹೆಚ್​ ಆಂಜನೇಯ ವಿರುದ್ಧ ಬಿಜೆಪಿಯ ಎಂ ಚಂದ್ರಪ್ಪಗೆ ಗೆಲುವು
Follow us on

Holalkere Assembly Election Results 2023, ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ (Karnataka Assembly Election Results 2023) ಬಹಿರಂಗಗೊಂಡಿದ್ದು, ಹೊಳಲ್ಕೆರೆಯಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್​ನ ಪ್ರಬಲ ನಾಯಕ ಹೆಚ್​ ಆಂಜನೇಯ (H Anjaneya) ಅವರು ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಎಂ ಚಂದ್ರಪ್ಪ (M Chandrappa) ಅವರು ಆಂಜನೇಯ ಅವರನ್ನು 5682 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಚಲಾವಣೆಯಾದ ಒಟ್ಟು ಮತಗಳ ಪೈಕಿ ಬಿಜೆಪಿಯ ಎಂ ಚಂದ್ರಪ್ಪ ಅವರು ಶೇ 45ರಷ್ಟು ಮತ ಪಡೆದಿದ್ದು, ಕಾಂಗ್ರೆಸ್​ನ ಹೆಚ್ ಆಂಜನೇಯ ಅವರು ಶೇ 42.1 ರಷ್ಟು ಮತ ಪಡೆದಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದ್ದ ಡಾ.ಜಯಸಿಂಹ ಲೋಕನಾಥ್ ಅವರು ಶೇ 10ರಷ್ಟು ಮತ ಪಡೆದಿದ್ದು, ಜೆಡಿಎಸ್​ನ ಎಸ್​ಆರ್ ಇಂದ್ರಜಿತ್ ನಾಯಕ್ ಅವರು ಶೇ 0.8ರಷ್ಟು ಮತ ಪಡೆದಿದ್ದಾರೆ.

ಇದನ್ನೂ ಓದಿ: Hiriyuru Election 2023 Winner: ಹಿರಿಯೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ಗೆಲುವು

ಹೊಳಲ್ಕೆರೆ ಕ್ಷೇತ್ರದಲ್ಲಿ 2008ರಿಂದಲೂ ಎಂ ಚಂದ್ರಪ್ಪ ಹಾಗೂ ಹೆಚ್​ ಆಂಜನೇಯ ಅವರ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಈ ಬಾರಿಯೂ ಇವರ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟು ಚಂದ್ರಪ್ಪ ಅವರು ಗೆಲುವು ಸಾಧಿಸಿದ್ದಾರೆ. ಎಸ್​ಸಿ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆ ಕ್ಷೇತ್ರದಿಂದ 2013ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದಿದ್ದ ಚಂದ್ರಪ್ಪ ಅವರನ್ನು ಆಂಜನೇಯ ಅವರು ಸೋಲಿಸಿದ್ದೆರು. 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಪ್ಪ ಅವರು ಆಂಜನೇಯ ಅವರನ್ನು ಪರಾಭವಗೊಳಿಸುವ ಮೂಲಕ ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ