Karkala Election 2023 Winner: ಮತ್ತೆ ಸುನಿಲ್ ಕುಮಾರ್ ಕೈಹಿಡಿದ ಕಾರ್ಕಳದ ಜನತೆ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ (Karkala Assembly Constituency) ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಬಾರಿ ಸುನಿಲ್ ಕುಮಾರ್ಗೆ ಕಾಂಗ್ರೆಸ್ ಪೈಪೋಟಿ ನೀಡಿತ್ತು. ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದಿದ್ದು. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ (Karkala Assembly Constituency) ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಈ ಬಾರಿ ಸುನಿಲ್ ಕುಮಾರ್ಗೆ ಕಾಂಗ್ರೆಸ್ ಪೈಪೋಟಿ ನೀಡಿತ್ತು. ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಕಾರ್ಕಳ ಬಿಜೆಪಿಯ ಭದ್ರಕೋಟೆಯು ಹೌದು ಆದರೆ, ಈ ಬಾರಿ ಹಲವು ವಿವಾದಗಳಿಂದ ಹಾಗೂ ಸುನಿಲ್ ಕುಮಾರ್ ಬಗ್ಗೆ ಕಾರ್ಕಳ ಜನತೆಯಲ್ಲಿ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲ್ಲಿಲ್ಲ ಎಂದು ಹೇಳಲಾಗಿತ್ತು. ಇದರ ಜತೆಗೆ ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರ ರಾಜಕೀಯ ಗುರು ಎಂದು ಹೇಳಲಾಗುತ್ತಿದ್ದ, ಶಿವ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಕೂಡ ಈ ಬಾರಿ ಚುನಾವಣೆಯಲ್ಲಿ ಶಿಷ್ಯನ ಮುಂದೆ ನಿಂತುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೂಡ ಪ್ರಬಲವಾಗಿದ್ದು, ಸುನಿಲ್ ಕುಮಾರ್ಗೆ ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿತ್ತು , ಆದರೆ ಈ ಭಾರಿಯು ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಚುನಾವಣೆಗಿಂತ ಈ ಭಾರೀ ಅತ್ಯಂತ ಕಡಿಮೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸುನಿಲ್ ಕುಮಾರ್ ಸಚಿವರಾಗಿದ್ದಾಗ ಕಾರ್ಕಳಕ್ಕೆ ಅಥವಾ ಉಡುಪಿಗೆ ಹೇಳಿಕೊಳ್ಳವಷ್ಟು ಅಭಿವೃದ್ಧಿ ಕಾರ್ಯ ಅಥವಾ ಶಾಸಕರಾಗಿದ್ದಾಗ ಇದ್ದ ಖಡಕ್ ನಡೆ ಇರಲಿಲ್ಲ ಎಂಬ ಮಾತು ಕೂಡ ಇತ್ತು. ಒಟ್ಟಾರೆ ಇಂದು ಸುನಿಲ್ ಕುಮಾರ್ ಗುರು-ಶಿಷ್ಯ ಜಿದ್ದಾಜಿದ್ದಿಯಲ್ಲಿ ಶಿಷ್ಯ ಗೆಲುವು ಸಾಧಿಸಿದ್ದಾರೆ.
ಇನ್ನೂ ಸುನಿಲ್ ಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದದ್ದು ಪ್ರಮೋದ್ ಮುತಾಲಿಕ್, ಶಿಷ್ಯನ ವಿರುದ್ಧವೇ ಹಿಂದೂ ಫೈರ್ ಬ್ರಾಂಡ್ ಎನ್ನಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ, ಹಿಂದುತ್ವ ಎಂದು ಓಡಾಡಿದ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಯಲ್ಲಿ ರಕ್ಷಣೆ ಇಲ್ಲ, ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಯಾವುದೇ ಕಾನೂನು ಕ್ರಮವಿಲ್ಲ ಎಂದು ಪ್ರಮೋದ್ ಮುತಾಲಿಕ್ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ಸುನಿಲ್ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ತುಂಬಾ ಕಷ್ಟ ಎಂಬ ಮಾತುಗಳು ಇತ್ತು. ಆದರೆ ಈ ಬಾರಿ ಮತ್ತೆ ಗೆಲುವು ಸಾಧಿಸಿದ್ದಾರೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಆಪ್ತ ಎಂದು ಹೇಳಲಾಗುತ್ತಿದ್ದ ಉದಯ್ ಶೆಟ್ಟಿ ಅವರು ಪೈಪೋಟಿ ನೀಡಿದ್ದರು, ಸುನಿಲ್ ಕುಮಾರ್ ಮುಂದೆ ಉದಯ್ ಶೆಟ್ಟಿ ಅವರು ಕೂಡ ಪ್ರಬಲ ಅಭ್ಯರ್ಥಿಯಾಗಿದ್ದರು, ಈ ಬಾರಿ ಅವರಿಗೆ ಸೋಲಾಗಿದೆ.
ಇದನ್ನೂ ಓದಿ: Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ
ಇನ್ನೂ ಕಾರ್ಕಳದಲ್ಲಿ ಜೆಡಿಎಸ್ನಿಂದ ಶ್ರೀಕಾಂತ್ ಕೊಚ್ಚೂರು ಸ್ಪರ್ಧಿಸಿದ್ದು ಸೋತಿದ್ದಾರೆ. ಎಎಪಿಯಿಂದ ಡೇನಿಯಲ್ ಕೂಡ ಕಡಿಮೆ ಮತಗಳನ್ನು ಪಡೆದು ಸೋತಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಮತದಾರ ಮತ್ತೆ ಸುನಿಲ್ ಕುಮಾರ್ ಅವರಿಗೆ ವಿಜಯ ಖಡ್ಗವನ್ನು ಹಾಕಿದ್ದಾನೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ