AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kadur Election 2023 Winner: ಕಡೂರಿನಲ್ಲಿ ವೈಎಸ್​ವಿ ದತ್ತಾ ವಿರುದ್ಧ ಗೆಲುವು ಸಾಧಿಸಿದ ಕೆಎಸ್​ ಆನಂದ್

KS Anand:ಕಡೂರಿನಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ವೈಎಸ್​ವಿ ದತ್ತಾ ವಿರುದ್ಧ ಕಾಂಗ್ರೆಸ್​ನ ಕೆಎಸ್​ ಆನಂದ್ ಗೆಲುವು ಸಾಧಿಸಿದ್ದಾರೆ.

Kadur Election 2023 Winner: ಕಡೂರಿನಲ್ಲಿ ವೈಎಸ್​ವಿ ದತ್ತಾ ವಿರುದ್ಧ ಗೆಲುವು ಸಾಧಿಸಿದ ಕೆಎಸ್​ ಆನಂದ್
ಕೆಎಸ್​ ಆನಂದ್
ನಯನಾ ರಾಜೀವ್
|

Updated on:May 13, 2023 | 5:20 PM

Share

ಕಡೂರಿನಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ವೈಎಸ್​ವಿ ದತ್ತಾ ವಿರುದ್ಧ ಕಾಂಗ್ರೆಸ್​ನ ಕೆಎಸ್​ ಆನಂದ್ ಗೆಲುವು ಸಾಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಮೇಲಾಟಗಳಿಂದ ಸುದ್ದಿಯಲ್ಲಿರುವ ಕಡೂರು ವಿಧಾನಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಏರ್ಪಟ್ಟಿತ್ತು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್​ವಿ ದತ್ತಾ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮತ್ತೆ ಜೆಡಿಎಸ್​ ಸೇರ್ಪಡೆಯಾಗಿ ಕಣದಲ್ಲಿದ್ದರು.

ಈ ಕ್ಷೇತ್ರದಲ್ಲಿ 2008, 2013 ಹಾಗೂ 2018ರಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ, ವೈಎಸ್​ವಿ ದತ್ತಾ, 2013ರಲ್ಲಿ ಮಾತ್ರ ಸುಮಾರು 42 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು.

ಕಳೆದ ಬಾರಿ ದತ್ತಾ ವಿರುದ್ಧ 16 ಸಾವಿರ ಮತಗಳಿಂದ ಗೆದ್ದಿದ್ದ ಬೆಳ್ಳಿ ಪ್ರಕಾಶ್ ಅಲಿಯಾಸ್ ಕೆಎಸ್​ ಪ್ರಕಾಶ್​ಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕೆಎಸ್​ ಆನಂದ್​ಗೆ ಮತ್ತೆ ಈ ಬಾರಿ ಟಿಕೆಟ್ ನೀಡಲಾಗಿತ್ತು.

ಕೆಎಸ್​ ಆನಂದ ಬದಲಿಗೆ ತನಗೆ ಟಿಕೆಟ್ ಬೇಕೆಂದು ಮನವಿ ಮಾಡಿ, ವೈಎಸ್​ವಿ ದತ್ತಾ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಡೂರು ಕ್ಷೇತ್ರವು ಈ ಬಾರಿ ಮೂವರಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು.

ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:19 pm, Sat, 13 May 23