Tarikere Election 2023 Winner: ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ಶ್ರೀನಿವಾಸ್ ಗೆಲುವು
GH Srinivas: ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಎಸ್ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ (62413) ಅವರು ಬಿಜೆಪಿಯ ಡಿ.ಎಸ್.ಸುರೇಶ್(50385) ವಿರುದ್ಧ ಗೆಲುವು ಸಾಧಿಸಿದ್ದಾರೆ.
ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ (62413) ಅವರು ಬಿಜೆಪಿಯ ಡಿ.ಎಸ್.ಸುರೇಶ್(50385) ವಿರುದ್ಧ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ(ಕಾಂಗ್ರೆಸ್ ಬಂಡಾಯ) ಎಚ್.ಎಂ. ಗೋಪಿಕೃಷ್ಣ ಹುಣಸಗಟ್ಟ ಅವರು 35266 ಮತಗಳನ್ನು ಪಡೆದು ತ್ರಿಕೋನ ಸ್ಪರ್ಧೆಯನ್ನು ನೀಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯವಾಗಿ ಅಷ್ಟೇನು ಸದ್ದು ಮಾಡದ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೊಮ್ಮೆ ಹಾಲಿ ಹಾಗೂ ಮಾಜಿಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಬಿಜೆಪಿಯಿಂದ ಹಾಲಿ ಶಾಸಕ ಡಿಎಸ್ ಸುರೇಶ್ಗೆ ನಾಲ್ಕನೇ ಬಾರಿಗೆ ಟಿಕೆಟ್ ನಿಡಲಾಗಿದೆ. 2008 ಹಾಗೂ 2018ರಲ್ಲಿ ಸುರೇಶ್ ಗೆಲುವು ಸಾಧಿಸಿದ್ದರು. ಇತ್ತ ಕಾಂಗ್ರೆಸ್ನಿಂದ ಜಿಎಚ್ ಶ್ರೀನಿವಾಸ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ, ಈ ಹಿಂದೆ 2013ರಲ್ಲಿ ಅವರು 900 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಡಿಎಸ್ ಸುರೇಶ್ ಅವರು 2018ರಲ್ಲಿ 11 ಸಾವಿರ ಮತಗಳಿಂದ ಗೆದ್ದಿದ್ದರೆ, 2008ರಲ್ಲಿ ಸುಮಾರು 8 ಸಾವಿರ ಮತಗಳಿಂದ ವಿಜಯ ಸಾಧಿಸಿದ್ದರು.
ಈ ಕ್ಷೇತ್ರದಲ್ಲಿ ಮೊದಲು ಜನತಾದಳವು ಪ್ರಾಬಲ್ಯ ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಡಿಎಸ್ ಸುರೇಶ್ ಹಾಗೂ ಶ್ರೀನಿವಾಸ್ ನಡುವಿನ ಹಾವು ಏಣಿ ಆಟದಲ್ಲಿ ಈಗ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ