Holenarasipur Election 2023 Winner: ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣಗೆ ಅಲ್ಪಮತಗಳ ಅಂತರದ ಗೆಲುವು

|

Updated on: May 13, 2023 | 1:58 PM

HD Revanna of JDS Wins: ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಎಚ್.ಡಿ. ರೇವಣ್ಣ ಯಶಸ್ವಿಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ಸುಮಾರು 3 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶ್ರೇಯಸ್ ಎಂ ಪಟೇಲ್ ವೀರೋಚಿತ ಸೋಲುಂಡಿದ್ದಾರೆ.

Holenarasipur Election 2023 Winner: ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣಗೆ ಅಲ್ಪಮತಗಳ ಅಂತರದ ಗೆಲುವು
ಎಚ್.ಡಿ. ರೇವಣ್ಣ
Follow us on

Holenarasipur Assembly Election Results 2023: ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಎಚ್.ಡಿ. ರೇವಣ್ಣ ಯಶಸ್ವಿಯಾಗಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ಸುಮಾರು 3 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ ಪಟೇಲ್ ವೀರೋಚಿತ ಸೋಲುಂಡಿದ್ದಾರೆ. ಹಾಸನ ರಾಜಕಾರಣದಲ್ಲಿ ಹೆಚ್.ಡಿ. ದೇವೇಗೌಡರ ಪ್ರಬಲ ರಾಜಕೀಯ ಎದುರಾಳಿ ಎನಿಸಿದ್ದ ಪುಟ್ಟಸ್ವಾಮಿಗೌಡರ ಕುಟುಂಬಕ್ಕೆ ಸೇರಿದ ಶ್ರೇಯಸ್ ಎಂ ಪಟೇಲ್ ಈ ಬಾರಿ ಹೊಳೆನರಸೀಪುರ ಕ್ಷೇತ್ರದಲ್ಲಿ ಒಂದು ಹಂತದಲ್ಲಿ ಗೆಲುವು ಸಾಧಿಸಬಹುದು ಎಂಬ ಭಾವನೆಗಳಿದ್ದವು. ಈ ನಿರೀಕ್ಷೆ ಹೆಚ್ಚೂಕಡಿಮೆ ಈಡೇರುವ ಹಂತಕ್ಕೆ ಬಂದಿತ್ತಾದರೂ ಅಂತಿಮವಾಗಿ ರೇವಣ್ಣ ಬಚಾವಾಗಿ ಗೆಲುವಿನ ದಡ ಮುಟ್ಟಿದ್ದಾರೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ

ಈ ಸುದ್ದಿ ಬರೆಯುವ ಹೊತ್ತಿನವರೆಗೆ ಸಿಕ್ಕ ಅಧಿಕೃತ ಮತಗಳ ವಿವರ ಈ ಕೆಳಕಂಡಂತಿದೆ:

  • ಜೆಡಿಎಸ್: ಎಚ್.ಡಿ. ರೇವಣ್ಣ– 83,268 ಮತಗಳು
  • ಕಾಂಗ್ರೆಸ್: ಶ್ರೇಯಸ್ ಎಂ ಪಟೇಲ್– 77,720 ಮತಗಳು
  • ಬಿಜೆಪಿ: ಜಿ. ದೇವರಾಜೇಗೌಡ– 4,452 ಮತಗಳು

ಈ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆಯೇ ನೇರ ಪೈಪೋಟಿ ನಡೆದಿದೆ. ಉಳಿದ ಯಾವ ಅಭ್ಯರ್ಥಿಗೂ ಠೇವಣಿಯೂ ಸಿಕ್ಕಿಲ್ಲ.

 

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ