ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಪಟ್ಟು ಸಡಿಲಿಸಿದ್ದು ಹೇಗೆ? ಮಧ್ಯರಾತ್ರಿ ವಿಡಿಯೋ ಕಾಲ್​​ ಮಾಡಿದ ಸೋನಿಯಾ ಗಾಂಧಿ

|

Updated on: May 18, 2023 | 4:55 PM

ಕಾಂಗ್ರೆಸ್ ಹೈಕಮಾಂಡ್​​​ನ ಸೂತ್ರಗಳಿಗೆ ಒಪ್ಪದ ಹಿನ್ನಲೆ. ಸೋನಿಯಾ ಗಾಂಧಿಯಿಂದ ಗ್ಯಾರೆಂಟಿ ಕೊಡಿಸಲು ಡಿಕೆ ಶಿವಕುಮಾರ್​ ಪಟ್ಟುಹಿಡಿದಿದ್ದರು. ಹಾಗಾಗಿ ಸೋನಿಯಾ ಗಾಂಧಿ ವಿಡಿಯೋ ಕಾಲ್​ ಮಾಡಿ ಸಂಧಾನ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಸ್ಥಾನದ ಪಟ್ಟು ಸಡಿಲಿಸಿದ್ದು ಹೇಗೆ? ಮಧ್ಯರಾತ್ರಿ ವಿಡಿಯೋ ಕಾಲ್​​ ಮಾಡಿದ ಸೋನಿಯಾ ಗಾಂಧಿ
ಡಿ.ಕೆ. ಶಿವಕುಮಾರ್, ಸೋನಿಯಾ ಗಾಂಧಿ
Follow us on

ದೆಹಲಿ: ಸಿದ್ದರಾಮಯ್ಯ ಅವರು ಕರ್ನಾಟಕ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ (DK Shivakumar) ಉಪಮುಖ್ಯಮಂತ್ರಿ ಎಂದು ಖುದ್ದು ಎಐಸಿಸಿ ಅಧಿಕೃತವಾಗಿ ಘೋಷಣೆ ಆಗಿದೆ. ಆದರೆ ಸಿಎಂ ಸ್ಥಾನಕ್ಕೆ ಕಸರತ್ತು ನಡೆಸಿದ್ದ ಡಿಕೆ ಶಿವಕುಮಾರ್​ ಮಾತ್ರ ಸಡನ್ನಾಗಿ ತಮ್ಮ ಪಟ್ಟು ಸಡಿಲಿಸಿದ್ದರು. ಡಿಕೆ ಶಿವಕುಮಾರ್​ ತಮ್ಮ ಪಟ್ಟು ಸಡಿಲಿಸಲು ಆ ಒಂದು ವಿಡಿಯೋ ಕಾಲ್​ ಕಾರಣವಾಗಿದೆ. ಮಧ್ಯ ರಾತ್ರಿ ಡಿಕೆ ಶಿವಕುಮಾರ್​ ಜೊತೆ ಸೋನಿಯಾ ಗಾಂಧಿ ವಿಡಿಯೋ ಕಾಲ್​ ಮಾಡಿ ಮಾತನಾಡಿದ್ದಾರೆ. ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಶಿಮ್ಲಾದಿಂದ ವೇಣುಗೋಪಾಲ್ ಮನೆಗೆ ಸೋನಿಯಾ ಗಾಂಧಿ ವಿಡಿಯೋ ಕಾಲ್​ ಮಾಡಿ, ಸಂಧಾನ ಮಾಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್​​​ನ ಸೂತ್ರಗಳಿಗೆ ಒಪ್ಪದ ಹಿನ್ನಲೆ. ಸೋನಿಯಾ ಗಾಂಧಿಯಿಂದ ಗ್ಯಾರೆಂಟಿ ಕೊಡಿಸಲು ಡಿಕೆ ಶಿವಕುಮಾರ್​ ಪಟ್ಟುಹಿಡಿದಿದ್ದರು. ಹಾಗಾಗಿ ಸೋನಿಯಾ ಗಾಂಧಿ ವಿಡಿಯೋ ಕಾಲ್​ನಲ್ಲಿ ಅರ್ಧ ಗಂಟೆಗಳ ಕಾಲ ಮಾತನಾಡಿದ್ದು ಡಿಕೆ ಶಿವಕುಮಾರ್​ಗೆ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಆಯ್ಕೆ ಬಳಿಕ ಖಾತೆ ಕ್ಯಾತೆ ಶುರು: ಮತ್ತೆ ದಿಲ್ಲಿಗೆ ಡಿಕೆ ಶಿವಕುಮಾರ್-ಸಿದ್ದರಾಮಯ್ಯ

ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಜೊತೆ ಚರ್ಚೆ ಬಳಿಕ ಡಿಕೆ ಶಿವಕುಮಾರ್ ತಮ್ಮ​ ಪಟ್ಟು ಸಡಿಲಿಸಿದ್ದಾರೆ ಎಂದು ಎಐಸಿಸಿ ಉನ್ನತ ಮೂಲಗಳಿಂದ ಟಿವಿ9 ಗೆ ಮಾಹಿತಿ ನೀಡಲಾಗಿದೆ.

ಸಚಿವ ಸ್ಥಾನ ಹಂಚಿಕೆಗೆ ಪ್ಲ್ಯಾನ  

ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಸಡಿಲಿಸಿರವ ಡಿಕೆ ಶಿವಕುಮಾರ್​ ಉಪಮುಖ್ಯಮಂತ್ರಿ ಜೊತೆ ಪ್ರಬಲ ಎರಡು ಖಾತೆಗಳನ್ನು ತಮ್ಮಲ್ಲಿ ಇಟ್ಟುಕೊಳ್ಳುವ ಸಾಧ್ಯತೆಗಳಿವೆ. ಇನ್ನುಳಿದಂತೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಮ್ಮ ಬೆಂಬಲ ಶಾಸಕರಿಗೂ ಸಹ ಮುಖ್ಯ ಖಾತೆಗಳನ್ನು ಕೊಡಿಸಲು ಮತ್ತೊಂದು ಸುತ್ತಿನ ಕಾದಾಟಕ್ಕಿಳಿಯಲಿದ್ದಾರೆ. ಇನ್ನು ಹೈಕಮಾಂಡ್, ಜಾತಿವಾರು ಮತ್ತು ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಿಕೆ ಮಾಡಲು ಪ್ಲ್ಯಾನ ಮಾಡಿಕೊಂಡಿದೆ.

ಇದನ್ನೂ ಓದಿ: ಪಕ್ಷ ಸೋತಾಗ ಸಿಟ್ಟು ಹೊರಹಾಕುವ ಹಕ್ಕು ಕಾರ್ಯಕರ್ತರಿಗಿದೆ; ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದರು ಪ್ರತಾಪ್ ಸಿಂಹ?

ಬೆಂಗಳೂರು ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಗೃಹ, ಬೃಹತ್ ಕೈಗಾರಿಕೆ, ಐಟಿ-ಬಿಟಿ, ಸಮಾಜ ಕಲ್ಯಾಣ ಸೇರಿದಂತೆ ಕೆಲ ಪ್ರಮುಖ ಖಾತೆಗಳಿಗೆ ಪೈಪೋಟಿ ನಡೆಯುವುದು ಸಾಮಾನ್ಯ. ಹಾಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಯಾವೆಲ್ಲ ಬೆಂಬಲಿಗರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:18 pm, Thu, 18 May 23