Hubli Dharwad East Election Results: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಸತತ ಮೂರನೇ ಭಾರಿಯೂ ಜಯ ಗಳಿಸಿದ ಪ್ರಸಾದ್​ ಅಬ್ಬಯ್ಯ

|

Updated on: May 13, 2023 | 9:01 PM

Hubli-Dharwad East Assembly Election Result 2023 Live Counting Updates: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ವೀರಭದ್ರಪ್ಪ ಹಾಲಹರವಿ, ಕಾಂಗ್ರೆಸ್​ನಿಂದ ಪ್ರಸಾದ್​ ಅಬ್ಬಯ್ಯ ಹಾಗೂ ಬಿಜೆಪಿಯಿಂದ ಡಾ. ಕ್ರಾಂತಿ ಕಿರಣ್​ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Hubli Dharwad East Election Results: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಸತತ ಮೂರನೇ ಭಾರಿಯೂ ಜಯ ಗಳಿಸಿದ ಪ್ರಸಾದ್​ ಅಬ್ಬಯ್ಯ
ಡಾ. ಕ್ರಾಂತಿ ಕಿರಣ್, ಪ್ರಸಾದ್​ ಅಬ್ಬಯ್ಯ, ವೀರಭದ್ರಪ್ಪ ಹಾಲಹರವಿ
Follow us on

Hubli-Dharwad East Assembly Election Result 2023: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ (Hubli-Dharwad East Assembly Constituency) ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿಯೂ ಪ್ರಸಾದ್​ ಅಬ್ಬಯ್ಯ ಅವರಿಗೆ ಟಿಕೆಟ್​ ನೀಡಲಾಗಿತ್ತು. ಆ ಮೂಲಕ 32,304 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಡಾ. ಕ್ರಾಂತಿಕಿರಣ ಅವರ ವಿರುದ್ಧ 36 ಸಾವಿರ ಮತಗಳ ಅಂತರದಿಂದ ಪ್ರಸಾದ್​ ಅಬ್ಬಯ್ಯ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಈ ಬಾರಿ ಹೊಸ ಮುಖಕ್ಕೆ ಮಣೆ ಹಾಕಿದ್ದು, ಡಾ. ಕ್ರಾಂತಿ ಕಿರಣ್​ ಎಂಬುವವರಿಗೆ ಟಿಕೆಟ್​​ ನೀಡಿ ಕಣಕ್ಕಿಳಿಸಿತ್ತು. ಮತ್ತೊಂದೆಡೆ ಬಿಜೆಪಿಗೆ ಗುಡ್​ ಬೈ ಹೇಳಿ ಜೆಡಿಎಸ್​​ ಸೇರಿದ್ದ ಹಿರಿಯ ನಾಯಕ ವೀರಭದ್ರಪ್ಪ ಹಾಲಹರವಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ಈ ಬಾರಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ತ್ರಿಕೋನ್​ ಸ್ಪರ್ಧೆ ಏರ್ಪಟ್ಟಿತ್ತು.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿದ್ದ ಪ್ರಸಾದ್​ ಅಬ್ಬಯ್ಯ ಅವರು ಜಯಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಚಂದ್ರಶೇಖರ ಗೋಕಾಕ ಅವರು ಸುಮಾರು 21 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,99, 200 ಮತದಾರರಿದ್ದಾರೆ. 20, 219 ಪರಿಶಿಷ್ಟ ಜಾತಿ, 5, 199 ಪರಿಶಿಷ್ಟ ಪಂಗಡ, 81, 274ಕ್ಕೂ ಹೆಚ್ಚು ಮುಸ್ಲಿಂ ಮತದಾರರು ಇದ್ದಾರೆ. ಒಟ್ಟು ಅರ್ಹ ಮತದಾರರಲ್ಲಿ ಶೇ 10.17 ರಷ್ಟು ಮತದಾರರಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 2:46 am, Sat, 13 May 23