ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಜಾರಿಗೆ, ಹಿಂದೂಗಳ ಬಗ್ಗೆ ಮಾತಾಡಿದರೆ ಎನ್​ಕೌಂಟರ್: ಯತ್ನಾಳ್

|

Updated on: May 01, 2023 | 4:43 PM

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಜಾರಿಗೆ ತರುತ್ತೇವೆ. ದೇಶ ಹಾಗೂ ಹಿಂದೂಗಳ ವಿರುದ್ಧ ಮಾತನಾಡಿದರೆ ಢಂ ಢಂ ಖಚಿತ, ಕುಯ್​ಕುಯ್​ ಅಂದ್ರೆ ಎನ್​ಕೌಂಟರ್ ಮಾಡುವುದು ನಿಶ್ಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಜಾರಿಗೆ, ಹಿಂದೂಗಳ ಬಗ್ಗೆ ಮಾತಾಡಿದರೆ ಎನ್​ಕೌಂಟರ್: ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Follow us on

ಧಾರವಾಡ: ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮಾದರಿಯನ್ನು ಜಾರಿ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. ಹಿಂದೂ ಮತ್ತು ದೇಶದ ವಿರುದ್ಧ ಯಾರಾದರು ಮಾತಾಡಿದರೆ ಢಂಢಂ ಖಚಿತ, ಕುಯ್​ಕುಯ್​ ಅಂದರೆ ಎನ್​ಕೌಂಟರ್ ನಿಶ್ಚಿತ, ರೋಡ್ ಮೇಲೆಯೇ ಡಿಷ್ಕ್ಯಾಂ ಅಂತ ಹೇಳಿದ್ದಾರೆ. ಜಿಲ್ಲೆಯ ಕುಂದಗೋಳ ಕ್ಷೇತ್ರದ ಹಿರೇಹರಕುಣಿ ಗ್ರಾಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಹಿಂದೂ ಹುಲಿ ಎಂದೇ ಹೆಸರಾಗಿರುವ ವಿಜಯಪುರ ನಗರ ಕ್ಷೇತ್ರದ ಶಾಸಕ ಯತ್ನಾಳ್ ಅವರ ಕೈಗೆ ಮೈಕ್ ಸಿಕ್ಕರೆ ಸಾಕು ಬೆಂಕಿ ಮಾತುಗಳು ಹೊರಬೀಳುತ್ತವೆ. ಇದೀಗ ಹಿರೇಹರಕುಣಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಹಾಗೂ ದೇಶದ ವಿರುದ್ಧ ಮಾತನಾಡುವವರಿಗೆ ಎನ್​ಕೌಂಟರ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Encounter In UP: ಯುಪಿಯಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಎನ್​ಕೌಂಟರ್​ಗಳು, 63 ಕ್ರಿಮಿನಲ್​ಗಳ ಹತ್ಯೆ

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾದರಿ ಕರ್ನಾಟಕದಲ್ಲಿ ಜಾರಿಗೆ ಬರಲಿದೆ. ಉತ್ತರ ಪ್ರದೇಶದಲ್ಲಿ ಅಣ್ಣತಮ್ಮಂದಿರ (ಮುಸ್ಲಿಂ ಮಾಫಿಯಾ) ಎನ್​ಕೌಂಟರ್ ಆಯ್ತು. ಹೀಗಾಗಿ ಕೆಲವರು ಜೈಲಿನಿಂದ ಹೊರಬರಲು ಹೆದರುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತದೆ. ಹಾದಿಬೀದಿಯಲ್ಲಿ ರೌಡಿಗಳ ಹೆಣಗಳು ಉರುಳುತ್ತಲೇ ಇರುತ್ತದೆ. ಕರ್ನಾಟಕದಲ್ಲಿ ಯಾರಾದರು ಹಾರಾಡಿದರೆ ಎನ್​ಕೌಂಟರ್ ಖಚಿತ ಎಂದರು.

ಟಿಪ್ಪು ಸುಲ್ತಾನ ಹರಾಂ ಕೋರ್ ಎಂದ ಯತ್ನಾಳ್

ಟಿಪ್ಪು ಸುಲ್ತಾನ ಹರಾಂ ಕೋರ್ ಎಂದ ಯತ್ನಾಳ್, ಟಿಪ್ಪು ಸುಲ್ತಾನ್ ಲಕ್ಷಂತಾಂತರ ಹಿಂದೂಗಳನ್ನು ಕೊಂದಿದ್ದಾನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಟಿಪ್ಪು ಫೋಟೋ ತೆಗೆದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್​ ಫೋಟೋ ಹಾಕುತ್ತೇವೆ ಎಂದರು.

ಮೂರು ಬಿಟ್ಟವರು ಕಾಂಗ್ರೆಸ್​ ಪಕ್ಷದಲ್ಲಿ ಇದ್ದಾರೆ: ಯತ್ನಾಳ್

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಮೂರು ಬಿಟ್ಟವರು ಕಾಂಗ್ರೆಸ್​ ಪಕ್ಷದಲ್ಲಿ ಇದ್ದಾರೆ. ಇವತ್ತು ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಗ ಮಾತನಾಡಿದ್ದಾನೆ. ಎಲ್ಲ ಬಿಟ್ಟು ನಿಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್​ನಲ್ಲಿದ್ದಾರೆ. ದೇಶದ ಜನರ ಆಶೀರ್ವಾದದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಇಂತಹ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ, ಈ ಬಗ್ಗೆ ಯೋಚನೆ ಮಾಡಿ ಎಂದು ಆಕ್ರೋಶ ಹೊರಹಾಕಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Mon, 1 May 23