ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಿಂದ ಬೀದರ್ಗೆ ಹೋಗತ್ತಿದ್ದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆ ಹಿನ್ನೆಲೆ ಮರಳಿ ಆಳಂದ ಪಟ್ಟಣಕ್ಕೆ ಮರಳಿದ ಕಾದು ಹೋಗುವ ಸ್ಥಿತಿ ಎದರಾಯಿತು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಿಂದ ಟೇಕಾಫ್ ಆಗಿದ್ದ ಹೆಲಿಕಾಪ್ಟರ್, ಬೀದರ್ ಏರ್‌ಬೇಸ್‌ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಮಳೆ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿದೆ.
ಆಳಂದ ಪಟ್ಟಣದಿಂದ ಟೇಕಾಫ್ ಆದ ಯೋಗಿ ಇದ್ದ ಹೆಲಿಕಾಪ್ಟರ್ ಕೇವಲ 10 ನಿಮಿಷದಲ್ಲೇ ಆಳಂದ ಪಟ್ಟಣಕ್ಕೆ ವಾಪಸ್ಸಾಗಿದೆ.
ಆಳಂದ ಪಟ್ಟಣದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ನಲ್ಲಿಯೇ ಕುಳಿತಿದ್ದರು. ಬೀದರ್ ಏರ್ಬೇಸ್ನಿಂದ ಲ್ಯಾಂಡಿಗ್ ಕ್ಲಿಯರನ್ಸ್ ಸಿಗುವವರಗೆ ಆಳಂದ ಪಟ್ಟಣದಲ್ಲೇ ಇದ್ದರು.
ಲ್ಯಾಂಡಿಗ್ ಕ್ಲಿಯರನ್ಸ್ ಸಿಕ್ಕ ನಂತರ ಯೋಗಿ ಅವರು ಬೀದರ್ನ ಏರ್ಬೇಸ್ಗೆ ತೆರಳಿ ಅಲ್ಲಿಂದ ಲಕ್ನೋಗೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸಿದರು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಭಾಗಿಯಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪರ ಮತಯಾಚನೆ ನಡೆಸಿದರು.
Published On - 6:47 pm, Sun, 30 April 23