AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಇಬ್ಭಾಗ ರಾಜಕಾರಣ ಮಾಡುತ್ತಾ ಕಾಂಗ್ರೆಸ್ ಪತನಗೊಂಡಿದೆ: ಜೆಪಿ ನಡ್ಡಾ

ಹುಬ್ಬಳ್ಳಿಯಲ್ಲಿ ನಡೆದ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ಆಡಳಿತದ ಬಗ್ಗೆ ಟೀಕಿಸಿದರು. ಅಲ್ಲದೆ, ಪ್ರಧಾನಿ ಮೋದಿ ಅವರ ಡೈನಾಮಿಕ್ ನಾಯಕತ್ವದಲ್ಲಿ ದೇಶ ಸದೃಢವಾಗಿದೆ ಅಂತ ಬಣ್ಣಿಸಿದರು.

ದೇಶದಲ್ಲಿ ಇಬ್ಭಾಗ ರಾಜಕಾರಣ ಮಾಡುತ್ತಾ ಕಾಂಗ್ರೆಸ್ ಪತನಗೊಂಡಿದೆ: ಜೆಪಿ ನಡ್ಡಾ
ಹುಬ್ಬಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ
Rakesh Nayak Manchi
|

Updated on: Apr 18, 2023 | 8:31 PM

Share

ಹುಬ್ಬಳ್ಳಿ: ಭಾರತದಲ್ಲಿ ಸುಮಾರು 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್​ ವಿಭಜನಾ ನೀತಿಯನ್ನು ಅನುಸರಿಸಿತ್ತು. ಹೀಗಾಗಿ ಸಮಾಜದಲ್ಲಿ ಇಬ್ಭಾಗ ಮಾಡುತ್ತಾ ಕಾಂಗ್ರೆಸ್ (Congress) ಪಕ್ಷ ಪತನಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹೇಳಿದ್ದಾರೆ. ನಗರದಲ್ಲಿರುವ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ನಡೆದ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್​​ನಲ್ಲಿ ಜಗಳ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಆದರೆ ಬಿಜೆಪಿ ಪ್ರಾದೇಶಿಕ‌ ಅಸ್ಮಿತೆಯನ್ನು ಗೌರವಿಸುತ್ತದೆ. ಪ್ರಧಾನಿ ಮೋದಿ (Narendra Modi) ಡೈನಾಮಿಕ್ ನಾಯಕತ್ವದಲ್ಲಿ ದೇಶ ಸದೃಢವಾಗಿದೆ. ಭಾರತದ ರಾಜನೀತಿಯ ಸಂಸ್ಕೃತಿ ಮೋದಿ ಬದಲಾಯಿಸಿದ್ದಾರೆ. ಸಿಎಎಫ್​ಸಿಇಟಿ‌ 13 ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದರು.

ಮೋದಿ ಅವರ ಪ್ರಧಾನ ಮಂತ್ರಿ ಆದ ನಂತರ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಹೇಳಿದ ಜೆಪಿ ನಡ್ಡಾ, ಮೋದಿ ಅವರು ನೇಪಾಳ,‌ ಚೀನಾ ದೇಶಗಳಿಗೂ ಭೇಟಿ ನೀಡಿದ್ದಾರೆ. ನೆರೆ ದೇಶಗಳಿಗೆ ತುರ್ತು ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಭಾರತ – ಪಾಕಿಸ್ತಾನ ಬಗ್ಗೆ ಜೋರಾದ ಚರ್ಚೆ ನಡೀತಿತ್ತು. ಆದರೆ ಈಗ ಭಾರತದ ಹೆಸರು ಬಂದಾಗ ಪಾಕಿಸ್ತಾನದ ಹೆಸರು ಪ್ರಸ್ತಾಪಿಸಲ್ಲ. ಪ್ರಧಾನಿ ಮೋದಿ ಇದೆಲ್ಲವನ್ನೂ ಬದಲಾಯಿಸಿದ್ದಾರೆ. ಭಾರತ ಜಿ-20 ಗೆ ಎಲ್ಲರನ್ನೂ ಸ್ವಾಗತಿಸುತ್ತಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದಾಗ 23 ಸಾವಿರ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ಜೀವ ರಕ್ಷಿಸಿಕೊಂಡು ತಾಯ್ನಾಡಿಗೆ ವಾಪಸ್ಸಾದರು. ಇದೆಲ್ಲಕ್ಕೂ ಪ್ರಧಾನಿ ಮೋದಿ ಕಾರಣ ಎಂದರು.

ಕಾಂಗ್ರೆಸ್ ನಾಯಕರಿಗೆ ಆರ್ಥಿಕತೆಯ ಎಬಿಸಿಡಿ ಗೊತ್ತಿಲ್ಲ: ಜೆಪಿ ನಡ್ಡಾ

ಭಾರತ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಜಿಡಿಪಿ ವಿಚಾರದಲ್ಲಿಯೂ ಯೂರೋಪ್ ದೇಶಗಳಿಗಿಂತ ಭಾರತ ಮುಂದಿದೆ ಎಂದು ಹೇಳಿದ ಜೆಪಿ ನಡ್ಡಾ, ಕಾಂಗ್ರೆಸ್ ನಾಯಕರಿಗೆ ಆರ್ಥಿಕತೆಯ ಎಬಿಸಿಡಿ ಗೊತ್ತಿಲ್ಲ. ಬರೀ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ಕೋವಿಡ್ ಕಾರಣದಿಂದ ಒಂದಷ್ಟು ತೊಡಕಾಗಿದೆ. ಐಎಂಎಫ್ ವರದಿ ಪ್ರಕಾರ, ದೇಶದ ಬಡತನ ಶೇ.1 ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದರು.

ಇದನ್ನೂ ಓದಿ: PM Modi: ಕರ್ನಾಟಕದಲ್ಲಿ ಗುಜರಾತ್ ಮಾದರಿ, 72 ಹೊಸ ಮುಖ, ಪ್ರಧಾನಿ ಮೋದಿ –ಅಮಿತ್​ ಶಾ ಲೆಕ್ಕಾಚಾರ ಏನು?

ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಲಾಗಿದೆ. ಸಿಎಎಫ್​ಸಿಇಟಿ‌ 13 ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ ಜೆಪಿ ನಡ್ಡಾ, ಒಂಬತ್ತು ತಿಂಗಳಲ್ಲಿ ಎರಡು ವ್ಯಾಕ್ಸಿನ್ ತಂದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆದರೆ ವಿರೋಧ ಪಕ್ಷದವರು ಮೋದಿ ವ್ಯಾಕ್ಸಿನ್ ಅಂತ ಟೀಕಿಸಿದರು. ಅದಾಗ್ಯೂ, ಅವರು ಕದ್ದು ಮುಚ್ಚಿ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡರು. ದೇಶದಲ್ಲಿ ಶೇ. 100 ಪ್ರತಿಶತ ವ್ಯಾಕ್ಸಿನ್ ಹಾಕಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ ಅನೇಕ ದೇಶಗಳಿಗೆ ಲಸಿಕೆಗಳನ್ನು ವಿತರಿಸಿದೆ. ಭಾರತ ಈಗ ಬೇಡುವ ಇಂಡಿಯಾ ಆಗಿ ಉಳಿದಿಲ್ಲ, ಕೊಡುವ ಇಂಡಿಯಾ ಆಗಿದೆ ಎಂದರು.

ಬಿಜೆಪಿಗೆ ಶಕ್ತಿ ತುಂಬುವ ಕೆಲಸ ನೀವೆಲ್ಲಾ ಮಾಡಬೇಕು: ಪ್ರಲ್ಹಾದ್ ಜೋಶಿ

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಭಾರತೀಯ ಜನತಾ ಪಕ್ಷ ಸಾಕಷ್ಟು ಸದೃಢವಾಗಿ ಬೆಳೆದಿದೆ. ವಿಶ್ವದ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಪರಿವರ್ತನೆಗೊಂಡಿದೆ. ಜೆ.ಪಿ.ನಡ್ಡಾ ಅವರು ಪಕ್ಷವನ್ನು ಸದೃಢವಾಗಿ ಮುನ್ನಡೆಸುತ್ತಿದ್ದಾರೆ, ಹಲವು ರಾಜ್ಯಗಳಲ್ಲಿ ಸತತವಾಗಿ ಗೆಲ್ಲುತ್ತಿದ್ದೇವೆ ಎಂದರು. ಮೋದಿ ನೇತೃತ್ವದಲ್ಲಿ ಈ ಭಾಗದಲ್ಲಿ ಬದಲಾವಣೆ ತರುತ್ತಿದ್ದೇವೆ. ಹೀಗಾಗಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ನೀವೆಲ್ಲಾ ಮಾಡಬೇಕು. ಮೀಸಲಾತಿ ಎಂಬ ಜೇನುಗೂಡಿಗೆ ಕೈಹಾಕಿ ಜೇನುತುಪ್ಪ ನೀಡಿದ್ದೇವೆ. ಆದರೆ ನಾವು ಜೇನು ಹುಳುಗಳನ್ನು ಕಚ್ಚಿಸಿಕೊಂಡಿಲ್ಲ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ