ಸಂಧಾನ ಸಭೆ ವಿಫಲ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್​​

|

Updated on: Apr 16, 2023 | 12:42 PM

Jagadish Shettar Resignಜಗದೀಶ್ ಶೆಟ್ಟರ್‌ ಜೊತೆ ಬಿಜೆಪಿ ನಾಯಕರ ಗೌಪ್ಯ ಸಭೆ ಅಂತ್ಯವಾಗಿದ್ದು, ಸಭೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಸಂಧಾನ ಸಭೆ ವಿಫಲ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್​​
Follow us on

ಧಾರವಾಡ: ಈ ಬಾರಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಟಿಕೆಟ್​ ಕೈತಪ್ಪುವ ಭೀತಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Jagadish Shettar) ಅವರು ಬಿಜೆಪಿಗೆ​ ರಾಜೀನಾಮೆ ಘೋಷಿಸಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು(ಏಪ್ರಿಲ್ 15) ರಾತ್ರಿ ಜಗದೀಶ್ ಶೆಟ್ಟರ್​ ಮನವೊಲಿಸುವ ಪ್ರಯತ್ನ ನಡೆಸಿದರು. ಆದ್ರೆ, ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್​ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದರು.

ಇದನ್ನೂ ಓದಿ: ಬಿಜೆಪಿಯ ಮತ್ತೋರ್ವ ಶಾಸಕ ರಾಜೀನಾಮೆ ಘೋಷಣೆ, ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಬಿಜೆಪಿ ನಾಯಕರ ಜೊತೆ ಸಂಧಾನ ಸಭೆ ಬಳಿಕ ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್ ಶೆಟ್ಟರ್‌ ಮತ್ತೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಿಸಿದರು.  ನಾಳೆ (ಏಪ್ರಿಲ್ 16) ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಕೊಟ್ಟ ಬಳಿಕ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿ ಒಂದು ಷಡ್ಯಂತ್ರ ನಡೆಯುತ್ತಿದೆ. ಯಡಿಯೂರಪ್ಪ 80 ವರ್ಷ, ಅವರು ಚುನಾವಣೆ ರಾಜಕೀಯ ನಿವೃತ್ತಿ ಆಗಿದ್ದಾರೆ. ಇವಾಗಿರುವ ಸೀನಿಯರ್ ಲೀಡರ್ ನಾನು. ನನ್ನ ವಿರುದ್ದ ಕುತಂತ್ರ, ಷಡ್ಯಂತ್ರ ನಡೆದಿದೆ. ನನ್ನ ಈ ರೀತಿ ಟ್ರಿಟ್ ಮಾಡಿರುವುದು ನನಗೆ ಶಾಂಕಿಂಗ್. ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡುತ್ತೇನೆ ಅಂತಾರೆ. ಆದ್ರೆ ಶೆಟ್ಟರ್ ಗೆ ಇರಲಿಲ್ಲ. ನಾನು ಇವತ್ತೆ ಅವರಿಗೆ ನಾನು ಶಾಸಕನಾಗುತ್ತೇನೆ ಎಂದು ಹೇಳಿದ್ದೇನೆ. ಇದರ ಹಿಂದೆ ಯಾರ ಮಾಡಿದಾರೆ ಎನ್ನುವುದು ನಾನು ಹೇಳಲ್ಲ. ಇನ್ನು ಎಲ್ಲವನ್ನೂ ತೆರೆ ಮೇಲೆ ನೋಡಿ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಾನು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನದು ಯಾವುದೇ ಭ್ರಷ್ಟಾಚಾರ, ಸೆಕ್ಸ್‌ ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್ ಘೋಷಿಸಿಲ್ಲ ಎಂದು ಭಾವುಕರಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ಶೆಟ್ಟರ್ ಅವರಿಂದ ಅವರಿಗೆ ಆತಂಕ ಇದೆ. ಎಲ್ಲರಿಗೂ ಬಹಳ ಫೀಲ್ ಆಗಿದೆ. ಲಿಂಗಾಯತರಿಗೆ ಹೀಗೆ ಆಗಿದೆ ಎಂದು ಸಮಾಜದ ವ್ಯಕ್ತಿಗಳಿಗೆ ನೋವಾಗಿದೆ. ನಾನು ಹೊರ ಹೋದ ಮೇಲೆ ಅಸಮಾಧಾನಿತರ ಸಂಪರ್ಕ ಮಾಡಬಹುದು. ಈಗಾಗಲೇ ಕೆಲವರು ಸಂಪರ್ಕ ಮಾಡಿದ್ದಾರೆ. ಮೂರು ತಿಂಗಳಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮೊದಲಿನ ಬಿಜೆಪಿಯಾಗಿ ಉಳಿದಿಲ್ಲ. ಬಿಜೆಪಿ ಕೆಲವು ವ್ಯಕ್ತಿಗಳಿಂದ ಹಾಳಾಗುತ್ತಿದೆ. ಸ್ವಂತ ಹಿತಾಸಕ್ತಿಗಾಗಿ ಪಕ್ಷ ಹಾಳಾಗುತ್ತಿದೆ ಎಂದು ಹೆಸರು ಹೇಳದೇ ಬಿಜೆಪಿಯ ಕೆಲ ನಾಯಕರ ವಿರುದ್ಧ ಕಿಡಿಕಾರಿದರು.

ಟಿಕೆಟ್ ಇಲ್ಲ ಅಂದಾಗ ನನ್ನ ಮನಸ್ಸಿಗೆ ಆಘಾತ ಅಗಿತ್ತು. ಯಾರ ನನ್ನ ಬಳಿ ಬಂದರೂ ಅದಕ್ಕೆ ನನಗೆ ಉತ್ತರ ಕೊಡಲಿಲ್ಲ. ನನಗೆ ರಾಜಕೀಯ ನಿವೃತ್ತಿ ಆಗಬೇಕು ಅಂದ್ರೆ ಗೌರವಯುತವಾಗಿ ಹೋಗುತ್ತಿದ್ದೆ. ನಮ್ಮಂತ ಲೀಡರ್ ರನ್ನು ಯುಸ್ ಆ್ಯಂಡ್ ಥ್ರೋ ಎಂಬಂತೆ ಮಾಡಿದರು. ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಹಾಗೇ ಕುಟುಂಬದ ಸದಸ್ಯರಿಗೆ ಟಿಕೆಡ್ ಕೊಡುವುದಕ್ಕೆ ಓಕೆ ಅಂದ್ರು. ಇದಕ್ಕೆ ನಾನು ಜಗದೀಶ್ ಶೆಟ್ಟರ್​ಗೆ ಯಾಕೆ ಇಲ್ಲ ಎಂದು ನಾನು ಧರ್ಮೆಂದ್ರ ಪ್ರಧಾನ ಅವರಿಗೆ ಕೇಳಿದೆ. ಅದಕ್ಜೆ ಉತ್ತರ ಇಲ್ಲ. ನಾನು ಮಂತ್ರಿ ಆಗಬೇಕು ಎನ್ನುವ ಆಸೆ ಇಲ್ಲ ಎಂದರು.

ಮತ್ತಷ್ಟು ಕರ್ನಾಟಕ ವಿಧಾನಸಭೆ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 pm, Sat, 15 April 23