ನಾಮಪತ್ರ ಸಲ್ಲಿಸಿದ ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಒಟ್ಟು ಆಸ್ತಿ ವಿವರ ಎಷ್ಟು ಗೊತ್ತಾ?

ಬಾಗಲಕೋಟೆ ಜಿಲ್ಲೆಯ ಮುಧೋಳ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರಗಳನ್ನು ಕೂಡ ಘೋಷಿಸಿದ್ದಾರೆ. ಹಾಗಾದರೆ ಕಾರಜೋಳ ಅವರು ಚರಾಸ್ತಿ ಮತ್ತು ಸ್ಥಿರಾಸ್ತಿ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಮಪತ್ರ ಸಲ್ಲಿಸಿದ ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಒಟ್ಟು ಆಸ್ತಿ ವಿವರ ಎಷ್ಟು ಗೊತ್ತಾ?
ಗೋವಿಂದ ಎಂ ಕಾರಜೋಳ ಆಸ್ತಿ ವಿವರ
Follow us
Rakesh Nayak Manchi
|

Updated on:Apr 15, 2023 | 10:17 PM

ಬಾಗಲಕೋಟೆ: ಜಿಲ್ಲೆಯ ಮುಧೋಳ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ (Govind M Karjol) ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತನ್ನ ವೈಯಕ್ತಿಕ ಹಾಗೂ ತನ್ನ ಕಟುಂಬದ ಸ್ವತ್ತುಗಳ ವಿವರ (Assets Details) ನೀಡಿದ್ದಾರೆ. ಕಾರೋಳ ಪತ್ನಿ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲ. ಹಾಗೆಯೇ ಸಾಲವೂ ಮಾಡಿಲ್ಲ. ಗೋವಿಂದ ಕಾರಜೋಳ ಅವರು ಬಂಗಾರದ ಆಭರಣವನ್ನೂ ಹೊಂದಿಲ್ಲ. ಇದರ ಹೊರತಾಗಿ ಕಾರಜೋಳ ಅವರು 5 ಲಕ್ಷ ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕುಗಳ ಖಾತೆಯಲ್ಲಿ 2.28 ಕೋಟಿ ರೂ. ಹೊಂದಿದ್ದಾರೆ. 1.23 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

2018ರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಸಮಯಲ್ಲಿ ಘೋಷಣೆ ಮಾಡಿದ ಆಸ್ತಿ ವಿವರದಲ್ಲಿ, ಗೋವಿಂದ ಕಾರಜೋಳ 5 ಲಕ್ಷ ನಗದು ಹೊಂದಿದ್ದರು. ಮಾತ್ರವಲ್ಲದೆ, ವಿವಿಧ ಬ್ಯಾಂಕುಗಳ ಖಾತೆಗಳಲ್ಲಿ 47.51 ಲಕ್ಷ ರೂ. ಹಾಗೂ 96 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರು. ಪ್ರಸ್ತುತ ಕಾರಜೋಳ ಅವರ ಪತ್ನಿ ಶಾಂತಾದೇವಿ 2 ಲಕ್ಷ ರೂ. ನಗದು ಹೊಂದಿದ್ದು, 101 ತೊಲಿ ಬಂಗಾರದ ಆಭರಣ, 5 ಕೆಜಿ ಬೆಳ್ಳಿ ಹೊಂದಿದ್ದಾರೆ. 26 ಲಕ್ಷ ಮೌಲ್ಯದ ಸ್ಥಿರಾಸ್ತಿ ಕೂಡ ಹೊಂದಿದ್ದಾರೆ. 2018ರ ಸಮಯದಲ್ಲಿ ಶಾಂತಾದೇವಿ 2 ಲಕ್ಷ ನಗದು ಹೊಂದಿದ್ದರು, 101 ತೊಲಿ ಬಂಗಾರದ ಆಭರಣ, 5 ಕೆಜಿ ಬೆಳ್ಳಿ ಹೊಂದಿದ್ದರು. 18 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರು.

ಇದನ್ನೂ ಓದಿ: ಸ್ವಂತ ವಾಹನವಿಲ್ಲ, ಕೋಟಿಗಟ್ಟಲೇ ಸಾಲ: ಇಲ್ಲಿದೆ ‘ಕಾಮನ್‌ ಮ್ಯಾನ್‌’ ಸಿಎಂ ಬಸವರಾಜ ಬೊಮ್ಮಾಯಿ ಆಸ್ತಿ ವಿವರ

ನಾಮತ್ರ ಸಲ್ಲಿಕೆ ನಂತರ ಕಣ್ಣೀರು ಸುರಿಸಿದ ಕಾರಜೋಳ

ನಾಮಪತ್ರ ಸಲ್ಲಿಕೆ ನಂತರ ಸುದ್ದಿಗೋಷ್ಠಿ ನಡೆಸಿದ ಗೋವಿಂದ ಕಾರಜೋಳ ಅವರು, ತನ್ನ ರಾಜಕೀಯ ಜೀವನ ಆರಂಣಕ್ಕೆ ಕಾರಣರಾದವರನ್ನು ನೆನೆದು ಕಣ್ಣೀರಿಟ್ಟರು. 1994ರಲ್ಲಿ ಅಂದು ಜನತಾದಳ ಮುಖಂಡ ಎಸ್ ಎಸ್ ಮಲಘಾಣ ಅವರು ವಿಜಯಪುರಕ್ಕೆ ಬಂದು ರಾಜಕೀಯಕ್ಕೆ ಕರೆತಂದು ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದರು. ಅವರನ್ನು ನೆನಪಿಸಿಕೊಳ್ಳಲೇ ಬೇಕು. ದಿ. ರಾಮಕೃಷ್ಟ ಹೆಗಡೆ, ಎಸ್ ಆರ್ ಬೊಮ್ಮಾಯಿ ಅವರನ್ನೂ ನೆನಪಿಸಿಕೊಳ್ಳಬೇಕು. 29 ವರ್ಷ ಮುಧೋಳದ ಜನರು ಪ್ರೀತಿ ವಿಶ್ವಾಸದಿಂದ ಇದ್ದಾರೆ. ನಾನು ಈ ಸಲದಿಂದ ಸ್ಪರ್ಧೆ ಬೇಡ ಎಂದಿದ್ದೆ. ಜನರ ಬಯಕೆ ಇದೆ ನಿಲ್ಲುವಂತೆ ಒತ್ತಾಯ ಮಾಡಿದರು. ಇಂದು ಮಲಘಾಣ ಸಾಹೇಬರು ಬದುಕಿರಬೇಕಿತ್ತು. ನನ್ನ ಮೊದಲ ಚುನಾವಣೆಯಲ್ಲಿ ಮಲಘಾಣ ಇದ್ದವರು. ಇದು ನನ್ನ ಕೊನೆ ಚುನಾವಣೆ ಅವರು ಬದುಕಿರಬೇಕಿತ್ತು ಎಂದು ಹೇಳುತ್ತಲೇ ಕಣ್ಣೀರು ಹಾಕಿದರು. ಅಲ್ಲದೆ, ಐದು ವರ್ಷ ಶಕ್ತಿ ಇರುವರೆಗೂ ಕೆಲಸ ಮಾಡುವೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Sat, 15 April 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ