ಕಣ್ಣೀರಿಡುತ್ತಲೇ ಬೆಂಬಲಿಗರನ್ನು ಸಮಾಧಾನಿಸುತ್ತಿರುವ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್​ಎ ರಾಮದಾಸ್

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಇದುವರೆಗೆ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿಲ್ಲ. ಯಾರಿಗೆ ಮಣೆ ಹಾಕುತ್ತದೆ ಎಂಬ ಕುತೂಲ ಕ್ಷೇತ್ರದ ಜನರಲ್ಲಿದೆ. ಸದ್ಯ ಟಿಕೆಟ್ ಸಿಗುತ್ತೋ ಇಲ್ವೋ ಅಂತ ಚಿಂತೆಯಲ್ಲಿರುವ ಎಸ್​ಎ ರಾಮದಾಸ್, ಬೆಂಬಲಿಗರ ಎದುರು ಕಣ್ಣೀರು ಹಾಕಿದ್ದಾರೆ.

ಕಣ್ಣೀರಿಡುತ್ತಲೇ ಬೆಂಬಲಿಗರನ್ನು ಸಮಾಧಾನಿಸುತ್ತಿರುವ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್​ಎ ರಾಮದಾಸ್
ಬೆಂಬಲಿಗರೊಂದಿಗೆ ಬಿಜೆಪಿ ಶಾಸಕ ಎಸ್​ಎ ರಾಮದಾಸ್
Follow us
Rakesh Nayak Manchi
|

Updated on:Apr 15, 2023 | 8:35 PM

ಮೈಸೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಸ್ಪರ್ಧಿಸುವ ಅಭ್ಯರ್ಥಿಗಳ 2ನೇ ಹಂತದ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಇಂದು ರಾತ್ರಿ ಅಥವಾ ನಾಳೆ 3ನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯ ಬಿಡುಗಡೆಯಾದ ಎರಡೂ ಪಟ್ಟಿಗಳಲ್ಲಿ ಜಿಲ್ಲೆಯ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬ ಕುತೂಲ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಇದೆ. ಸದ್ಯ ಟಿಕೆಟ್ ಸಿಗುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿರುವ ಶಾಸಕ ಎಸ್​ಎ ರಾಮದಾಸ್ (SA Ramadas), ಬೆಂಬಲಿಗರ ಎದುರು ಕಣ್ಣೀರು ಹಾಕಿದ್ದಾರೆ.

ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮೂರು ಬಾರಿ ಸಚಿವ ಸ್ಥಾನ ಕೈತಪ್ಪಿತು. ಹೊರಗಿನಿಂದ ಬಂದವರಿಗೆ ಅವಕಾಶ ಕೊಡಲಿ ಎಂದು ಸುಮ್ಮನಾಗಿದ್ದೆ. ಪಕ್ಷ ಸಂಘಟನೆ ಜೊತೆಗೆ ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ಎನ್.ಆರ್.ಕ್ಷೇತ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದೇ ನನ್ನ ಕೊನೆ ಚುನಾವಣೆ ಎಂದು ವರಿಷ್ಠರ ಬಳಿ ಹೇಳಿಬಂದಿದ್ದೇನೆ. ವರಿಷ್ಠರು ನನಗೆ ಟಿಕೆಟ್​ ನೀಡುವ ಸಾಧ್ಯತೆಯಿದೆ ಎಂದು ತಾನೂ ಕಣ್ಣೀರು ಹಾಕುತ್ತಾ ಕಾರ್ಯಕರ್ತರನ್ನೂ ಸಮಾಧಾನ ಪಡಿಸುತ್ತಿದ್ದಾರೆ.

ಪಕ್ಷ ನನಗೆ ತಾಯಿ ಇದ್ದ ಹಾಗೆ. ನನಗೆ ತಾಳ್ಮೆ ಇದೆ. ಮಾಧ್ಯಮ ವರದಿಗಳು ಎಲ್ಲಾ ಸರ್ವೆಗಳು ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಇದೆ. ಕಾರ್ಯಕರ್ತರ ಮಾತೇ ಅಂತಿಮ. ನನ್ನ ಮನವಿ ಕೇಂದ್ರದ ಮಂತ್ರಿ ಜೊತೆ ಹೇಳಿ ಬಂದಿದ್ದೇನೆ. ಇದು ನನ್ನ ಕೊನೆ ಚುನಾವಣೆ ಎಂದು ಹೇಳಿ ಬಂದಿದ್ದೇನೆ. ಇನ್ನೂ ಉನ್ನತ ಅವಕಾಶ ಇದೆ ಎಂದಿದ್ದಾರೆ. ಅದ್ಯಾವುದು ಬೇಡ ಎಂದು ಹೇಳಿ ಬಂದಿದ್ದೇನೆ. ಇನ್ನೂ ಕಾಲಾವಕಾಶ ಇದೆ. ಜನರು ನನ್ನ ಅಣ್ಣ ಎಂದು ಸ್ವೀಕಾರ ಮಾಡಿದ್ದಾರೆ ಎಂದು ರಾಮದಾಸ್ ಅವರು ಹೇಳಿದರು.

ದಾರಿಯಲ್ಲಿ ಬರುವಾಗ ದೊಡ್ಡ ಪಕ್ಷದ ನಾಯಕರು ಪಕ್ಷಕ್ಕೆ ಬರುವಂತೆ ಕರೆ ಮಾಡಿದ್ದರು. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕಾರ್ಯಕರ್ತರ ಜೊತೆಯಲ್ಲಿ ಮಾತನಾಡಬೇಕಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಚರ್ಚೆ ಮಾಡಬೇಕು. ನಾನು ಮುಂದೆ ಚುನಾವಣೆ ನಿಲ್ಲುವುದಿಲ್ಲ. ಟಿಕೆಟ್ ಅನೌನ್ಸ್ ಆಗಲಿ ಬಿಡಿ. ಟಿಕೆಟ್ ನೀಡದಿದ್ದರೆ ಕಾರ್ಯಕರ್ತರು ತೆಗೆದುಕೊಳ್ಳುವ ‌ನಿರ್ಧಾರಕ್ಕೆ ಬದ್ದವಾಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: BJP’s First Candidate List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ನಾನು ಪಕ್ಷದ ನಾಯಕರನ್ನು ಭೇಟಿ ಮಾಡಿ ಇತ್ತೀಚಿನ ಎಲ್ಲಾ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ. ಕೊನೆಯ ಚುನಾವಣೆಯಲ್ಲಿ ಗೆದ್ದು ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇನೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಟಿಕೆಟ್ ನೀಡದಿದ್ದರೆ ಪಕ್ಷದ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗುತ್ತೇನೆ. ಆದರೆ ನಾನು ಯಾವ ಪಕ್ಷಕ್ಕೂ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಮದಾಸ್ ಅವರು ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇವರ ಪೋಷಕರು ಮೊದಲಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತತೆ ಹೊಂದಿದ್ದವರಾಗಿದ್ದರು. ಮಾತ್ರವಲ್ಲದೆ, ಮೋದಿ ಅವರು ರಾಮದಾಸ್ ಅವರ ಮನೆಯಲ್ಲಿ ಎರಡು ದಿನ ನೆಲೆಸಿದ್ದರು. ಅಂದಿನಿಂದ ರಾಮದಾಸ್ ಅವರ ತಾಯಿ ಮಾಡಿದ ಅಡುಕೆ ಅಂದರೆ ಮೋದಿಗೆ ಬಲು ಇಷ್ಟ. ಹೀಗೆ ಇದ್ದ ಆಪ್ತತೆ ರಾಮದಾಸ್ ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ.

ರಾಮದಾಸ್ ಕುಟುಂಬ ಮತ್ತು ಪ್ರಧಾನಿ ಮೋದಿ ಕುಟುಂಬದ ನಡುವೆ ದಶಕಗಳಿಂದಲೂ ಸಹೋದರತ್ವ ಬಾಂಧವ್ಯ ಹೊಂದಿದೆ. ರಾಮದಾಸ್ ಮನೆಗೆ ಮೋದಿ ಭೇಟಿ ಮಾಡಿದ್ದು ಮಾತ್ರವಲ್ಲದೆ, ರಾಮದಾದ್ ಪೋಷಕರು ಗುಜರಾತ್​ಗೆ ತೆರಳಿ ಮೋದಿ ನಿವಾಸಕ್ಕೆ ಭೇಟಿ ನೀಡಿದ್ದರು. ಕೆಲವು ರಾಜಕೀಯ ನಾಯಕರ ಮೋದಿ ಭೇಟಿಗೆ ಸೇತುವೆಯಾಗಿ ನಿಲ್ಲುವವರೇ ರಾಮದಾಸ್ ಎಂದು ಹೇಳಲಾಗುತ್ತಿದೆ. ಹೀಗೆ ಮೋದಿ ಮತ್ತು ರಾಮದಾಸ್ ಕುಟುಂಬದ ನಡುವಿನ ಬಾಂಧವ್ಯ ಕೇವಲ ರಾಜಕೀಯಕ್ಕೆ ಸೀಮಿತವಾಗಿರದೆ ಕೌಟುಂಬಿಕ ಬಾಂಧವ್ಯದಲ್ಲೂ ಬೆಸೆದುಕೊಂಡಿದೆ. ಇಷ್ಟೊಂದು ಆಪ್ತತೆ ಇರುವ ರಾಮದಾಸ್​ಗೆ ಈ ಬಾರಿ ಟಿಕೆಟ್ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Sat, 15 April 23

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ