JDS Manifesto for Bengaluru: ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್

ಜೆಡಿಎಸ್ ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಪುಸ್ತಕ ಬಿಡುಗಡೆ ಮಾಡಿದೆ. ಪದ್ಮನಾಭನಗರ ನಿವಾಸದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೆಗೌಡ ಜನತಾ ಪ್ರಣಾಳಿಕೆ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ.

JDS Manifesto for Bengaluru: ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್

Updated on: May 06, 2023 | 11:13 AM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು(Karnataka Assembly Elections 2023), ಮತದಾನಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ತಮ್ಮ ತಮ್ಮ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿ ಮತದಾರರಿಗೆ ಹಲವು ಭರವಸೆಗಳನ್ನು ನೀಡಿವೆ. ಇದರ ನಡುವೆ ಈಗ ಜೆಡಿಎಸ್ ಒಂದು ಹೆಜ್ಜೆ ಮುಂದಿಟ್ಟು ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಪುಸ್ತಕ ಬಿಡುಗಡೆ ಮಾಡಿದೆ(JDS Manifesto for Bengaluru). ಪದ್ಮನಾಭನಗರ ನಿವಾಸದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೆಗೌಡ(HD DeveGowda) ಜನತಾ ಪ್ರಣಾಳಿಕೆ ಪುಸ್ತಕವನ್ನ ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್​ನ ಪ್ರಣಾಳಿಕೆಯಲ್ಲಿ ಮುಖ್ಯವಾಗಿ 8 ಭರವಸೆಗಳನ್ನು ನೀಡಲಾಗಿದೆ. ಅವು ಹೀಗಿವೆ

  1. ಸಾಮಾಜಿಕ ಭದ್ರತೆಗಳು ಮತ್ತು ಆರೋಗ್ಯ ಶ್ರೀರಕ್ಷೆ
  2. ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
  3. ಶಿಕ್ಷಣ
  4. ಆರೋಗ್ಯ
  5. ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
  6. ನಗರದಲ್ಲಿ ಹಸಿರಿಕರಣ ಮತ್ತು ಅರಣ್ಯೀಕರಣ
  7. ನಗರದಲ್ಲಿನ ಕಣಿವೆ, ಕೆರೆಗಳ ಸಂರಕ್ಷಣೆ, ಕಾಲುವೆಗಳ ಪುನಶ್ಚೇತನ
  8. ಕೋರಮಂಗಲ – ಚೆಲ್ಲಗಘಟ್ಟ ವ್ಯಾಲಿ ಏತ ನೀರಾವರಿ ಯೋಜನೆಯ ಆಧುನಿಕರಣ

    ಜೆಡಿಎಸ್ ಪ್ರಣಾಳಿಕೆ

    ಇದನ್ನೂ ಓದಿ: Karnataka Assembly Polls; ನಮ್ಮಿಂದ ಸಾಧ್ಯವಾಗಬಹುದ ಕಾರ್ಯಕ್ರಮಗಳನ್ನಷ್ಟೇ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ: ಸಿಎಂ ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ

ಇನ್ನು ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಬಗ್ಗೆ ಹೆಚ್​ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದ ಪ್ರಣಾಳಿಕೆ ಇದೆ. ನಾನು, ಇಬ್ರಾಹಿಂ, ಹೆಚ್​ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದೀವಿ. ಬೆಂಗಳೂರಿಗೆ ಸಂಬಂಧಿಸಿದ ಪ್ರಣಾಳಿಕೆ ವಿವರವಾಗಿ ‌ಇದರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದೆ. ಎಲ್ಲ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಯಾವುದೇ ವ್ಯಕ್ತಿಗೆ ಯಾವುದೇ ಅಸಡ್ಡೆ ತೋರಿಸಿಲ್ಲ. ಬೆಂಗಳೂರಿಗೆ ನಾವು ಏನು ಮಾಡ್ತೀವಿ. ಹಿಂದೆ ಬೆಂಗಳೂರಿಗೆ ಮಾಡಿ ತೋರಿಸಿದ್ದೇವೆ. ಮುಂದೆ ಸಹ ಕೆಲಸ ಮಾಡಲು ಬದ್ದರಾಗಿದ್ದೇವೆ. ಬೆಂಗಳೂರು ಬೃಹತ್ ಆಕಾರವಾಗಿ ಬೆಳೆದಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನಾನು ಸಿಎಂ ಆಗಿದ್ದ ಕಾಲಕ್ಕೂ ಈಗ ಬದಲಾವಣೆ ಆಗಿದೆ. ಬಹಳ ಸಮಸ್ಯೆಗಳಿಗೆ ಕುಮಾರಸ್ವಾಮಿ ಏಳು ಉಪನಗರ ನಿರ್ಮಾಣ ಮಾಡೋಕೆ‌ ರೆಡಿ ಇದ್ರು. ಆದ್ರೆ ಮಾಡೋಕೆ‌ ಬಿಡಲಿಲ್ಲ. ಎಲ್ಲವನ್ನೂ ಪರಿಶೀಲನೆ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಬೆಂಗಳೂರುಗೆ ಇದು ಎರಡನೇ ಪ್ರಣಾಳಿಕೆ. ಇದರ ಅವಶ್ಯಕತೆ ಇದೆ ಎಂದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:51 am, Sat, 6 May 23