ಸಂಸತ್ತಿನಲ್ಲಿ ನನಗೆ ಕಣ್ಣೀರು ಹಾಕಿಸಿದ ವ್ಯಕ್ತಿಗೆ ನಾನು ಕಣ್ಣೀರು ತರಿಸಬೇಕು, ಆಗಲೇ ನನ್ನ ಆತ್ಮಕ್ಕೆ ಶಾಂತಿ: ಮಾಜಿ ಪ್ರಧಾನಿ ದೇವೇಗೌಡ

|

Updated on: Apr 24, 2023 | 6:04 PM

ತುಮಕೂರಿನ ಮಧುಗಿರಿ ಕ್ಷೇತ್ರದಲ್ಲಿ ಭಾವುಕರಾಗಿ ಮಾತನಾಡಿದ ದಳಪತಿ ಹೆಚ್​ಡಿ ದೇವೇಗೌಡ, ಪಾರ್ಲಿಮೆಂಟ್​ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದ ಆ ನಾಯಕನ ಕಣ್ಣಲ್ಲಿ ನೀರು ಬರಿಸಬೇಕು, ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತ ಎಂದಿದ್ದಾರೆ.

ಸಂಸತ್ತಿನಲ್ಲಿ ನನಗೆ ಕಣ್ಣೀರು ಹಾಕಿಸಿದ ವ್ಯಕ್ತಿಗೆ ನಾನು ಕಣ್ಣೀರು ತರಿಸಬೇಕು, ಆಗಲೇ ನನ್ನ ಆತ್ಮಕ್ಕೆ ಶಾಂತಿ: ಮಾಜಿ ಪ್ರಧಾನಿ ದೇವೇಗೌಡ
ಹೆಚ್​ ಡಿ ದೇವೇಗೌಡ
Follow us on

ತುಮಕೂರು: ಸಂಸತ್ತಿನಲ್ಲಿ ಕಣ್ಣೀರು ಹಾಕಿಸಿದ ನಾಯಕನಿಗೆ ಕಣ್ಣೀರು ತರಿಸಿದರಷ್ಟೇ ತನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ನಡೆದಿದ್ದನ್ನು ಮೆಲುಕು ಹಾಕಿ ನೋಡಲೂ ಹೋಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ತುಮಕೂರಿನ ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರು ಕೂಡ ಹೇಳೋಕೆ ಹೋಗಲ್ಲ. ಆದರೆ ಸಂಸತ್ತಿನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರು. ಆ ನಾಯಕನ ಕಣ್ಣಲ್ಲಿ ನೀರು ತರಿಸಬೇಕು, ಆಗ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

ನನ್ನನ್ನು ಮುಖ್ಯಮಂತ್ರಿ ಮಾಡಲು 11 ಸ್ಥಾನಗಳನ್ನು ತುಮಕೂರು ಕೊಟ್ಟಿತ್ತು. ಈಗ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಯಾವ ದೇವೇಗೌಡ ಪಾರ್ಲಿಮೆಂಟ್​ನಲ್ಲಿ ನಿಂತು ಕಣ್ಣೀರು ಹಾಕುವ ಕೆಟ್ಟ ಸಂದರ್ಭ ತಂದರೋ ಆ ನಾಯಕನ ಕಣ್ಣಲಿ ನೀರು ಬರಿಸಬೇಕು. ಅವತ್ತು ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಭಾವುಕರಾಗಿ ಹೇಳುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನ ಸೋಲಿಸುವಂತೆ ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ: ಪದ್ಮನಾಭನಗರ ಕ್ಷೇತ್ರದಲ್ಲಿ ಅಖಾಡಕ್ಕಿಳಿದ ಹೆಚ್​ಡಿ ದೇವೇಗೌಡ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ

ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಕಾಂಗ್ರೆಸ್​ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ದಳಪತಿ, ಜೆಡಿಎಸ್​ಗೆ 20 ಸ್ಥಾನಗಳಷ್ಟೇ​ ಬರುತ್ತದೆ ಅಂತಾ ಕಾಂಗ್ರೆಸ್​ನವರು ಹೇಳುತ್ತಾರೆ. ಬಹುಶಃ ಅವರಿಗೆ ಉತ್ತರ ಕೊಡಲು ಮಧುಗಿರಿ ಒಂದೇ ಸಾಕು. ನನ್ನನ್ನು ಸಿಎಂ ಮಾಡಲು ತುಮಕೂರಿನಲ್ಲಿ 11 ಸ್ಥಾನ ಗೆಲ್ಲಿಸಿಕೊಟ್ಟಿದ್ದೀರಿ ಎಂದರು.

ಮಧುಗಿರಿಯ ಕೈಮರದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ವೀರಭದ್ರಯ್ಯ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಧುಗಿರಿ ಜಿಲ್ಲೆಯಾಗಬೇಕೆನ್ನುವುದು ವೀರಭದ್ರಯ್ಯ ಕನಸಾಗಿದೆ. ಏಕಶಿಲೆಯನ್ನ ಟೂರಿಸ್ಟ್ ಜಾಗ, ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡುವುದು ಅವರ ಕನಸಾಗಿದೆ. ಮುಸ್ಲಿಂ, ಗೊಲ್ಲ, ದಲಿತರಿಗೆ ಮೀಸಲಾತಿ ಕೊಟ್ಟಿದ್ದೇನೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Mon, 24 April 23