ಧಾರವಾಡದಲ್ಲಿ ಬಂಡಾಯ ಶಮನ ಮಾಡುವಲ್ಲಿ ಸಕ್ಸಸ್ ಆದ ಟ್ರಬಲ್ ಶೂಟರ್ ಪ್ರಲ್ಹಾದ ಜೋಶಿ : ಇಬ್ಬರು ಬಂಡಾಯಗಾರರ ನಾಮಪತ್ರ ವಾಪಸ್
Nomination: ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರವಾಗಿ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಲು ಬಸವರಾಜ ಕೊರವರ್ ನಾಮಪತ್ರ ಸಲ್ಲಿಸಿದ್ದರು. ಇಂದು ಕೊರವಾರ್ ಅವರ ನಿವಾಸಕ್ಕೆ ತೆರಳಿದ ಜೋಶಿಯವರು ಉಮೇದುವಾರಿಕೆ ಮರಳಿ ಪಡೆಯುವಂತೆ ಮನವೊಲಿಸಿದರು.
ಧಾರವಾಡ: ಪ್ರಸಕ್ತ ಅಸೆಂಬ್ಲಿ ಚುನಾವಣೆಗಾಗಿ (Karnataka Asssembly Elections 2023) ಧಾರವಾಡ ಗ್ರಾಮೀಣ ಹಾಗೂ ಧಾರವಾಡ ಸೆಂಟ್ರಲ್ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಇಬ್ಬರು ನಾಮಪತ್ರ (Nomination) ಹಿಂಪಡೆಯುವಂತೆ ಮಾಡುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಯಶಸ್ವಿಯಾಗಿದ್ದಾರೆ (Success).
ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರವಾಗಿ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಯಲು ಬಸವರಾಜ ಕೊರವರ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಇಂದು ಧಾರವಾಡದ ದೊಡ್ಡನಾಯಕನಹಳ್ಳಿ ಬಡಾವಣೆಯಲ್ಲಿರುವ ಕೊರವಾರ್ ಅವರ ನಿವಾಸಕ್ಕೆ ತೆರಳಿದ ಜೋಶಿಯವರು ಉಮೇದುವಾರಿಕೆ ಮರಳಿ ಪಡೆಯುವಂತೆ ಮನವೊಲಿಸಿದರು.
ಧಾರವಾಡದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಅಮೃತ ದೇಸಾಯಿ ಅವರ ವಿರುದ್ಧ ಕೊರವಾರ್ ಪಕ್ಷೇತರವಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಸಕ್ಸಸ್ ಆದ ಜೋಶಿಯವರು ಧಾರವಾಡ ಗ್ರಾಮೀಣ ಮತ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯದ ಟ್ರಬಲ್ ನ್ನು ಶೂಟ್ ಮಾಡೋ ಮೂಲಕ ಟ್ರಬಲ್ ಶೂಟರ್ ಆದರು.
ಕೇವಲ ಧಾರವಾಡ ಗ್ರಾಮಾಂತರ ಕ್ಷೇತ್ರದಲ್ಲಷ್ಟೇ ಅಲ್ಲ, ಬಿಜೆಪಿಯಿಂದ ಬಂಡಾಯವೆದ್ದು ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಹನುಮಂತ ಸಾ ನಿರಂಜನ ಅವರ ಮನವೊಲಿಸುವಲ್ಲಿಯೂ ಜೋಶಿಯವರು ಯಶಸ್ವಿಯಾದರು.
ಹನುಮಂತ ಸಾ ನಿರಂಜನ ಅವರು ಎಸ್.ಎಸ್.ಕೆ ಸಮಾಜದ ಪ್ರಮುಖ ಧುರೀಣರಾಗಿದ್ದು ಜೋಶಿಯವರ ಮಾತಿಗೆ ತಲೆ ಬಾಗಿ ಪಕ್ಷೇತರವಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದಾರೆ. ಇದರೊಂದಿಗೆ ಧಾರವಾಡದಲ್ಲಿ ಬಿಜೆಪಿ ಪಾಲಿಗೆ ಎದುರಾಗಿದ್ದ ಟ್ರಬಲ್ ಶೂಟ್ ಮಾಡುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸಕ್ಸಸ್ ಆಗಿದ್ದಾರೆ.