Karnataka Assembly Polls; ಸಿದ್ದರಾಮಯ್ಯ ಇವತ್ತು ಕೂಡ ಕ್ಷಮೆ ಕೇಳಿಲ್ಲ, ಅವರು ಲಿಂಗಾಯತರ ಕ್ಷಮೆ ಯಾಚಿಸಲೇಬೇಕು: ಪ್ರಲ್ಹಾದ್ ಜೋಶಿ
ಇದೇ ತಿಂಗಳು 29 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯ ಕುಡಚಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಎಂದು ಜೋಶಿ ಹೇಳಿದರು.
ಹುಬ್ಬಳ್ಳಿ: ನಗದಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದರು. ಧಾರವಾಡ, ಗದಗ ಮತ್ತು ಹಾವೇರಿ-ಮೂರು ಜಿಲ್ಲೆಗಳಲ್ಲಿನ ಪಕ್ಷದ ಪದಾಧಿಕಾರಿ (office-bearers), ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿರುವ ಬಿಜೆಪಿ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಗುವುದು ಎಂದು ಜೋಶಿ ಹೇಳಿದರು. ಈ ಜಿಲ್ಲೆಗಳಲ್ಲಿ (ಮುಂಬೈ ಕರ್ನಾಟಕ ಪ್ರಾಂತ್ಯ) ಪಕ್ಷದ ಸ್ಟ್ರೈಕ್ ರೇಟ್ ಚೆನ್ನಾಗಿದೆ ಎಂದು ಅವರು ಕ್ರಿಕೆಟ್ ಭಾಷೆಯಲ್ಲಿ ಹೇಳಿದರು. ಸಿದ್ದರಾಮಯ್ಯ (Siddaramaiah) ಲಿಂಗಾಯತ ಸಮುದಾಯದ ಬಗ್ಗೆ ಮಾಡಿರುವ ಕಾಮೆಂಟ್ ಪ್ರಸ್ತಾಪಿಸಿ ಅವರು ಇವತ್ತು ಕೂಡ ಸಮುದಾಯದ ಕ್ಷಮೆ ಯಾಚಿಸಿಲ್ಲ, ಅವರು ಕ್ಷಮೆ ಕೇಳಲೇಬೇಕು ಅಂತ ಹೇಳಿದರು. ಇದೇ ತಿಂಗಳು 29 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯ ಕುಡಚಿಯಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಲಿದ್ದಾರೆ, ಅದೇ ಜಿಲ್ಲೆಯಲ್ಲಿ ಮತ್ತೊಂದು ಚುನಾವಣಾ ರ್ಯಾಲಿ ನಡೆಸುವಂತೆ ಪ್ರಧಾನಿಗೆ ಮನವಿ ಮಾಡಲಾಗುವುವದೆಂದು ಜೋಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ