Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ

|

Updated on: May 13, 2023 | 3:50 PM

ವಿನಯ್​​ ಕುಮಾರ್ ಸೂರಕೆ ಅವರಿಗೆ ಪೈಪೋಟಿ ನೀಡಿದ್ದು ಗುರ್ಮೆ ಸುರೇಶ್ ಶೆಟ್ಟಿ. ವಿನಯ್​​ ಕುಮಾರ್ ಸೂರಕೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ 2018ರಲ್ಲಿ ಕಾಪುವಿನಲ್ಲಿ ಕಾಂಗ್ರೆಸ್​​ ವಿರೋಧ ಅಲೆಗಳಿದ್ದು. ಈ ಬಾರಿ ಮತ್ತೆ ಕಾಂಗ್ರೆಸ್​ಗೆ ಕಾಪು ಜನ ಮಣೆ ಹಾಕಬಹುದ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಕಮಲಕ್ಕೆ ಮತ ನೀಡಿದ್ದಾರೆ.

Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ
ಗುರ್ಮೆ ಸುರೇಶ್ ಶೆಟ್ಟಿ
Follow us on

ಕಾಪು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇಂದು ಪ್ರಕಟಗೊಂಡಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ (Kapu Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿತ್ತು. ಇಲ್ಲಿ ಕಾಂಗ್ರೆಸ್​​ ಪ್ರಭಾವ ಹೆಚ್ಚು ಎಂದು ಹೇಳಲಾಗಿತ್ತು, ಆದರೆ ಈ ಬಾರಿ ಕೂಡ ಬಿಜೆಪಿಯೇ ಗೆದ್ದಿದೆ. ಬಿಜೆಪಿ ಭಾರೀ ಗೆಲ್ಲುವು ಸಾಧಿಸಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತ ವಿನಯ್​​ ಕುಮಾರ್ ಸೂರಕೆ, ಈ ಬಾರಿ ಮತ್ತೆ ಸ್ಪರ್ಧಿಸಿದ್ದು ಮತ್ತೆ ಸೋತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಲಾಲಾಜಿ ಮಂಡಲ್​​ ಗೆಲುವು ಸಾಧಿಸಿದರು. ಆದರೆ ಈ ಬಾರಿ ವಿನಯ್​​ ಕುಮಾರ್ ಸೂರಕೆ ಅವರಿಗೆ ಪೈಪೋಟಿ ನೀಡಿದ್ದು ಗುರ್ಮೆ ಸುರೇಶ್ ಶೆಟ್ಟಿ. ವಿನಯ್​​ ಕುಮಾರ್ ಸೂರಕೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ 2018ರಲ್ಲಿ ಕಾಪುವಿನಲ್ಲಿ ಕಾಂಗ್ರೆಸ್​​ ವಿರೋಧ ಅಲೆಗಳಿದ್ದು. ಈ ಬಾರಿ ಮತ್ತೆ ಕಾಂಗ್ರೆಸ್​ಗೆ ಕಾಪು ಜನ ಮಣೆ ಹಾಕಬಹುದ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಕಮಲಕ್ಕೆ ಮತ ನೀಡಿದ್ದಾರೆ. ಆದರೂ ಎರಡು ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆದಿದೆ.

ಇನ್ನೂ ಇಲ್ಲಿ ಬಿಜೆಪಿ ಅಭ್ಯರ್ಥಿಯು ಕಳೆದ ಚುನಾವಣೆಯಲ್ಲಿ 10 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದರು, ಆದರೆ ಲಾಲಾಜಿ ಮಂಡನ್​​ ಹೇಳಿಕೊಳ್ಳುವಷ್ಟು ಕೆಲಸ ಮಾಡಿಲ್ಲ ಎಂಬ ಮಾತು ಇಲ್ಲಿತ್ತು. ಈ ಕಾರಣಕ್ಕೆ ಬಿಜೆಪಿ ಈ ಬಾರಿ ಜಾತಿ ಲೆಕ್ಕಚಾರ ಹಾಗೂ ಸಂಘಟನಾ ಶಕ್ತಿಗೆ ಅನುಗುಣವಾಗಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೇಟ್​ ನೀಡಿತ್ತು , ಇನ್ನೂ ಕಾಂಗ್ರೆಸ್​​ನಿಂದ ಪ್ರಬಲ ಅಭ್ಯರ್ಥಿಯಾಗಿರುವ ವಿನಯ್​​ ಕುಮಾರ್ ಸೂರಕೆ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.

ಇದನ್ನೂ ಓದಿ: Molakalmuru Election 2023 Winner: ಬಿಜೆಪಿ ವಿರುದ್ಧ ಕಾಂಗ್ರೆಸ್​ನ ಗೋಪಾಲಕೃಷ್ಣಗೆ ಗೆಲುವು

ಈ ಬಾರಿಯ ಜೆಡಿಎಸ್​​ನಿಂದ ಸಬೀನಾ ಸಮದ್​​ ಸ್ಪರ್ಧಿಸುತ್ತಿದ್ದು. ಸಬೀನಾ ಸಮದ್​​ ಕಾಪುವಿನಲ್ಲಿ ಪ್ರಬಲ ಅಭ್ಯರ್ಥಿ ಅಲ್ಲದಿದ್ದರು, ಮುಸ್ಲಿಂ ಸಮುದಾಯದ ಮತಗಳು ಇವರ ಪರ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕಾಪುವಿನಲ್ಲಿ ಕಾಂಗ್ರೆಸ್​​ ಮತ್ತು ಬಿಜೆಪಿ ಹೆಚ್ಚು ಪೈಪೋಟಿ ನೀಡುತ್ತಿರುವ ಕಾರಣ ಭಾರೀ ಅಂತರದಲ್ಲಿ ಜೆಡಿಎಸ್​​​ ಸೋತಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ