ಪ್ರಧಾನಿ ಮೋದಿ ಪ್ರಚಾರದ ಬಳಿಕ ಬಿಜೆಪಿಗೆ ಬೆಂಬಲ ಹೆಚ್ಚಾಗಿದೆ; ಪ್ರಹ್ಲಾದ್ ಜೋಶಿ

|

Updated on: May 08, 2023 | 4:03 PM

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಮಾಡಿದ ಬಳಿಕ ಚಿತ್ರಣ ಬದಲಾಗಿದೆ. ಬಿಜೆಪಿಗೆ ಬೆಂಬಲ ಹೆಚ್ಚಾಗಿದ್ದು, ಪಕ್ಷದ ಗ್ರಾಫ್ ಮತ್ತಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರಚಾರದ ಬಳಿಕ ಬಿಜೆಪಿಗೆ ಬೆಂಬಲ ಹೆಚ್ಚಾಗಿದೆ; ಪ್ರಹ್ಲಾದ್ ಜೋಶಿ
ಪ್ರಧಾನಿ ಮೋದಿ ಪ್ರಚಾರದ ಸಂಗ್ರಹ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣಾ ಪ್ರಚಾರ ಮಾಡಿದ ಬಳಿಕ ಚಿತ್ರಣ ಬದಲಾಗಿದೆ. ಬಿಜೆಪಿಗೆ ಬೆಂಬಲ ಹೆಚ್ಚಾಗಿದ್ದು, ಪಕ್ಷದ ಗ್ರಾಫ್ ಮತ್ತಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆಯ ಸ್ಥಾನಕ್ಕಿಂತಲೂ 10-15 ಸೀಟ್ ಬಿಜೆಪಿಗೆ ಜಾಸ್ತಿಯಾಗಲಿದೆ. ಈ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಬಿಜೆಪಿ ನಾಯಕರು ರಾಜ್ಯದೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಉಡುಪಿಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಇದು ಕೇವಲ ಕರ್ನಾಟಕ ಚುನಾವಣೆಯಲ್ಲ, ದೇಶದ ಚುನಾವಣೆ. ಮಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ಜನರು ನೆಲೆಸಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಭೇಟಿ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಬಿಜೆಪಿಗೆ ಬಹುಮತ ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಉಡುಪಿಯ ಬೈಂದೂರಿನಲ್ಲಿ ಅಣ್ಣಾಮಲೈ ಅವರು ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ ಪರ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಪಕ್ಷದ ಧೋರಣೆ ಏನು ಅನ್ನೋದಕ್ಕೆ ಗುರುರಾಜ ಗಂಟಿಹೊಳೆ ಮಾದರಿ. ಸಾಮಾನ್ಯ ಕಾರ್ಯಕರ್ತ ಶಾಸಕನಾಗುವ ಅವಕಾಶ ಪಡೆದಿದ್ದಾರೆ. ದೊಡ್ಡ ಅಂತರದಲ್ಲಿ ಗಂಟಿಹೊಳೆ ಜಯಗಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Karnataka Polling Booth: ಕರ್ನಾಟಕ ವಿಧಾನಸಭಾ ಚುನಾವಣಾ ಮತಗಟ್ಟೆ ವಿವರಗಳನ್ನು ತಿಳಿಯುವುದು ಹೇಗೆ?

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್​, ಜೆಡಿಎಸ್ ಪರಸ್ಪರ ಬೈದಾಡಿಕೊಂಡರು. ಫಲಿತಾಂಶದ ನಂತರ ನಾಚಿಕೆ ಬಿಟ್ಟು ಒಂದಾಗಿ ಸರ್ಕಾರ ರಚನೆ ಮಾಡಿದರು. ಆದರೆ ಆ ಸರ್ಕಾರ ಬಹಳ ಕಾಲ ಉಳಿಯಲಿಲ್ಲ ಎಂದು ಮಂತ್ರವಾಡಿ ಗ್ರಾಮದಲ್ಲಿ ಬೊಮ್ಮಾಯಿ ಹೇಳಿದ್ದಾರೆ.

ನಂತರ ಅನೇಕ ಶಾಸಕರು ನಮ್ಮ ಪಕ್ಷಕ್ಕೆ ಬಂದರು, ನಾವು ಸರ್ಕಾರ ರಚಿಸಿದೆವು. ನಮ್ಮ ಸರ್ಕಾರ ಬಂದ ಬಳಿಕ ಕೊರೊನಾ ಸೋಂಕು ಬಂತು. ಕೊವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದೆವು. ಮೋದಿ ಸರ್ಕಾರ ಜನರಿಗೆ ಉಚಿತವಾಗಿ ಲಸಿಕೆ ನೀಡಿತು. ಇದರಿಂದ ರಾಜ್ಯವನ್ನು ಕೊರೊನಾದಿಂದ ರಕ್ಷಣೆ ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Mon, 8 May 23