AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Polling Booth: ಕರ್ನಾಟಕ ವಿಧಾನಸಭಾ ಚುನಾವಣಾ ಮತಗಟ್ಟೆ ವಿವರಗಳನ್ನು ತಿಳಿಯುವುದು ಹೇಗೆ?

ರಾಜ್ಯ ವಿಧಾಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು, ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮತಗಟ್ಟೆ ವಿವರ ತಿಳಿದುಕೊಳ್ಳುವುದು ಹೇಗೆಂಬ ಮಾಹತಿ ಇಲ್ಲಿದೆ.

Karnataka Polling Booth: ಕರ್ನಾಟಕ ವಿಧಾನಸಭಾ ಚುನಾವಣಾ ಮತಗಟ್ಟೆ ವಿವರಗಳನ್ನು ತಿಳಿಯುವುದು ಹೇಗೆ?
ಸಾಂದರ್ಭಿಕ ಚಿತ್ರImage Credit source: Wikimedia Commons
ಗಣಪತಿ ಶರ್ಮಾ
| Edited By: |

Updated on:May 08, 2023 | 3:39 PM

Share

ರಾಜ್ಯ ವಿಧಾಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. 224 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು (lection Commission of India) ಪ್ರತಿಯೊಬ್ಬ ಮತದಾರನ ಎಪಿಕ್ ಸಂಖ್ಯೆಯನ್ನು (EPIC number) ಬಿಡುಗಡೆ ಮಾಡಿದೆ. ಮತದಾನ ಮಾಡುವುದಕ್ಕಾಗಿ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಜತೆಗೆ, ಮತದಾನ ಮಾಡುವ ಸ್ಥಳ ಎಲ್ಲಿ ಎಂಬುದೂ ಒಳಗೊಂಡಂತೆ ಇತರ ಮಾಹಿತಿಗಳನ್ನು ಎಪಿಕ್ ಸಂಖ್ಯೆಯ ಸಹಾಯದಿಂದ ತಿಳಿಯಬಹುದಾಗಿದೆ. ಈ ಬಾರಿ ಸುಮಾರು 5.05 ಕೋಟಿ ಮತದಾರರು ಇದ್ದು ಈ ಪೈಕಿ 2.50 ಕೋಟಿ ಮಹಿಳಾ ಮತದಾರರಿದ್ದಾರೆ.

‘ಚುನಾವಣಾ’ ಮೊಬೈಲ್ ಆ್ಯಪ್

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸುವ ಉದ್ದೇಶದಿಂದ ಚುನಾವಣಾ ಆಯೋಗವು ‘ಚುನಾವಣಾ ಮೊಬೈಲ್ ಆ್ಯಪ್’ ಅಭಿವೃದ್ಧಿಪಡಿಸಿದೆ. ಮತದಾರರ ಅನುಕೂಲಕ್ಕಾಗಿ ಈ ಆ್ಯಪ್​ನಲ್ಲಿ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳು ದೊರೆಯುವಂತೆ ಮಾಡಲಾಗಿದೆ. ಮತದಾನದ ಸ್ಥಳ, ಮತದಾನದ ಪ್ರದೇಶಕ್ಕೆ ತೆರಳಲು ಇರುವ ಮಾರ್ಗಗಳು, ಅಭ್ಯರ್ಥಿಗಳ ವಿವರ, ಚುನಾವಣಾ ಅಧಿಕಾರಿಗಳ ವಿವರ, ವಾಹನ ನಿಲುಗಡೆ ವಿವರ ಹಾಗೂ ಇತರ ತುರ್ತು ಸೇವೆಗಳ ಬಗ್ಗೆ ಆ್ಯಪ್​ನಲ್ಲಿ ಮಾಹಿತಿ ದೊರೆಯುತ್ತದೆ.

ಇದು ಹೊಸ ಆ್ಯಪ್​ ಅಲ್ಲ. ಈ ಹಿಂದಿನ ಚುನಾವಣೆಗಳಲ್ಲೇ ಸುಮಾರು 3 ಲಕ್ಷ ಮತದಾರರು ಈ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿಕೊಂಡಿದ್ದಾರೆ.

ಈ ಕೆಳಗಿನ ಹಂತಗಳನ್ನೂ ನೀವು ಅನುಸರಿಸಬಹುದು;

  • ವೋಟರ್ ಹೆಲ್ಪ್​ಲೈನ್ ಆ್ಯಪ್​ ಬಳಸಿ
  • https://voterportal.eci.gov.in ಪೋರ್ಟಲ್​ಗೆ ಭೇಟಿ ನೀಡಿ
  • ECIPSspace>EPIC Number/space> ಈ ಮಾದರಿಯಲ್ಲಿ ಟೈಪ್ ಮಾಡಿ 1950 ಸಂಖ್ಯೆಗೆ ಎಸ್​ಎಂಎಸ್ ಕಳುಹಿಸಿ

ಚುನಾವಣಾ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಗೆಲುವಿಗಾಗಿ ಪೈಪೋಟಿ ನಡೆಸುತ್ತುರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು, ಚುನಾವಣಾ ಪ್ರಣಾಳಿಕೆಯನ್ನೂ ಘೋಷಣೆ ಮಾಡಿವೆ. ಜನಾದೇಶ ಏನಿರಲಿದೆ ಎಂಬುದಷ್ಟೇ ಈಗ ಕುತೂಹಲದ ವಿಷಯ.

ಇದನ್ನೂ ಓದಿ: New Voter ID Card: ವೋಟರ್ ಐಡಿ ಕಳೆದು ಹೋದರೆ ಡುಪ್ಲಿಕೇಟ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನ ಗಳಿಸಿದ್ದವು. ಕಾಂಗ್ರೆಸ್ ಬಹುಮತ ಗಳಿಸದಿದ್ದರೂ ಒಂದು ವರ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿತ್ತು. ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Mon, 8 May 23

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More