Karnataka Assembly Election Result 2023: ಕರ್ನಾಟಕ ಚುನಾವಣೆ ಫಲಿತಾಂಶ ದಿನಾಂಕ, ಮತ ಎಣಿಕೆ ಸಮಯದ ವಿವರ ಇಲ್ಲಿದೆ

Karnataka Polls 2023 Results Date: ಕರ್ನಾಟಕ ವಿಧಾನಸಭೆ ಚುನಾವಣೆ 2023 ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇನ್ನು, ರಾಜಕೀಯ ಪಕ್ಷಗಳ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಮತದಾರರು ಕಾಯುತ್ತಿದ್ದಾರೆ. ಹಾಗಿದ್ದರೆ ಚುನಾವಣೆ ಫಲಿತಾಂಶ ಯಾವಾಗಾ? ಇಲ್ಲಿದೆ ಮಾಹಿತಿ.

Karnataka Assembly Election Result 2023: ಕರ್ನಾಟಕ ಚುನಾವಣೆ ಫಲಿತಾಂಶ ದಿನಾಂಕ, ಮತ ಎಣಿಕೆ ಸಮಯದ ವಿವರ ಇಲ್ಲಿದೆ
ಕರ್ನಾಟಕ ವಿಧಾಸಭೆ ಚುನಾವಣೆ
Follow us
Rakesh Nayak Manchi
|

Updated on:May 10, 2023 | 9:15 PM

ಬೆಂಗಳೂರು: ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆ (Karnataka Assembly Elections 2023) ಇಂದು (ಮೇ 10) ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಒಂದೇ ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ (Karnataka Assembly Elections Result 2023) ಯಾವಾಗ ಮತ್ತು ಎಷ್ಟು ಗಂಟೆಗೆ ಹೊರಬೀಳಲಿದೆ ಎಂಬುದೊಂದೇ ಈಗ ಜನರಲ್ಲಿರುವ ಪ್ರಶ್ನೆಯಾಗಿದೆ. ಹಾಗಿದ್ದರೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ ಯಾವುದು? ಎಷ್ಟು ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯು 2023 ರ ಮೇ 13 ಶನಿವಾರ ನಡೆಯಲಿದೆ. ಹಾಗಿದ್ದರೆ, ಚುನಾವಣಾ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ? ಚುನಾವಣಾ ಆಯೋಗದ ವೆಬ್‌ಸೈಟ್ eci.gov.in ಗೆ ಭೇಟಿ ಕೊಟ್ಟರೆ ಚುನಾವಣಾ ಫಲಿತಾಂಶಗಳು ನೈಜ ಸಮಯದಲ್ಲಿ ಲಭ್ಯವಿರುತ್ತವೆ. ವೆಬ್​ಸೈಟ್​ಗೆ ಭೇಟಿಕೊಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ.

  1. ಹಂತ 1: ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ eci.gov.in ಗೆ ಹೋಗಿ.
  2. ಹಂತ 2: ‘General Elections to Assembly Constituency April 2023’ ಕ್ಲಿಕ್ ಮಾಡಿ.
  3. ಹಂತ 3: ನಂತರ ಚುನಾವಣೆಯ ಫಲಿತಾಂಶ ನಿಮ್ಮ ಮೊಬೈಲ್ ಪರದೆಯ ಮೇಲೆ ಬರಲಿದೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023: ಎಲ್ಲಿ ವೀಕ್ಷಿಸಬೇಕು?

ಲೈವ್ ಟಿವಿ

ಟಿವಿ9 ಕನ್ನಡ: www.tv9kannada.com/live-tv

News9live: www.news9live.com/digital-live-tv

TV9 ಹಿಂದಿ: www.tv9hindi.com/live-tv

YouTube

ಟಿವಿ9 ಕನ್ನಡ: www.youtube.com/@tv9kannada

News9live: www.youtube.com/@NEWS9LIVE

TV9 ಹಿಂದಿ: www.youtube.com/@TV9Bharatvarsh

ಜಾಲತಾಣ

ಟಿವಿ9 ಕನ್ನಡ: www.tv9kannada.com

News9live: www.news9live.com

TV9 ಹಿಂದಿ: www.tv9hindi.com

224 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಮೇ 13ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಬಹುಪಾಲು ಕ್ಷೇತ್ರಗಳ ಫಲಿತಾಂಶ ಮಧ್ಯಾಹ್ನದ ವೇಳೆಗೆ ಪ್ರಕಟಗೊಳ್ಳಲಿದ್ದು, ಸಂಜೆ ವೇಳೆಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶಗಳು ಹೊರಬೀಳಲಿದೆ. ಮೇ 15ರಂದು ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ, ವ್ಯಕ್ತಿ ಸಾವು; ಇಂದು ಮತದಾನದ ನಂತರ ಸಾವನ್ನಪ್ಪಿದವರು ಎಷ್ಟು ಗೊತ್ತಾ?

ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್‌ ವರದಿಗಳು ಬಹಿರಂಗವಾಗಲಿವೆ. ಈ ಬಾರಿಯಂತೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅತ್ತ ಕೆಲವು ಪ್ರದೇಶಗಳಲ್ಲಿ ಜೆಡಿಎಸ್ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದೆ.  ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಯಾವ ಪಕ್ಷಕ್ಕೂ ಎಂದಿಗೂ ಸುಲಭವಲ್ಲ ಎಂಬುದು ಈ ಹಿಂದಿನ ಚುನಾವಣೆಗಳಿಂದ ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ಪಕ್ಷವು 1999 ಮತ್ತು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿತ್ತು. ಜೆಡಿಎಸ್ 1999 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತು. ಆದರೆ ಇಲ್ಲಿಯವರೆಗೆ ಬಹುಮತ ಸಿಕ್ಕಿಲ್ಲ. ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದರೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. 2019ರಲ್ಲಿ ಜೆಡಿಎಸ್ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ ಹಿನ್ನೆಲೆ ಬಹುಮತ ಸಾಬೀತು ಮಾಡಿ ಬಿಜೆಪಿ ಸರ್ಕಾರ ರಚಿಸಲಾಗಿತ್ತು.

2023 ಕರ್ನಾಟಕ ಎಕ್ಸಿಟ್ ಪೋಲ್‌ಗಳು

ಕರ್ನಾಟಕದಲ್ಲಿ ಎಕ್ಸಿಟ್ ಪೋಲ್‌ಗಳು ಹಂಗ್ ಅಸೆಂಬ್ಲಿ ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ಗೆ ಸ್ವಲ್ಪ ಲಾಭವಾಗುವ ನಿರೀಕ್ಷೆಯಿದೆ. ಆದರೆ, ಎಚ್‌ಡಿ ಕುಮಾರಸ್ವಾಮಿ ಅವರ ಜೆಡಿಎಸ್ ಕಿಂಗ್‌ಮೇಕರ್ ಆಗುವ ಸಾಧ್ಯತೆಯೂ ಇದೆ. 224 ಸ್ಥಾನಗಳಲ್ಲಿ 113 ಮ್ಯಾಜಿಕ್ ನಂಬರ್ ಆಗಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Wed, 10 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ