ಬೆಂಗಳೂರು: ನಿನ್ನೆ (ಮೇ.10) ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Assembly Election 2023), 58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ (Voting) ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. 224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಿಲ್ಲೆ | ಶೇಕಡಾವಾರು ಮತದಾನ |
ಬೆಳಗಾವಿ | 76.61 |
ಬಾಗಲಕೋಟೆ | 74.63 |
ವಿಜಯಪುರ | 70.78 |
ಕಲಬುರಗಿ | 65.22 |
ಯಾದಗಿರಿ | 66.66 |
ಬೀದರ್ | 71.5 |
ರಾಯಚೂರು | 69.79 |
ಕೊಪ್ಪಳ | 77.51 |
ಗದಗ | 75.21 |
ಧಾರವಾಡ | 73.14 |
ಉತ್ತರ ಕನ್ನಡ | 76.72 |
ಹಾವೇರಿ | 81.17 |
ವಿಜಯನಗರ | 77.62 |
ಬಳ್ಳಾರಿ | 76.23 |
ಚಿತ್ರದುರ್ಗ | 81.2 |
ದಾವಣಗೆರೆ | 78.11 |
ಶಿವಮೊಗ್ಗ | 77.22 |
ಉಡುಪಿ | 78.46 |
ಚಿಕ್ಕಮಗಳೂರು | 77.89 |
ತುಮಕೂರು | 83.49 |
ಚಿಕ್ಕಬಳ್ಳಾಪುರ | 85.83 |
ಕೋಲಾರ | 81.45 |
ಬೆಂಗಳೂರು ನಗರ | 59.98 |
ಬೆಂಗಳೂರು ಗ್ರಾಮಾಂತರ | 83.76 |
ಬಿಬಿಎಂಪಿ (ಉತ್ತರ) | 52.88 |
ಬಿಬಿಎಂಪಿ (ಕೇಂದ್ರ) | 55.45 |
ಬಿಬಿಎಂಪಿ (ದಕ್ಷಿಣ) | 52.8 |
ರಾಮನಗರ | 84.98 |
ಮಂಡ್ಯ | 84.36 |
ಹಾಸನ | 81.7 |
ದಕ್ಷಿಣ ಕನ್ನಡ | 76.15 |
ಕೊಡಗು | 74.74 |
ಮೈಸೂರು | 75.07 |
ಚಾಮರಾಜನಗರ | 77.89 |
ಒಟ್ಟು | 72.67 |
ಜಿಲ್ಲಾವಾರು ಗರಿಷ್ಠ ಮತದಾನ ಕಂಡ ಜಿಲ್ಲೆ: ಚಿಕ್ಕಬಳ್ಳಾಪುರ -ಶೇ.85.83
ಜಿಲ್ಲಾವಾರು ಕನಿಷ್ಠ ಮತದಾನ ಕಂಡ ಜಿಲ್ಲೆ: ಬೆಂಗಳೂರು ನಗರ-ಶೇ.59.98
ಇನ್ನು ಕ್ಷೇತ್ರವಾರು ಗರಿಷ್ಠ ಮತದಾನ ಕಂಡ ವಿಧಾಮಸಭಾ ಕ್ಷೇತ್ರ: ಮೇಲುಕೋಟೆ – ಶೇ. 90.93
ಕನಿಷ್ಠ ಮತದಾನ ವಿಧಾನಸಭಾ ಕ್ಷೇತ್ರ: ಸಿವಿರಾಮನ್ ನಗರ (ಬೆಂಗಳೂರು) – 47.43%
ಇದನ್ನೂ ಓದಿ: ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್! ಹೌದಾ?
ಈ ಬಾರಿ ಮತದಾನ ಕಳೆದ ಬಾರಿಗಿಂತ 0.73 ಪ್ರತಿಶತದಷ್ಟು ಕಡಿಮೆಯಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ 73.04ರಷ್ಟು ಮತದಾನವಾಗಿತ್ತು.
ವರ್ಷ | ಮತದಾನ ಪ್ರಮಾಣ | ಮತದಾನ ಅರ್ಹತೆ ಪಡೆದಿದ್ದವರು | ಮತದಾನ ಮಾಡಿದವರು |
2018 | 73.04 | 4,96,54,443 | 3,64,24,365 |
2013 | 71.08 | 4,36,52,789 | 3,13,53,015 |
2008 | 65.1 | 4,01,71.345 | 2,61,56,630 |
2004 | 65 | 3,85,86,754 | 2,50,88,438 |
1999 | 67.7 | 3,42,84,098 | 2,31,94,283 |
ಈ ಬಾರಿಯ ಅಂಕಿ-ಅಂಶಗಳನ್ನು ನೋಡಿದರೇ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಮತದಾರರು ಇನ್ನಷ್ಟು ಜಾಗೃತಿಯಾಗಬೇಕಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 11 May 23