Karnataka Exit Poll Result 2023: ಕರ್ನಾಟಕ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಪ್ರಕಟ; ಯಾರಿಗೆ ಹೆಚ್ಚು ಸ್ಥಾನ?
Karnataka Opinion Poll Results 2023; ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಎಲ್ಲ 224 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬುಧವಾರ ಸಂಜೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷಾ ವರದಿಗಳೂ ಪ್ರಕಟಗೊಂಡಿವೆ. ವಿವಿಧ ಸುದ್ದಿಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷಾ ವರದಿಯ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections 2023) ಪ್ರಯುಕ್ತ ಎಲ್ಲ 224 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬುಧವಾರ ಸಂಜೆ ಮುಕ್ತಾಯಗೊಂಡಿದೆ. ರಾಜ್ಯದಾದ್ಯಂತ ಸಂಜೆ 5 ಗಂಟೆ ವರೆಗಿನ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷಾ ವರದಿಗಳೂ (Exit Poll Results) ಪ್ರಕಟಗೊಂಡಿವೆ. ಟೈಮ್ಸ್ ನೌ, ಎನ್ಡಿಟಿವಿ, ಇಂಡಿಯಾ ಟುಡೆ ಸೇರಿದಂತೆ ವಿವಿಧ ಸುದ್ದಿಸಂಸ್ಥೆಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳ ವಿವರ ಇಲ್ಲಿದೆ.
ಇಂಡಿಯಾ ಟುಡೇ ಮೈ ಆಕ್ಸಿಸ್ ಮತ್ತು ಟೈಮ್ಸ್ ನೌ ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಭರ್ಜರಿ ಸೀಟು ಸಿಗಲಿದೆ ಎಂದು ಭವಿಷ್ಯ ನುಡಿದಿದೆ. ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿಗೆ 16, ಕಾಂಗ್ರೆಸ್-3, ಇತರೆ-0. ಇಂಡಿಯಾ ಟುಡೇ ಪ್ರಕಾರ ಬಿಜೆಪಿ-16, ಕಾಂಗ್ರೆಸ್-3 ಮತ್ತು ಇತರೆ-0. ಇಲ್ಲಿ ಮತ ಹಂಚಿಕೆ ನೋಡಿದರೆ ಬಿಜೆಪಿ ಶೇ 50, ಕಾಂಗ್ರೆಸ್ ಶೇ-40 ಮತ್ತು ಇತರೆ ಶೇ 10.
ಗ್ರೇಟರ್ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮ-ಸಮ ಸೀಟು ಸಿಗುತ್ತದೆ ಎಂದು ಇಂಡಿಯಾ ಟಿವಿ ಭವಿಷ್ಯ ನುಡಿದಿದೆ. ಗ್ರೇಟರ್ ಬೆಂಗಳೂರಿನಲ್ಲಿ ಬಿಜೆಪಿಗೆ 13ರಿಂದ 15 ಸೀಟು, ಕಾಂಗ್ರೆಸ್ ಪಕ್ಷಕ್ಕೆ 16-18, ಇತರೆ 3 ಸೀಟು ಗೆಲ್ಲುವುದಾಗಿ ಇದು ಭವಿಷ್ಯ ನುಡಿದಿದೆ ಜನ್ ಕೀ ಬಾತ್, ಪಿ- ಮಾರ್ಕ್,ರಿಪಬ್ಲಿಕ್ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿದೆ.
ಜನ್ ಕೀ ಬಾತ್ ಪ್ರಕಾರ ಬಿಜೆಪಿ 88-98, ಕಾಂಗ್ರೆಸ್ 99-109,ಜೆಡಿಎಸ್ 14-24. ಪಿ ಮಾರ್ಕ್- ರಿಪಬ್ಲಿಕ್ ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿದ್ದು ಬಿಜೆಪಿ : 85-100, ಕಾಂಗ್ರೆಸ್: 94-108 ಜೆಡಿಎಸ್: 24-32,ಇತರೆ: 2-6 ಸೀಟು ಗಳಿಸುವುದಾಗಿ ಹೇಳಿದೆ.
ಚಾನೆಲ್ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
ಟಿವಿ 9 ಕನ್ನಡ | 83-95 | 100-112 | 21-29 | 0-06 |
ಭಾರತ ವರ್ಷ್ | 88-98 | 99-109 | 21-26 | 0-04 |
ಜನ್ ಕೀ ಬಾತ್ | 94-107 | 91-106 | 14-24 | 0-02 |
ಜೀ ನ್ಯೂಸ್ | 79-94 | 103-118 | 25-32 | 02-05 |
ರಿಪಬ್ಲಿಕ್ ಟಿವಿ | 85-100 | 95-108 | 24-32 | 02-06 |
ಟೈಮ್ಸ್ ನೌ | 85 | 113 | 23 | 03 |
ಜೀ ಮೆಟ್ರಿಜ್ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 114 ಸೀಟುಗಳಿಗಿಂತ ಹೆಚ್ಚು ಸೀಟು ಗಳಿಸಬಹುದು. ಇನ್ನುಳಿದಂತೆ ಬಿಜೆಪಿ: 79-94,ಕಾಂಗ್ರೆಸ್: 103-118,ಜೆಡಿಎಸ್: 25-33 ಸೀಟು ಗಳಿಸಬಹುದು. ಮತ ಹಂಚಿಕೆ: ಬಿಜೆಪಿ: 36 ಶೇ, ಕಾಂಗ್ರೆಸ್: 41 ಶೇ, ಜೆಡಿಎಸ್: 17 ಶೇ.
ಟಿವಿ9 – ಭಾರತ್ ವರ್ಷ್- ಪೋಲ್ ಸ್ಟ್ರಾಟ್ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಆಗಲಿದೆ ಎಂದು ಭವಿಷ್ಯ ನುಡಿದಿದೆ. ಇದರ ಪ್ರಕಾರ ಬಿಜೆಪಿ: 88-98,ಕಾಂಗ್ರೆಸ್: 99-109, ಜೆಡಿಎಸ್: 21-26. ನವಭಾರತ್ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇದರ ಪ್ರಕಾರ ಬಿಜೆಪಿ- 78-92, ಕಾಂಗ್ರೆಸ್- 106-120, ಜೆಡಿಎಸ್- 20-26, ಇತರೆ- 2-4. ಟಿವಿ9-ಭಾರತವರ್ಷ್- ಪೋಲ್ ಸ್ಟ್ರಾಟ್ ಅತಂತ್ರ ವಿಧಾನಸಭೆ ಭವಿಷ್ಯ ನುಡಿದಿದೆ. ಬಿಜೆಪಿ: 88-98 ಕಾಂಗ್ರೆಸ್: 99-109, ಜೆಡಿಎಸ್: 21-26. ಎಬಿಪಿ-ಸಿವೋಟರ್ ಭವಿಷ್ಯ ನುಡಿ- ಅತಂತ್ರ ವಿಧಾನಸಭೆ. ಇದರ ಪ್ರಕಾರ ಬಿಜೆಪಿ 83-95, ಕಾಂಗ್ರೆಸ್ 100-12, ಜೆಡಿಎಸ್ 21-29, ಇತರೆ 2-4. ನ್ಯೂಸ್ ನೇಷನ್-ಸಿಜಿಎಸ್ ಸಮೀಕ್ಷೆ ಬಿಜೆಪಿ ಗೆಲುವು ಎಂದು ಭವಿಷ್ಯ ನುಡಿದಿದೆ. ಬಿಜೆಪಿ 114 ಸೀಟು,ಕಾಂಗ್ರೆಸ್- 86,ಜೆಡಿಎಸ್- 21 ಸೀಟು ಗಳಿಸುವುದಾಗಿ ಹೇಳಿದೆ
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಬೆಂಗಳೂರು ಪ್ರದೇಶದಲ್ಲಿ ಕಾಂಗ್ರೆಸ್ 17 ಸೀಟುಗಳಿಸುವುದಾಗಿ ಹೇಳಿದೆ. ಕಾಂಗ್ರೆಸ್ 17 – 28, ಬಿಜೆಪಿ 10, ಇತರ- 1. ವೋಟ್ ಶೇರ್ : ಕಾಂಗ್ರೆಸ್- 44%, ಬಿಜೆಪಿ- 38%, ಜಿಡಿಎಸ್- 15%, ಇತರೆ- 00 (3%)
ಎಬಿಪಿ ನ್ಯೂಸ್-ಸಿವೋಟರ್ ಎಕ್ಸಿಟ್ ಪೋಲ್ ಮಧ್ಯ ಕರ್ನಾಟಕದಲ್ಲಿ ನಿಕಟ ಹೋರಾಟವನ್ನು ಭವಿಷ್ಯ ನುಡಿದಿದೆ ಕಾಂಗ್ರೆಸ್ 12 ಬಿಜೆಪಿ 12-16 ಜೆಡಿಎಸ್ 0-2 ಇತರರು 0-1
ಹೈದರಾಬಾದ್ ಕರ್ನಾಟಕ ಅಥವಾ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ 32 ಸ್ಥಾನಗಳನ್ನು ಗೆಲ್ಲಬಹುದು ಎಂದು ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಹೇಳಿದೆ.ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ 32 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಬಿಜೆಪಿ ಏಳು ಸ್ಥಾನ ಮತ್ತು ಜೆಡಿಎಸ್ ಗೆ ಕೇವಲ ಒಂದು ಸ್ಥಾನ ಎಂದು ಇದು ಭವಿಷ್ಯನುಡಿದಿದೆ
ಟೈಮ್ಸ್‌ನೌ-ಇಟಿಜಿ ಭವಿಷ್ಯ: ಕಾಂಗ್ರೆಸ್ ಬಹುಮತದ 113 ಅಂಕಗಳನ್ನು ಮುಟ್ಟಬಹುದು. ಇದರ ಪ್ರಕಾರ ಕಾಂಗ್ರೆಸ್ 113, ಬಿಜೆಪಿ 85,ಜೆಡಿಎಸ್ 23,ಇತರೆ 3. ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಪ್ರಕಾರ ಅತಂತ್ರ ವಿಧಾನಸಭೆ ಆಗಲಿದೆ.ಕಾಂಗ್ರೆಸ್: 107-119, ಬಿಜೆಪಿ 79-80,ಜೆಡಿಎಸ್ 23-29,ಇತರೆ 1.ನ್ಯೂಸ್ 18 ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶವಿಲ್ಲ ಎಂದು ಭವಿಷ್ಯ ನುಡಿದಿದೆ ಬಿಜೆಪಿ 88-98, ಕಾಂಗ್ರೆಸ್ 99-109, ಜೆಡಿಎಸ್-21-26,ಇತರೆ 0-4.
ಇಂಡಿಯಾಟುಡೇ-ಆಕ್ಸಿಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟವಾದ ಮುನ್ನಡೆ ಸಿಗಲಿದೆ. ಕಾಂಗ್ರೆಸ್ 28, ಬಿಜೆಪಿ 21, ಜೆಡಿಎಸ್ 1,ಇತರೆ 0.
ಇಂಡಿಯಾ ಟುಡೇ ಆಕ್ಸಿಸ್ ಮೈ-ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಸೀಟುಗಳ ಸಂಖ್ಯೆ ಕಾಂಗ್ರೆಸ್ – 92 ಬಿಜೆಪಿ – 64 ಜೆಡಿಎಸ್ – 2
ವಿವಿಧ ಸುದ್ದಿ ಮಾಧ್ಯಮಗಳು ಭವಿಷ್ಯ ನುಡಿದಿದ್ದು ಹೀಗೆ ನ್ಯೂಸ್ ನೇಷನ್-ಸಿಜಿಎಸ್: ಬಿಜೆಪಿ 114 ಸ್ಥಾನ,ಕಾಂಗ್ರೆಸ್ 86, ಜೆಡಿ(ಎಸ್) 21, ಸುವರ್ಣ ನ್ಯೂಸ್-ಜನ್ ಕಿ ಬಾತ್: ಬಿಜೆಪಿ 94 ರಿಂದ 117,ಕಾಂಗ್ರೆಸ್ 91 ರಿಂದ 106,ಜೆಡಿಎಸ್ 14 ರಿಂದ 24 ಸ್ಥಾನಗಳು,ಇತರೆ 2 ಸ್ಥಾನಗಳು
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ಗೆ ಬಹುಮತದ ಮುನ್ಸೂಚನೆ ನೀಡಿದೆ ಕಾಂಗ್ರೆಸ್: 115 ಬಿಜೆಪಿ: 85 ಜೆಡಿ(ಎಸ್): 22 ಇತರೆ: 2 ಇಂಡಿಯಾ ಟುಡೇ ಮತಗಟ್ಟೆ ಸಮೀಕ್ಷೆ ಕಾಂಗ್ರೆಸ್: 122-140 (43%) ಬಿಜೆಪಿ: 62-80 (35%) ಜೆಡಿಎಸ್: 20-25 (16%) ಇತರೆ: 0-3 (6%)
ಟುಡೇಸ್ ಚಾಣಕ್ಯ ಸಮೀಕ್ಷೆ
ಕಾಂಗ್ರೆಸ್ – 120 ಬಿಜೆಪಿ – 62-80 ಜೆಡಿಎಸ್ – 20-25 ಇತರ – 0-3 ಸ್ಥಾನ ಸಾಧ್ಯತೆ
ಎಬಿಪಿ-ಸಿವೋಟರ್ ಸಮೀಕ್ಷೆ
ಕಾಂಗ್ರೆಸ್ – 106 ಬಿಜೆಪಿ – 89 ಜೆಡಿಎಸ್ – 25 ಇತರ – 4
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Wed, 10 May 23