Bangalore: ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್! ಹೌದಾ?

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡ ನಾಗಮಂಗಲದಲ್ಲಿ ಸುಮಾರು 8000 ಮತದಾರರು ಒಂದೇ ಮತಗಟ್ಟೆ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ವಾಪಾಸ್ ಆಗಿದ್ದಾರೆ ಎಂಬ ಮಾಹಿತಿಗೆ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Bangalore: ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್! ಹೌದಾ?
8000 ಜನರು ಮತದಾನ ಮಾಡದೆ ವಾಪಸ್ ಆದ ಬಗ್ಗೆ ಸ್ಪಷ್ಟನೆ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ
Follow us
Rakesh Nayak Manchi
|

Updated on:May 10, 2023 | 7:55 PM

ಬೆಂಗಳೂರು: ಬೆಂಗಳೂರು ದಕ್ಷಿಣ (Bangalore South) ವಿಧಾನಸಭಾ ಕ್ಷೇತ್ರದ ದೊಡ್ಡ ನಾಗಮಂಗಲದಲ್ಲಿ ಸುಮಾರು 8000 ಮತದಾರರು ಒಂದೇ ಮತಗಟ್ಟೆ ಕೇಂದ್ರದಲ್ಲಿ (Voting Center) ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲಾಗದೆ ವಾಪಾಸ್ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ 176-ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದು, ಒಂದೇ ಮತಗಟ್ಟೆಯಲ್ಲಿ 8000 ಮತದಾರರಿರುವ ಅಂಶವು ತಪ್ಪು ಮಾಹಿತಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ದೊಡ್ಡನಾಗಮಂಗಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ: 327, 328, 329 ಮತ್ತು 329ಎ ರಲ್ಲಿ ಒಟ್ಟು 4 ಮತಗಟ್ಟೆಗಳಿವೆ. ಈ ಪೈಕಿ ಮತಗಟ್ಟೆ ಸಂಖ್ಯೆ 327 ರಲ್ಲಿ ಒಟ್ಟು 1786 ಮತದಾರರಿದ್ದು, 328ರಲ್ಲಿ 2121 ಮತದಾರರು, 329ರಲ್ಲಿ 1127 ಮತದಾರರು ಹಾಗೂ 329ಎ ಯಲ್ಲಿ 1126 ಮತದಾರರು ಇದ್ದಾರೆ.

ಒಟ್ಟು 3 ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ, 1500 ಮೀರಿದೆ. ಸರ್ಕಾರಿ ಶಾಲೆಯ ನೆಲಮಹಡಿಯಲ್ಲಿ 4 ಕೊಠಡಿಗಳು ಮಾತ್ರ ಇದ್ದು, ಮತಗಟ್ಟೆ ಸಂಖ್ಯೆ 329 ರಲ್ಲಿ ಒಟ್ಟು 2253 ಮತದಾರರು ಇದ್ದೂದರಿಂದ ಮತಗಟ್ಟೆಯನ್ನು 4ನೇ ಕೊಠಡಿಗೆ 3294 ಹೆಚ್ಚುವರಿ ಮತಗಟ್ಟೆ ಎಂದು ಪರಿಗಣಿಸಲಾಗಿರುತ್ತದೆ. ಉಳಿದಂತೆ ಶಾಲಾ ಕಟ್ಟಡದ ನೆಲಮಹಡಿಯಲ್ಲಿ 3 ಕೊಠಡಿಗಳು ಮಾತ್ರ ಇದ್ದುದರಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರಿ ಶಾಲೆ, ಗ್ರಾಮದ ಸರಹದ್ದು ಮತ್ತು ನೆಲಮಹಡಿಯಲ್ಲಿ ಮತಗಟ್ಟೆ ಸ್ಥಾಪಿಸಬೇಕೆಂಬ ಮಾನದಂಡದ ಹಿನ್ನಲೆಯಲ್ಲಿ ಮತಗಟ್ಟೆ ಸಂಖ್ಯೆ: 327, 328 ಮತ್ತು 329 ನ್ನು ನೆಲಮಹಡಿಯಲ್ಲಿ ಸ್ಥಾಪಿಸಲಾಗಿದೆ.

ಇದನ್ನೂ ಓದಿ: ಮತದಾನಕ್ಕೆ ಹೋಗುತ್ತಿದ್ದಾಗ ಆನೆ ದಾಳಿ, ವ್ಯಕ್ತಿ ಸಾವು; ಇಂದು ಮತದಾನದ ನಂತರ ಸಾವನ್ನಪ್ಪಿದವರು ಎಷ್ಟು ಗೊತ್ತಾ?

ಸರ್ಕಾರಿ ಪ್ರಾಥಮಿಕ ಶಾಲೆಯ ಕಾಂಪೌಂಡ್​ಗೆ ಒಂದೇ ಗೇಟ್ ಇದ್ದು, 4 ಮತಗಟ್ಟೆಗಳ ಮತದಾರರು ಅದೇ ಗೇಟ್ ಮೂಲಕ ಪುಥಮ ಹಂತದಲ್ಲಿ ಪುವೇಶ ಮಾಡಿ 4 ಮತಗಟ್ಟೆಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಪ್ರಾರಂಭವಾದ ಸಂದರ್ಭದಲ್ಲಿ 4 ಮತಗಟ್ಟೆಗಳಿಗೆ ಸೇರಿದ ಮತದಾರರು ಮಾಹಿತಿ ಕೊರತೆಯಿಂದಾಗಿ ಒಂದೇ ಸರದಿ ಸಾಲಿನಲ್ಲಿ ಪ್ರವೇಶ ಮಾಡಲು ಯತ್ನಿಸಿದಾಗ ಗೊಂದಲ ಉಂಟಾಗಿದೆ.

ವಿಷಯ ತಿಳಿದ ನಂತರ ತಹಶೀಲ್ದಾರ್ ಬೆಂಗಳೂರು ದಕ್ಷಿಣ ತಾಲ್ಲೂಕು ಹಾಗೂ ಸಹಾಯಕ ಚುನಾವಣಾಧಿಕಾರಿ ಇವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಮತದಾರರಿಗೆ, ಚುನಾವಣಾ ಸಿಬ್ಬಂದಿಯವರಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಸರಿಯಾದ ತಿಳುವಳಿಕೆ ನೀಡಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಮತದಾರರಿಗೆ ಕುಳಿತುಕೊಳ್ಳಲು ಖುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ತದನಂತರ ಸಂಜೆ 06.00 ಗಂಟೆಗೆ ಮತಗಟ್ಟೆ ಸಂಖ್ಯೆ: 327, 329 ಮತ್ತು 329ಎ ರಲ್ಲಿನ ಎಲ್ಲಾ ಮತದಾರರು ಮತದಾನ ಮಾಡಿದ್ದು, ಮತಗಟ್ಟೆ ಸಂಖ್ಯೆ: 328ರಲ್ಲಿ ಮಾತ್ರ ಸರತಿ ಸಾಲಿನಲ್ಲಿದ್ದ 44 ಮಂದಿಗೆ ಟೋಕನ್‌ ನೀಡಿ ಮತದಾನ ಮಾಡಿಸಲಾಗಿರುತ್ತದೆ. ಮತದಾನವು ಸುಗಮವಾಗಿ ನಡೆದಿರುತ್ತದೆ ಎಂದು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Wed, 10 May 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್