ಗಡಿಯಲ್ಲಿ ಹದ್ದಿನ ಕಣ್ಣು: ಬೆಳಗಾವಿ ಕೊಗನೊಳ್ಳಿ ಚೆಕ್​​ಪೋಸ್ಟ್​​​ ಬಳಿ 1.5 ಕೋಟಿ ರೂ. ಜಪ್ತಿ

|

Updated on: Apr 06, 2023 | 8:51 AM

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್​​ಪೋಸ್ಟ್​​​ ಬಳಿ ಸಾವಿರ ಅಲ್ಲಾ, ಲಕ್ಷ ಅಲ್ಲಾ ಬರೋಬ್ಬರಿ 1.5 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ.

ಗಡಿಯಲ್ಲಿ ಹದ್ದಿನ ಕಣ್ಣು: ಬೆಳಗಾವಿ ಕೊಗನೊಳ್ಳಿ ಚೆಕ್​​ಪೋಸ್ಟ್​​​ ಬಳಿ 1.5 ಕೋಟಿ ರೂ. ಜಪ್ತಿ
ನಿಪ್ಪಾಣಿ ಪೊಲೀಸರಿಂದ ಹಣ ಜಪ್ತಿ
Follow us on

ಬೆಳಗಾವಿ: ಚುನಾವಣೆ ದಿನಾಂಕ ಘೋಷಣೆಯಾಗಿದ್ದೇ ತಡ ಮತದಾರರನ್ನು ಸೆಳೆಯಲು ಟಿಕೆಟ್ ಆಕಾಂಕ್ಷಿಗಳು ನಾನಾ ಆಮೀಷವೊಡ್ಡುತ್ತಿದ್ದು ಪ್ರತಿ ದಿನ ಅಧಿಕಾರಿಗಳು ಹಣ, ಆಭರಣ, ಕುಕ್ಕರ್, ಮದ್ಯ ಹೀಗೆ ಅನೇಕ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್​​ಪೋಸ್ಟ್​​​ ಬಳಿ ಸಾವಿರ ಅಲ್ಲಾ, ಲಕ್ಷ ಅಲ್ಲಾ ಬರೋಬ್ಬರಿ 1.5 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ತೆರಳಿದ್ದ ಖಾಸಗಿ ಬಸನ್ನು ತಪಾಸಣೆ ಮಾಡುವ ವೇಳೆ ಪ್ರಯಾಣಿಕನ ಬಳಿ ಇದ್ದ ದಾಖಲೆ ಇಲ್ಲದ 1.5 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಐಟಿ ಅಧಿಕಾರಿಗಳಿಗೆ ಕೇಸ್ ಹಸ್ತಾಂತರಿಸಿದ್ದಾರೆ. ಇನ್ನು ನಿನ್ನೆ ಹಿರೇಬಾಗೇವಾಡಿ ಚೆಕ್ ಪೋಸ್ಟ್ ನಲ್ಲಿ ಖಾಸಗಿ ಬಸ್‌ನಲ್ಲಿ 2ಕೋಟಿ ರೂಪಾಯಿ ಪತ್ತೆಯಾಗಿತ್ತು.

ತುಮಕೂರಿನಲ್ಲಿ ದಾಖಲೆ ಇಲ್ಲದ 20.50 ಲಕ್ಷ ಹಣ ಜಪ್ತಿ

ತುಮಕೂರು ಜಿಲ್ಲೆಯಲ್ಲಿ ದಾಖಲೆ ಇಲ್ಲದ ಲಕ್ಷಾಂತರ ಹಣ ಜಪ್ತಿ ಮಾಡಲಾಗಿದೆ. ತಿಪಟೂರು ನಗರದಲ್ಲಿ ಸಿಬ್ಬಂದಿ ಇಲ್ಲದೆ ಎಟಿಎಂ ವಾಹನದಲ್ಲಿ ಅಕ್ರಮವಾಗಿ ಹಣ ಸಾಗಿಸಲಾಗುತ್ತಿದ್ದು ದಾಖಲೆ ಇಲ್ಲದ 19 ಲಕ್ಷ ಹಣ ಮತ್ತು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಕೊರಟಗೆರೆ ತಾಲೂಕಿನ ಕಾಟೇನಹಳ್ಳಿ ಚೆಕ್​​ಪೋಸ್ಟ್​​​ ಬಳಿ ಕಾರಿನಲ್ಲಿದ್ದ ₹1.50 ಲಕ್ಷ ಜಪ್ತಿ ಮಾಡಲಾಗಿದೆ. ಹಣ ಸಾಗಿಸುತ್ತಿದ್ದ ರುದ್ರೇಶ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ: 1 ಲಕ್ಷಕ್ಕೂ ಹೆಚ್ಚು ಹಣ ಸೀಜ್

ಜೆ.ಕೆ.ಪುರಂ ಚೆಕ್​ಪೋಸ್ಟ್​ ಬಳಿ 1.64 ಲಕ್ಷ ಹಣ ಜಪ್ತಿ

ಕೋಲಾರ: ಕೆಜಿಎಫ್​ ತಾಲೂಕಿನ ಜೆ.ಕೆ.ಪುರಂ ಚೆಕ್​ಪೋಸ್ಟ್​ ಬಳಿ ದಾಖಲೆ ಇಲ್ಲದ 1.64 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಮಿನಿ ಟೆಂಪೋದಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:51 am, Thu, 6 April 23