Mayakonda Assembly Seat: ಕೊನೆ ಕ್ಷಣದಲ್ಲಿ ‘ಕೈ’ಕೊಟ್ಟ ಕಾಂಗ್ರೆಸ್! ಇಡೀ ಕುಟುಂಬದ ಜೊತೆಗೆ ಸುದ್ದಿಗೋಷ್ಟಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಟಿಕೆಟ್​ ಆಕಾಂಕ್ಷಿ

ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಭಾಯಿ ಹೀಗೆ ಕಣ್ಣೀರು ಹಾಕಲು ಕಾರಣವಾಗಿರುವುದು ಕೆಲ ಅಶ್ಲೀಲ ಚಿತ್ರಗಳು. ಈ ಚಿತ್ರಗಳನ್ನ ಈಗ ಕಾಂಗ್ರೆಸ್ ಟಿಕೆಟ್ ಪಡೆದ ಬಸವಂತಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರಂತೆ.

Mayakonda Assembly Seat: ಕೊನೆ ಕ್ಷಣದಲ್ಲಿ ‘ಕೈ’ಕೊಟ್ಟ ಕಾಂಗ್ರೆಸ್! ಇಡೀ ಕುಟುಂಬದ ಜೊತೆಗೆ ಸುದ್ದಿಗೋಷ್ಟಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಟಿಕೆಟ್​ ಆಕಾಂಕ್ಷಿ
ಇಡೀ ಕುಟುಂಬದ ಜೊತೆಗೆ ಸುದ್ದಿಗೋಷ್ಟಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಟಿಕೆಟ್​ ಆಕಾಂಕ್ಷಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 06, 2023 | 10:25 AM

ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ (Karnataka Assembly Elections 2023) ಕೆಲ ದಿನಗಳ ಹಿಂದೆ ಇಂದಿರಾ ಗಾಂಧಿ ಮಾದರಿ ಕ್ಷೇತ್ರದಲ್ಲಿ ನಿತ್ಯ ಸುತ್ತುತ್ತಿದ್ದಳು ಆ ಮಹಿಳೆ. ಈ ಸಲ ಟಿಕೆಟ್ ನನಗೆ ಖಂಡಿತಾ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಳು. ಆದ್ರೆ ಇದ್ದಕ್ಕಿದ್ದಂತೆ ಪಕ್ಷದ ಹೈಕಮಾಂಡ್​ ಆ ಕ್ಷೇತ್ರಕ್ಕೆ ಬೇರೊಬ್ಬರ ಹೆಸರು ಘೊಷಣೆ ಮಾಡಿ ಬಿಟ್ಟಿತ್ತು. ಅದಕ್ಕೆ ಫೋಟೋ ಪಾಲಿಟಿಕ್ಸ್ ಕಾರಣವಾಗಿತ್ತು. ಕೆಲ ದಿನ ಚಿತ್ರರಂಗದಲ್ಲಿ ಇದ್ದಾಗ ತೆಗೆದ ಪೋಟೋಗಳನ್ನ ತನ್ನದೇ ಪಕ್ಷದ ನಾಯಕ ವೈರಲ್ ಮಾಡಿದ್ದ. ಇದನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ನಿಮ್ಮ ಮನೆಯಲ್ಲಿಯೂ ಅಕ್ಕ ತಂಗಿ ಇದ್ದಾರೆ ಎಂದು ಕೂಗಿದಳು. ಇಷ್ಟಕ್ಕೂ ಇಲ್ಲಿ ಆಗಿರುವುದಾದರೂ ಎನು? ಇಲ್ಲಿದೆ ನೋಡಿ ಫೋಟೋ ಪಾಲಿಟಿಕ್ಸ್ ಸ್ಟೋರಿ. ಬಿಕ್ಕಿ ಬಿಕ್ಕಿ ಅಳುತ್ತಿರುವ ಮಹಿಳೆ (Woman). ಜೊತೆಗೆ ತನ್ನ ಮಗು, ಹೆತ್ತಮ್ಮ ಹಾಗೂ ಪತಿಯ ಜೊತೆ ಸೇರಿ ಸುದ್ದಿಗೋಷ್ಠಿ. ಮಾತು ಹೊರಡುತ್ತಿಲ್ಲ. ಕಣ್ಣಲ್ಲಿ ಬರೀ ನೀರು… ಧಾರಾಕಾರವಾಗಿ ಹರಿಯುತ್ತಿದೆ. ಪಕ್ಕದಲ್ಲಿ ಇದ್ದ ತಾಯಿಗೂ ದು:ಖ ಇಮ್ಮಡಿಯಾಗಿ ಬಿಕ್ಕಳಿಸುತ್ತಿದ್ದಾಳೆ. ಇಡಿ ಕುಟುಂಬ ಭಾವುಕವಾಗಿದೆ. ಇಲ್ಲಿ ನಾವು ಹೇಳುತ್ತಿರುವುದು ದಾವಣಗೆರೆ ಜಿಲ್ಲೆಯ ಮಾಯಕೊಂಡ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರದ (Mayakonda Assembly Seat) ಕಾಂಗ್ರೆಸ್ ಟಿಕೆಟ್ (Congress) ಪ್ರಬಲ ಆಕಾಂಕ್ಷಿ ಸವಿತಾಭಾಯಿ ಮಲ್ಲೇಶ್ ನಾಯ್ಕ ಅವರ ಬಗ್ಗೆ.

ಈ ಸವಿತಾ ಭಾಯಿ ಕೆಲ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್ಯ ಮಟ್ಟದ ಕಾಂಗ್ರೆಸ್ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ನಿವಾಸಿ. ಈ ಸಲ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹಠಕ್ಕೆ ಬಿದ್ದು ಕ್ಷೇತ್ರದಲ್ಲಿ ಇಂದಿರಾ ಗಾಂಧಿ ತರಹ ಸುತ್ತಾಡುತ್ತಿದ್ದರು. ಹೋದಲ್ಲಿ ಬಂದಲ್ಲಿ ಜನ ಸಾಗರವೇ ಸೇರುತ್ತಿತ್ತು.

ಆದ್ರೆ ಕಾಂಗ್ರೆಸ್ ಪಕ್ಷ ಕಳೆದ ಸಲ ಅಲ್ಪ ಮತಗಳಿಂದ ಪರಾಭವಗೊಂಡ ಮಾಜಿ ಸಚಿವ ಎಚ್. ಆಂಜನೇಯ ಅವರ ಅಳಿಯ ಬಸವಂತಪ್ಪ ಅವರಿಗೆ ಟಿಕೆಟ್ ನೀಡಿ ಬಿಟ್ಟಿದೆ. ಹೀಗಾಗಿ ತೀವ್ರ ಬೇಸರಗೊಂಡಿದ್ದಾರೆ ಸವಿತಾಬಾಯಿ. ನನಗೆ ಟಿಕೆಟ್ ಸಿಗದಿದ್ದರೂ ಮಾಯಕೊಂಡ ಕ್ಷೇತ್ರದಲ್ಲಿ ಬರೋಬರಿ 90 ಸಾವಿರ ಮಹಿಳೆಯರಿದ್ದಾರೆ. ಮಹಿಳಾ ಪ್ರತಿನಿಧಿಯಾಗಿ ಪಕ್ಷೇತರಳಾಗಿ ಸ್ಪರ್ಧೆ ಮಾಡುವೆ ಎಂದು ಇದೀಗ ಘೋಷಣೆ ಮಾಡಿದ್ದಾರೆ.

ಹೀಗೆ ಕಣ್ಣೀರು ಹಾಕಲು ಕಾರಣವಾಗಿರುವುದು ಕೆಲ ಅಶ್ಲೀಲ ಚಿತ್ರಗಳು. ಈ ಚಿತ್ರಗಳನ್ನ ಈಗ ಕಾಂಗ್ರೆಸ್ ಟಿಕೆಟ್ ಪಡೆದ ಬಸವಂತಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಬಗ್ಗೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಸವಂತಪ್ಪ ವಿರುದ್ಧ ಕೇಸ್ ಕೂಡಾ ದಾಖಲಾಗಿದೆ. ಇದೇ ಕಾರಣಕ್ಕೆ ತಾವು, ತಮ್ಮ ಪತಿ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರದಲ್ಲಿ ಇದ್ದೆವು.

ಇಂತಹ ಕೀಳು ರಾಜಕೀಯದಿಂದ ಇಡಿ ಕುಟುಂಬ ನೊಂದಿದೆ. ನನಗೆ ನ್ಯಾಯಬೇಕು. ಮೇಲಾಗಿ ಬಸವಂತಪ್ಪ ಅವರು ತಮ್ಮ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುವೆ, ಜೊತೆಗೆ ಚುನಾವಣೆಗೆ ಸ್ಪರ್ಧಿಸುವೆ ಎಂಬುದು ಸವಿತಾಭಾಯಿ ವಾದ. ಅವರ ತಾಯಿ ಚಂದ್ರಿಭಾಯಿ ಹೇಳುವ ಪ್ರಕಾರ ಕೆಲವರು ಟಿಕೆಟ್ ಕೊಡಿಸುವುದಾಗಿ ಹೇಳಿ ನಡುನೀರಿನಲ್ಲಿ ಕೈ ಬಿಟ್ಟರು ಎಂದು.

ಹೀಗೆ ಟಿಕೆಟ್ ತಪ್ಪಿದ್ದು ಒಂದು ನೋವಾಗಿದ್ದರೆ, ಇನ್ನೊಂದು ಅಶ್ಲೀಲ ಫೋಟೋಗಳು ವೈರಲ್ ಆಗಿರುವುದು. ಈ ಎರಡೂ ಕಾರಣಕ್ಕಾಗಿ ಸವಿತಾಭಾಯಿ ಬಿಕ್ಕಿ ಬಿಕ್ಕಿ ಅತ್ತರು. ಜೊತೆಗೆ ಇನ್ನೂ ಕೂಡಾ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸುವುದಾಗಿಯೂ ಸ್ಪಷ್ಟಪಡಿಸಿದರು. ಅದು ಆಗದಿದ್ದರೇ… ಪಕ್ಷೇತರ ಅಭ್ಯರ್ಥಿಯಾಗಿ ಮಾಯಕೊಂಡ ಕ್ಷೇತ್ರದ ಕಣದಲ್ಲಿ ಇರುವೆ ಎಂದು ಘೋಷಣೆ ಮಾಡಿದ್ದಾರೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಾದ ಇನ್ನಷ್ಟು  ಸುದ್ದಿಗಾಗಿ ಇಲ್ಲಿ  ಕ್ಲಿಕ್ ಮಾಡಿ 

ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ