ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​? ಇಲ್ಲಿದೆ ಅಚ್ಚರಿ ಸಂಗತಿಗಳು

ಕಾಂಗ್ರೆಸ್​ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೆಲ ಅಚ್ಚರಿ ಸಂಗತಿಗಳು ಇವೆ. ಇನ್ನು 2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​ ನೀಡಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​? ಇಲ್ಲಿದೆ ಅಚ್ಚರಿ ಸಂಗತಿಗಳು
ಸಾಂದರ್ಭಿಕ ಚಿತ್ರ
Follow us
|

Updated on:Apr 06, 2023 | 2:06 PM

ಬೆಂಗಳೂರು: ಇದೇ ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು  ಇಂದು(ಏಪ್ರಿಲ್ 06) ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಜನರಲ್ ಸೆಕ್ರೆಟರಿ, ಹಿರಿಯ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ ಅವರು 42 ಅಭ್ಯರ್ಥಿ ಹೆಸರು ಇರುವ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ. ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಈ ಎರಡನೇ ಪಟ್ಟಿಯಲ್ಲಿ ಇರುವ ಕೆಲ ಹೆಸರು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ, ಅಚ್ಚರಿ ಅಭ್ಯರ್ಥಿ ಯಾರು? ಈ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​ ನೀಡಲಾಗಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Karnataka Assembly Elections 2023: ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಯಾರ್ಯಾರಿಗೆ ಸಿಕ್ತು ಟಿಕೆಟ್? ಇಲ್ಲಿದೆ​​

ಸಮುದಾಯವಾರು ಟಿಕೆಟ್​​

2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​ ನೀಡಲಾಗಿದೆ ಎನ್ನುವುದನ್ನು ನೋಡುವುದಾರೆ, ಕರ್ನಾಟಕ ಪ್ರಬಲ ಸಮುದಾಯವಾಗಿರುವ ವೀರಶೈವ ಲಿಂಗಾಯತರಿಗೆ 11 ಟಿಕೆಟ್​ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ 10 ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಇನ್ನುಳಿಂದ ಕುರುಬ ಸಮುದಾಯಕ್ಕೆ- 3, ಎಸ್‌ಸಿ- 4, ಮುಸ್ಲಿಂ – 3, ಈಡಿಗ-1, ಮೊಗವೀರ- 2, ರಜಪೂತ- 1, ಮರಾಠ- 1, ಎಸ್.ಟಿ-2, ರೆಡ್ಡಿ-1 ಹಾಗೂ ನಾಯ್ಡು ಸಮುದಾಯಕ್ಕೆ 1 ಟಿಕೆಟ್​ ನೀಡಲಾಗಿದೆ.

ದತ್ತಾಗೆ ಕೈ ತಪ್ಪಿದ ಕಡೂರು ಟಿಕೆಟ್​

ಹೌದು….ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್​.ವಿ.ದತ್ತಾ ಅವರಿಗೆ ಈ ಬಾರಿ ಕಡೂರು ಕ್ಷೇತ್ರದ ಟಿಕೆಟ್​ ಕೈತಪ್ಪಿದೆ. ಜೆಡಿಎಸ್​​ನಿಂದ ಬಂದ ದತ್ತಾ ಅವರಿಗೆ ಕಡೂರು ಟಿಕೆಟ್​ ಖಚಿತ ಎನ್ನಲಾಗಿತ್ತು. ಆದ್ರೆ, ಇದೀಗ ಅಂತಿಮವಾಗಿ ಆನಂದ್​ ಕೆ.ಎಸ್. ಅವರಿಗೆ ಹೈಕಮಾಂಡ್ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ. ಟಿಕೆಟ್​ ಆಸೆ ಇಟ್ಟುಕೊಂಡು ಬಂದ ದತ್ತಾಗೆ ಭಾರೀ ನಿರಾಸೆಯಾಗಿದೆ.

ವಲಸಿಗರಿಗೆ ಮಣೆ

ಇನ್ನು ಈ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್​ ಬಹುತೇಕ ವಲಸಿಗರಿಗೆ ಮಣೆ ಹಾಕಿದೆ. ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್​ ಸೆರ್ಪಡೆಯಾದವರಿಗೆ ನಿರೀಕ್ಷೆಯಂತೆ ಟಿಕೆಟ್​ ಸಿಕ್ಕಿದೆ. ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್​ ಕಾಂಗ್ರೆಸ್​ ಸೇರ್ಪಡೆಯಾಗಿರುವ ಬಾಬುರಾವ್ ಚಿಂಚನಸೂರು ಅವರಿಗೆ ಗುರುಮಿಟ್ಕಲ್​ ಟಿಕೆಟ್​ ನೀಡಲಾಗಿದೆ. ಇನ್ನು ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ  ನೀಡಿ ಕಾಂಗ್ರೆಸ್ ಸೇರಿದ್ದ ಎನ್​.ವೈ ಗೋಪಾಲಕೃಷ್ಣ ಅವರಿಗೆ ಚಿತ್ರದುರ್ಗ ಜಿಲ್ಲೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್​ ಸಿಕ್ಕಿದೆ.   ಇನ್ನುಳಿದಂತೆ ಜೆಡಿಎಸ್​ನಿಂದ ಬಂದಿರುವ ಗುಬ್ಬಿ ಶ್ರೀನಿವಾಸ್​ಗೆ ಮಣೆ ಹಾಕಲಾಗಿದೆ.  ಇನ್ನು ಅರಸೀಕೆರೆ ಕ್ಷೇತ್ರದಿಂದ ಶಿವಲಿಂಗೇಗೌಡ ಸಂಭಾವ್ಯ ಅಭ್ಯರ್ಥಿ ಆದರೂ ಇನ್ನು ಪಕ್ಷ ಸೇರ್ಪಡೆ ಆಗದಿರುವ ಕಾರಣಕ್ಕೆ ಅವರಿಗೆ ಟಿಕೆಟ್​ ಈ ಪಟ್ಟಿಯಲ್ಲಿ ಘೋಷಣೆಯಾಗಿಲ್ಲ.

ಕೋಲಾರ ಟಿಕೆಟ್​ ಇನ್ನೂ ನಿಗೂಢ

ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಕಾದು ನೊಡುವ ತಂತ್ರ ಅನುಸರಿಸಿದೆ.  ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾದೊಂದಿಗೆ ಕೋಲಾರದಿಂದಲೂ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿಯೂ ಸಹ ಸಿದ್ದರಾಮಯ್ಯ ಅವರಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್​ ಮಟ್ಟದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್​ ಕೋಲಾರಕ್ಕೆ 2ನೇ ಪಟ್ಟಿಯಲ್ಲೂ ಅಭ್ಯರ್ಥಿ ಘೋಷಣೆ ಮಾಡದೇ ನಿಗೂಢವಾಗಿ ಉಳಿಸಿದೆ.

ಹಾಲಿ ಶಾಸಕರಿರು ಕ್ಷೇತ್ರಗಳ ಟಿಕೆಟ್​ ಪೆಂಡಿಂಗ್

ಪಕ್ಷದ ಹಾಲಿ ಶಾಸಕರಿರುವ ಕೆಲ ಕ್ಷೇತ್ರಗಳಿಗೂ ಹೈಕಮಾಂಡ್​ ಟಿಕೆಟ್​ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ಎಸ್​ಸಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಹುಲಗೇರಿ ಹಾಲಿ ಶಾಸಕರಿದ್ದಾರೆ. ಆದರೂ ಕಾಂಗ್ರೆಸ್​ ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನು ಹರಿಹರದಲ್ಲಿ ಹಾಲಿ ಶಾಸಕರಿದ್ದರು ಟಿಕೆಟ್ ಘೋಷಣೆ ವಿಳಂಬ ಮಾಡಿದೆ. ಎಸ್.ರಾಮಪ್ಪಗೆ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ಅವರನ್ನು ಬಿಟ್ಟು ಹೊಸ ಮುಖಕ್ಕೆ ಮಣೆ ಹಾಕಲು ಕಾಂಗ್ರೆಸ್ ಚಿಂತನೆ ನಡೆಸಿದೆ. ನಂದಿಗಾವಿ ಶ್ರೀನಿವಾಸ ಹಾಗೂ ರಾಜನಹಳ್ಳಿ ನಾಗೇಂದ್ರಪ್ಪ ಹರಿಹರ ಟಿಕೆಟ್ ರೇಸ್ ನಲ್ಲಿದ್ದಾರೆ.

ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ‌ ಇದ್ದಾರೆ. ಆದರೂ ಎರಡನೇ ಪಟ್ಟಿಯಲ್ಲಿ ಕುಂದಗೋಳ ಅಭ್ಯರ್ಥಿ ಘೋಷಣೆಯಾಗಿಲ್ಲ. ಹೈಕಮಾಂಡ್​ ಸರ್ವೆ ಪ್ರಕಾರ ಕುಸುಮಾ ಶಿವಳ್ಳಿ‌ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ಹೊಸಬರಿಗೆ ಟಿಕಟ್​ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇದರಿಂದ ಕಾದು ನೊಡುವ ತಂತ್ರ ಅನುಸರಿಸಿದೆ.

ಸಿದ್ದರಾಮಯ್ಯ ಪರಾಭವಗೊಂಡಿದ್ದ ಕ್ಷೇತ್ರದಲ್ಲಿ ಅಳೆದು ತೂಗಿ ಅಭ್ಯರ್ಥಿ

2018ರ ಚುನಾವಣೆಯಲ್ಲಿ ಯಾವು ಸೋಲುಕಂಡಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಚಾಮುಂಡೇಶ್ವರಿ ಕಾಂಗ್ರೆಸ್​ ಟಿಕೆಟ್​ಗಾಗಿ ಒಟ್ಟು 13 ಜನ ಆಕಾಂಕ್ಷಿಗಳಿದ್ದರು. ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಬದಲು ಜೆಡಿಎಸ್‌ನಿಂದ ‌ಬಂದ‌ ಸಿದ್ದೇಗೌಡಗೆ ಕಾಂಗ್ರೆಸ್ ಮಣೆ ಹಾಕಿದೆ. ಜೆಡಿಎಸ್‌ನಿಂದ ವಲಸೆ ಬಂದ ಮಾವನಹಳ್ಳಿ ಸಿದ್ದೇಗೌಡಗೆ ಚಾಮುಂಡೇಶ್ವರಿ ಟಿಕೆಟ್​ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಮಾವನಹಳ್ಳಿ ಸಿದ್ದೇಗೌಡ ಅವರು ಜಿ ಟಿ ದೇವೇಗೌಡ ಬೆಂಬಲಿಗರಾಗಿದ್ದರು. ಇತ್ತೀಚೆಗೆ ಅಷ್ಟೇ ಜಿ ಟಿ ದೇವೇಗೌಡ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅಭ್ಯರ್ಥಿ ಆಯ್ಕೆ ಕಗ್ಗಂಟು

ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರ ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಎರಡು ಕಡೆ ಸಿದ್ದರಾಮಯ್ಯ ವರ್ಸಸ್​ ಡಿ ಕೆ ಶಿವಕುಮಾರ್ ಎಂಬ ವಾತಾವರಣ ನಿರ್ಮಾಣವಾಗಿದೆ. ತಮ್ಮ ತಮ್ಮ ಬೆಂಬಲಿರಿಗೆ ಟಿಕೆಟ್​ ಕೊಡಿಸಲು ಕಸರತ್ತು ನಡೆಸಿದ್ದಾರೆ. ಇದರಿಂದ ಹೈಕಾಂಡ್​ ಈ ಕ್ಷೇತ್ರಗಳಿಗೆ 2ನೇ ಪಟ್ಟಿಯಲ್ಲೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಚಾಮರಾಜ ಕ್ಷೇತ್ರದ ಟಿಕೆಟ್​ಗಾಗಿ ಡಿಕೆ ಶಿವಕುಮಾರ್​ ಹಾಗೂ ವೀರಪ್ಪ ಮೊಯ್ಲಿ ಆಪ್ತ ಮಾಜಿ ಶಾಸಕ ವಾಸು ಕಸರತ್ತು ನಡೆಸುತ್ತಿದ್ದರೆ, ಮತ್ತಿಂದೆಡೆ ಸಿದ್ದರಾಮಯ್ಯ ಆಪ್ತ ಹರೀಶ್ ಗೌಡ ಸಹ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

ಇನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಮೂವರು ಪ್ರಬಲ ಟಿಕೆಟ್​ ಆಕಾಂಕ್ಷಿಗಳು ಇದ್ದಾರೆ. ಮಾಜಿ ಶಾಸಕ ಎಂ ಕೆ ಸೋಮಶೇಖರ್ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನು ಡಿಕೆ ಶಿವಕುಮಾರ್​ ಹೊಸ ಮುಖಗಳ ಪರ ನಿಂತಿದ್ದಾರೆ. ಪ್ರದೀಪ್ ಕುಮಾರ್ ಅಥವಾ ನವೀನ್ ಕುಮಾರ್​ಗೆ ಟಿಕೆಟ್​ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭಾ ಚುನಾಚವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕೀಯದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Thu, 6 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ