ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ: 1 ಲಕ್ಷಕ್ಕೂ ಹೆಚ್ಚು ಹಣ ಸೀಜ್
ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ ಆಗಿದೆ. ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 1 ಲಕ್ಷ 90 ಸಾವಿರ ರೂ. ಹಣವನ್ನು ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್ನಲ್ಲಿ ಸೀಜ್ ಮಾಡಲಾಗಿದೆ.
ಗದಗ: ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ ಆಗಿದೆ. ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 1 ಲಕ್ಷ 90 ಸಾವಿರ ರೂ. ಹಣವನ್ನು ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್ನಲ್ಲಿ ಸೀಜ್ (seized) ಮಾಡಲಾಗಿದೆ. ಆಂಧ್ರಪ್ರದೇಶದ ಅನಂತಪುರದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ತೆರಳುತ್ತಿದ್ದಾಗ ಚೆಕ್ ಪೋಸ್ಟ್ನಲ್ಲಿ ತಪಾಸಣೆ ವೇಳೆ ಕಾರ್ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಇತ್ತೀಚೆಗೆ ಗದಗ ಪಟ್ಟಣ ಪೊಲೀಸರು ಅಕ್ರಮವಾಗಿ ಸಾಗಿಸುತ್ತಿದ್ದ ₹15 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವೇಳೆ ಬೆಳಗಾವಿಯಲ್ಲಿ ಬುಧವಾರ ಕಣಬರ್ಗಿ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆಗಳಿಲ್ಲದೆ ₹9 ಲಕ್ಷ ನಗದು ವಶಪಡಿಸಿಕೊಂಡಿದ್ದು, ಬೆಳಗಾವಿ ನಗರದಿಂದ ಅಂಕಲಗಿ ಕಡೆಗೆ ಹೋಗುತ್ತಿದ್ದ ಕಾರನ್ನು ಪರಿಶೀಲಿಸಿದಾಗ ಲೆಕ್ಕಕ್ಕೆ ಸಿಗದ ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಒಂದೇ ದಿನ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.90 ಕೋಟಿ ಹಣ ಜಪ್ತಿ
ಕಲಬುರಗಿ: ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ತಡೆಯಲು 42 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, ಒಂದೇ ದಿನ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.90 ಕೋಟಿ ಹಣ ಜಪ್ತಿಯಾಗಿದೆ. ಕಮಲಾಪುರ ತಾಲೂಕಿನ ಕಿಣ್ಣಿಸಡಕ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ 1.40 ಕೋಟಿ ಪತ್ತೆಯಾಗಿದ್ದು, ಜೇವರ್ಗಿ ಚೆಕ್‌ಪೋಸ್ಟ್‌ನಲ್ಲಿ 50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಒಂದೇ ಒಟ್ಟು 1.90 ಕೋಟಿ ಹಣ ಪತ್ತೆಯಾಗಿರುವ ಬಗ್ಗೆ ಗುರುವಾರ ಕಲಬುರಗಿ ಉಪ ಪೊಲೀಸ್ ಆಯುಕ್ತ ಯಶವಂತ ವಿ.ಗುರುಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ರಮೇಶ್ ಜಾರಕಿಹೊಳಿ ಆಪ್ತನ ಭಾವಚಿತ್ರವಿರುವ ಟಿಫಿನ್ ಬಾಕ್ಸ್‌ಗಳ ಜಪ್ತಿ
ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳು, ಲಕ್ಷ ಲಕ್ಷ ಹಣ ಜಪ್ತಿ
ಬೆಳಗಾವಿ: ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ 16 ಲಕ್ಷ ಮೌಲ್ಯದ ಸೀರೆಗಳನ್ನು ಚಿಕ್ಕೋಡಿ ತಾಲೂಕಿನ ಸದಲಗಾ ದತ್ತವಾಡ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ, ದತ್ತವಾಡ, ರಾಯಬಾಗ ಕ್ಷೇತ್ರದಲ್ಲಿ ಹಂಚಲು ಸೀರೆಗಳನ್ನು ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ವಾಹನ ಚಾಲಕ, ಕ್ಲೀನರ್ ಮತ್ತು 5 ಸಾವಿರ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬೆಳಗಾವಿಯಿಂದ ಗೋಕಾಕ್ ತಾಲೂಕಿನ ಅಂಕಲಗಿಗೆ ತೆರಳುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 9 ಲಕ್ಷ ಹಣವನ್ನು ಪೊಲೀಸರು ಬೆಳಗಾವಿ ಹೊರವಲಯದ ಕಣಬರಗಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕಾಫಿನಾಡಲ್ಲಿ ಮೂರೇ ದಿನಕ್ಕೆ ಮೂರು ಕೋಟಿಯಷ್ಟು ವಿವಿಧ ಸಾಮಾಗ್ರಿಗಳು ಸೀಜ್
ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯ ವಶ
ಉತ್ತರ ಕನ್ನಡ: ಜಿಲ್ಲೆ ಕಾರವಾರ ತಾಲೂಕಿನ ಹೋಟೆಗಾಳಿ ಗ್ರಾಮ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಹೋಟೆಗಾಳಿಯ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್, ಮನೋಜ ಕೋಳಂಬಕರ್ ಬಂಧಿತ ಆರೋಪಿಗಳು. ಅಬಕಾರಿ ಉಪಾಧೀಕ್ಷಕ ಬಸವರಾಜ್, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ತಂಡದಿಂದ ದಾಳಿ ನಡೆದಿತ್ತು. ಈ ವೇಳೆ 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್, ಸುಮಾರು 1.88 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Fri, 24 March 23