ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ​ ಫಲಿತಾಂಶದ ಅಧಿಕೃತ ಅಂಕಿ-ಸಂಖ್ಯೆ ತಿಳಿಯಿರಿ

ಕರ್ನಾಟಕದ 224 ಕ್ಷೇತ್ರಗಳಿಗೆ ನಡೆದಿದ್ದ ಮತದಾನದ ಮತ ಎಣಿಕೆ ಕಾರ್ಯ ನಡೆದಿದ್ದು, ವಿವಿಧ ಮಾಧ್ಯಮಗಳು ಬೇರೆ ನಂಬರ್ಸ್​ಗಳನ್ನು ತೋರಿಸುತ್ತಿವೆ. ಇದರ ಮಧ್ಯೆ ಅಧಿಕೃತವಾಗಿ ಚುನಾವಣಾ ಆಯೋಗ ಸಹ ಫಲಿತಾಂಶ ನಂಬರ್ಸ್​ ನೀಡುತ್ತಿದೆ.

ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ​ ಫಲಿತಾಂಶದ ಅಧಿಕೃತ ಅಂಕಿ-ಸಂಖ್ಯೆ ತಿಳಿಯಿರಿ

Updated on: May 13, 2023 | 10:09 AM

ಬೆಂಗಳೂರು: ಕರ್ನಾಟಕದ 224 ಕ್ಷೇತ್ರಗಳಿಗೆ ನಡೆದಿದ್ದ ಮತದಾನದ ಮತ ಎಣಿಕೆ ಕಾರ್ಯ ನಡೆದಿದ್ದು, ಅಭ್ಯರ್ಥಿಗಳಲ್ಲಿ ಕ್ಷಣಕ್ಷಣಕ್ಕೂ ತಳಮಳ.. ರಾಜಕೀಯ ನಾಯಕರಲ್ಲಿ ಟೆನ್ಷನ್.. ಕರುನಾಡ ಜನತೆಯಲ್ಲಿ ಹೆಚ್ಚಿದ ಕೌತುಕ. ಅಭಿಮಾನಿಗಳು, ಕಾರ್ಯಕರ್ತರಲ್ಲೂ ತವಕ. ಹೌದು ಕರ್ನಾಟಕದ 224 ಕ್ಷೇತ್ರಗಳಲ್ಲಿ ರಾಜ್ಯದ ಮತದಾರರು ಬರೆದಿರುವ 2615 ಅಭ್ಯರ್ಥಿಗಳ ಹಣೆಬರಹ ಇನ್ನೇನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿದೆ.ಮತ ಎಣಿಕೆ ಸಂಬಂಧ ವಿವಿಧ ಮಾಧ್ಯಮಗಳು ಆರಂಭದಲ್ಲಿ ನಾನಾ ರೀತಿಯ ನಂಬರ್ಸ್ ತೋರಿಸುತ್ತಿವೆ. ಮತ್ತೊಂದೆಡೆ ಕರ್ನಾಟಕ ಚುನಾವಣಾ ಆಯೋಗ ಸಹ ತನ್ನ ವೆಬ್​ಸೈಟ್​ ಮೂಲಕ ಬಿಜೆಪಿ ಕಾಂಗ್ರೆಸ್ ಸ್ಥಾನಗಳ ಅಂಕಿ-ಸಂಖ್ಯೆಯನ್ನು ನೀಡುತ್ತಿದ್ದು, ಅದು ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Karnataka Election Results 2023 Live: ಮತ ಎಣಿಕೆ ಆರಂಭ, ಯಾರು ಮುನ್ನಡೆ? ಯಾರು ಹಿನ್ನಡೆ? ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ ಎನ್ನುವ ನಿಖರ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಅಪ್ಡೇಟ್​ ಮಾಡುತ್ತಿದೆ.

ಚುನಾವಣಾ ಆಯೋಗದ ವೆಬ್​ಸೈಟ್​​ನಲ್ಲಿ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚುನಾವಣಾ ಫಲಿತಾಂಶದ ನೇರಪ್ರಸಾರ

Published On - 10:06 am, Sat, 13 May 23

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us