
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಕಂಡಿದ್ದಾರೆ. ಬಿಜೆಪಿಯ ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ. ಹಾಗೂ ಸಚಿವರಾಗಿ ಅವರ ಕಾರ್ಯವೈಖರಿ ಬಗ್ಗೆ ಕೂಡ ಅಸಮಾಧಾನ ಇದ್ದಂತೆ ಈ ಫಲಿತಾಂಶವನ್ನು ವ್ಯಾಖ್ಯಾನಿಸಬಹುದು. 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ. ಹಾಗಾದ್ರೆ, ಸಚಿವರಲ್ಲಿ ಯಾರೆಲ್ಲ ಸೋತಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬಾಗಲಕೋಟೆ ಜಿಲ್ಲೆಯ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಮುಧೋಳದಲ್ಲಿ ಹಳೆ ಹುರಿಯಾಳುಗಳ ಕಾದಾಟದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಆರ್.ಬಿ ತಿಮ್ಮಾಪೂರ ಗೆಲುವು ಸಾಧಿಸಿದ್ದಾರೆ. ತಿಮ್ಮಾಪೂರ ಹಾಗೂ ಕಾರಜೋಳ ನಡುವೆ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಆರ್‌ಬಿ ತಿಮ್ಮಾಪೂರ ಅವರು 70,478 ಮತಗಳನ್ನು ಪಡೆದು, ಗೋವಿಂದ್ ಕಾರಜೋಳ ಅವರನ್ನು 16,396ಮತಗಳ ಅಂತರದಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಗೋವಿಂದ್ ಕಾರಜೋ:ಳ ಅವರು 54,082 ಮತಗಳನ್ನು ಪಡೆದಿದ್ದಾರೆ.
ಮತ ಎಣಿಕೆ ಕಾರ್ಯ ಇನ್ನು ಮುಂದುವರಿದಿದ್ದು, ಇನ್ನು ಯಾರೆಲ್ಲ ಗೆಲ್ಲಲಿದ್ದಾರೆ? ಯಾರೆಲ್ಲ ಸೋಲಲಿದ್ದಾರೆ ಎನ್ನುವ ಕ್ಷಣ ಕ್ಷಣದ ಮಾಹಿತಿ ನೋಡುತ್ತಿರಿ.
Published On - 1:30 pm, Sat, 13 May 23