ಕೊನೆ ಕ್ಷಣದಲ್ಲಿ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಈಶ್ವರಪ್ಪ, ಕಾಂತೇಶ್​ ಹೇಳಿದ್ದೇನು?

|

Updated on: Apr 20, 2023 | 9:19 AM

ಶಿವಮೊಗ್ಗ ನಗರ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್​ ಮೊದಲ ಪ್ರತಿಕ್ರಿಯೆ ನೀಡಿದ್ದು, ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ.

ಕೊನೆ ಕ್ಷಣದಲ್ಲಿ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್​ ಕೈತಪ್ಪಿದ್ದಕ್ಕೆ ಈಶ್ವರಪ್ಪ, ಕಾಂತೇಶ್​ ಹೇಳಿದ್ದೇನು?
ಈಶ್ವರಪ್ಪ ಮತ್ತು ಕಾಂತೇಶ್
Follow us on

ಶಿವಮೊಗ್ಗ: ತೀವ್ರ ಕಗ್ಗಂಟಾಗಿದ್ದ ಹಾಗೂ ಕುತೂಹಲ ಹುಟ್ಟುಹಾಕಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ನಾಮಪತ್ರ ಸಲ್ಲಿಕೆ ಕೊನೆ ದಿನಕ್ಕೆ ಒಂದು ದಿನ ಮೊದಲು ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಅಂತಿಮವಾಗಿ ಚನ್ನಬಸಪ್ಪ ಎನ್ನುವರಿಗೆ ಬಿಜೆಪಿ ಮಣೆ ಹಾಕಿದ್ದು, ಟಿಕೆಟ್​ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆಎಸ್ ಈಶರಪ್ಪ ಪುತ್ರ ರಾಕೇಶ್​ಗೆ ನಿರಾಸೆಯಾಗಿದೆ. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಕಣದಿಂದ ಹಿಂದೆ ಸರಿದಿದ್ದ ಈಶ್ವರಪ್ಪ ಅವರು ತಮ್ಮ ಪುತ್ರ ರಾಕೇಶ್​ನಿಗೆ ಟಿಕೆಟ್​ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೂ ಬಿಜೆಪಿ ಹೈಕಮಾಂಡ್​ ಈಶ್ವರಪ್ಪ ಅವರಿಗೆ ಶಾಕ್ ಕೊಟ್ಟಿದೆ. ಇನ್ನು ಟಿಕೆಟ್​ ಸಿಗದಿದ್ದಕ್ಕೆ ಕಾಂಗತೇಶ್​ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ.

ಇದನ್ನೂ ಓದಿ: BJP Candidates Final List: ಬಿಜೆಪಿ ಕೊನೇ ಪಟ್ಟಿ ಬಿಡುಗಡೆ; ಕೆ.ಎಸ್.ಈಶ್ವರಪ್ಪ ಕುಟುಂಬಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್ 

ಪುತ್ರನಿಗೆ ಟಿಕೆಟ್​ ಕೈತಪ್ಪಿದ್ದಕ್ಕೆ ಈಶ್ವರಪ್ಪ ಹೇಳಿದ್ದೇನು?

ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್​​ ನೀಡಿದ್ದಕ್ಕೆ ಸಂತಸ ಆಗಿದೆ. ಚನ್ನಬಸಪ್ಪ ಬಿಜೆಪಿಯ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಬಿಜೆಪಿ ಸಂಘಟನೆಯಲ್ಲಿ ಚನ್ನಬಸಪ್ಪ ಪ್ರಮುಖ ಪಾತ್ರವಹಿಸಿದ್ದಾರೆ. ಆಡಳಿತದಲ್ಲಿ ಅನುಭವ ಇರುವ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದೆ. ಕಾಂತೇಶ್​​ಗೆ ಟಿಕೆಟ್​​ ನೀಡಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಯಾವುದೇ ಪ್ರಶ್ನೆ ಮಾಡದಂತೆ ಚನ್ನಬಸಪ್ಪ ಗೆಲ್ಲಿಸಲು ಶ್ರಮಿಸಬೇಕು ಎಂದು ಹೇಳಿದರು.

ನಗರಸಭಾ ಅಧ್ಯಕ್ಷ, ಪಾಲಿಕೆ ಆಡಳಿತ ಪಕ್ಷದ ನಾಯಕ, ಪಾಲಿಕೆ ಸದಸ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಆಗಿ ಅನುಭವ ಇದೆ. ಆಡಳಿತ ಅನುಭವ ಇರುವ ವ್ಯಕ್ತಿಗೆ ಬಿಜೆಪಿಯ ಪಕ್ಷ ಮಣೆ ಹಾಕಿದೆ. ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧವಾಗಿರಬೇಕು. ಹೆಚ್ಚು ಅಂತರದಿಂದ ಚನ್ನಬಸಪ್ಪ ಅವರನ್ನು ಗೆಲ್ಲಿಸುತ್ತೇವೆ. ಕಾಂತೇಶ್ ಗೆ ಟಿಕೆಟ್ ಗಾಗಿ ಬೆಂಬಲಿಗರ ಒತ್ತಾಯ ಇತ್ತು. ಆದ್ರೆ ಪಕ್ಷ ತೀರ್ಮಾನಕ್ಕೆ ಬದ್ಧವಾಗಿದ್ದು. ಯಾವುದೇ ಪ್ರಶ್ನೆ ಮಾಡದಂತೆ ಚನ್ನಬಸಪ್ಪ ಗೆಲ್ಲಿಸಲು ಎಲ್ಲರೂ ಪರಿಶ್ರಮವಹಿಸಬೇಕು. ಬಿಜೆಪಿ ಶಿವಮೊಗ್ಗ ನಗರ, ಜಿಲ್ಲೆ ಹಾಗೂ ರಾಜ್ಯದಲ್ಲೂ ಗೆಲ್ಲಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂತೇಶ್ ಈಶ್ವರಪ್ಪ ಹೇಳಿದ್ದೇನು?

ಇನ್ನು ಈ ಬಗ್ಗೆ ಶಿವಮೊಗ್ಗದಲ್ಲಿ ಇಂದು(ಏಪ್ರಿಲ್ 20) ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತೇಶ್​, ತಂದೆ ಮತ್ತು ಸಂಘಟನೆ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ. ಟಿಕೆಟ್ ಸಿಗದಿರುವುದಕ್ಕೆ ಅಭಿಮಾನಿಗಳಿಗೆ ಬೇಸರ ಆಗಿದೆ. ಈಗಲೂ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಅವರು ಪಕ್ಷೇತರ ಆಗಿ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದರು. ಇದೇ ಪಕ್ಷ ತಂದೆಗೆ ಎಲ್ಲವನ್ನು ಕೊಟ್ಟಿದೆ. ಸೋತ ಸಂದರ್ಭ ದಲ್ಲಿ ಅಧಿಕಾರ ಕೊಟ್ಟಿದೆ. ಇದೇ ಪಕ್ಷದಲ್ಲಿ ಇದ್ದು ಇದೇ ಪಕ್ಷದಲ್ಲಿ ಸಾಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪಕ್ಷ ನನಗೂ ಗುರುತಿಸಿ ಮುಂದಿನ ದಿನಗಳಲ್ಲಿ. ಜವಾಬ್ದಾರಿ ನೀಡುವ ವಿಶ್ವಾಸ ಇದೆ. ಈಗ ನನಗೆ 43 ವಯಸ್ಸಾಗಿದ್ದು, ಈಗ ತಾನೇ. ನನ್ನ ರಾಜಕೀಯ ಜೀವನ ಆರಂಭ ಆಗಿದೆ. ಬರುವ ದಿನಗಳು ನನಗೆ ಒಳ್ಳೆಯ ಅವಕಾಶ ಸಿಗುವ ವಿಶ್ವಾಸ ಇದೆ ಎಂದರು. ಈ ಮೂಲಕ ಟಿಕೆಟ್​ ಸಿಗದಿದ್ದರೂ ಅಸಮಾಧಾನ ಇಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ತಮ್ಮ ನಿಲುವು ಪ್ರಕಟಿಸಿದರು.

ಶಿವಮೊಗ್ಗ ನಗರ ಟಿಕೆಟ್​ ಸಿಕ್ಕದ್ದಕ್ಕೆ ಸಂತಸಗೊಂಡ ಚನ್ನಬಸಪ್ಪ

ಇನ್ನು ಅಚ್ಚರಿ ಎಂಬಂತೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​​ ಚನ್ನಬಸಪ್ಪಗೆ ಸಿಕ್ಕಿದೆ. ಇನ್ನು ಈ ಬಗ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಶಿವಮೊಗ್ಗ ಕ್ಷೇತ್ರದ ಟಿಕೆಟ್​ ನೀಡಿದ್ದಕ್ಕೆ ಪಕ್ಷಕ್ಕೆ ಧನ್ಯವಾದ. ಕೆಎಸ್​ ಈಶ್ವರಪ್ಪ ಹಾಕಿಕೊಟ್ಟ ಮಾರ್ಗದಲ್ಲೇ ಹೋಗುತ್ತೇನೆ. ಬಿಎಸ್​ ಯಡಿಯೂರಪ್ಪ ಹೋರಾಟದ ಬಗ್ಗೆ ಹೇಳಿಕೊಟ್ಟವರು. ಕಾರ್ಯಕರ್ತರ ಪರಿಶ್ರಮದಿಂದ ಟಿಕೆಟ್​ ದೊರೆತಿದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್​​​ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಎಲ್ಲಾ ಟಿಕೆಟ್​ ಆಕಾಂಕ್ಷಿಗಳು ಬಿಜೆಪಿ ಗೆಲುವಿಗೆ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಹಿಂದುತ್ವದ ನೆಲೆ ಇದೆ. ಹಿಂದುತ್ವಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದೇವೆ. ಅದನ್ನು ಮುಂದುವರಿಸಿಕೊಂಡು‌ ಹೋಗುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ವಾಜಪೇಯಿ ಅವರ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಅನೇಕ ಮಂದಿ ಆಕಾಂಕ್ಷಿಗಳು ಇದ್ದರು. ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ಸಿಕ್ಕಿದ್ದರಿಂದ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ