ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ: ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು

| Updated By: Rakesh Nayak Manchi

Updated on: Apr 27, 2023 | 11:03 PM

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನೇ ಬಿಜೆಪಿ ನಾಯಕರು ರಾಜಕೀಯ ಅಸ್ತ್ರವಾಗಿಸಿಕೊಳ್ಳುತ್ತಿದ್ದು, ಖರ್ಗೆ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ: ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು
ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ
Follow us on

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ, ನೆಕ್ಕಿದರೆ ಸತ್ತು ಹೋಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನೇ ಬಿಜೆಪಿ ನಾಯಕರು ರಾಜಕೀಯ ಅಸ್ತ್ರವಾಗಿಸಿಕೊಳ್ಳುತ್ತಿದ್ದು, ಖರ್ಗೆ ವಿರುದ್ಧ ವಾಗ್ದಾಳಿ ಮಾಡುತ್ತಿದ್ದಾರೆ. ಸದ್ಯ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಪಕ್ಷ ಇಂತಹ ನಿರ್ಲಜ್ಜ ಪಕ್ಷವೆಂದರೆ ಮೋದಿ ಸಾವಿನ ಕೂಪಕ್ಕೆ ತಳ್ಳುವ ಆಹ್ವಾನ ನೀಡಿತ್ತು ಎಂದು ಕಿಡಿಕಾರಿದ್ದಾರೆ. ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆ ಕ್ಷಮೆ ಕೇಳಿದ್ದಾರೆ.

ಕಾಂಗ್ರೆಸ್​ ಪಕ್ಷದ ಇತಿಹಾಸ ಹೇಗಿದೆ ಅರ್ಥ ಮಾಡಿಕೊಳ್ಳಿ

ಬೆಳಗಾವಿ ತಾಲೂಕಿನ ಹಿಂಡಲಗಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಂಗ್ರೆಸ್‌ ಪಕ್ಷ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ. ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್. ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಅಂದರೆ ದಲಿತ ನಾಯಕನಾದರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ ಎಂದು ಹರಿಹಾಯ್ದಿದಿದ್ದಾರೆ.

ಚುನಾವಣೆಯಲ್ಲಿ ಸೋಲುವ ಭಯದಿಂದ ಖರ್ಗೆ ಹೀಗೆ ಹೇಳಿದ್ದಾರೆ

ದೇಶದಲ್ಲಿ ಮೊದಲ ಬಾರಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಅಭ್ಯರ್ಥಿ ಮಾಡಿದರೆ, ಅವರ ಬಗ್ಗೆ ಅವಹೇಳನ ಹೇಳಿಕೆ ನೀಡುವಂತ ಪಕ್ಷ ಕಾಂಗ್ರೆಸ್. ನಿಮ್ಮ ಪಕ್ಷ ಹಿಂದೂ ಸಮಾಜಕ್ಕೆ ಅಪಮಾನ ಮಾಡುವರನ್ನು ಸ್ಟಾರ್ ಪ್ರಚಾರಕ ಮಾಡಿದೆ. ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಬೆಂಬಲ ಕೇಳುತ್ತೆ. ಪಿಎಫ್ಐ ಗೂಂಡಾಗಳನ್ನು ಬಿಡುಗಡೆ ಮಾಡುವ ಮಾತುಗಳನ್ನಾಡುತ್ತೆ. ಇಂದು ಕಾಂಗ್ರೆಸ್‌ ನಾಯಕರು ಮತ್ತೊಮ್ಮೆ ನರೇಂದ್ರ ಮೋದಿಗೆ ಬೈಯ್ಯುತ್ತಿದ್ದಾರೆ. ಖರ್ಗೆ ಸಾಹೇಬರು ವಯಸ್ಸಿನಲ್ಲಿ ನನಗಿಂತ ದೊಡ್ಡವರು, ನಿಮಗೆ ಈ ಅಭದ್ರತೆ ಶೋಭೆ ತರಲ್ಲ ಎಂದರು.

ಇದನ್ನೂ ಓದಿ: Geetha Shivarajkumar: ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿರುವ ಗೀತಾ ಶಿವರಾಜ್​ಕುಮಾರ್

ಕಾಂಗ್ರೆಸ್‌ ಪಕ್ಷ ಮೋದಿ ಹಠಾವೋ ವ್ಯಾಕ್ಸಿನ್ ಹಠಾವೋ ವಿದೇಶದಿಂದ ವ್ಯಾಕ್ಸಿನ್ ತರಿಸಿ ಅನ್ನುತ್ತಿದ್ದರು. 160 ದೇಶಗಳಲ್ಲಿ ಭಾರತದ ವ್ಯಾಕ್ಸಿನ್ ಹೋಗಿದೆ. ವಿನಮ್ರತೆಯಿಂದ ನಾನು ಖರ್ಗೆಯವರಿಗೆ ಹೇಳಬಯಸುವೆ, ಕರ್ನಾಟಕ ಚುನಾವಣೆ ಸೋಲುವವರಿದ್ದೀರಿ ಅದಕ್ಕೆ ಹೀಗೆ ಹೇಳುತ್ತಿದ್ದೀರಿ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಗಳ ಎಲ್ಲರಿಗೂ ಗೊತ್ತು. ನಾವು ರಾಜ್ಯದ ಜನರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆಗೆ ಇದನ್ನು ಸಹಿಸಲು ಆಗುತ್ತಿಲ್ಲ: ಧರ್ಮೇಂದ್ರ ಪ್ರಧಾನ್

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್​ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಾನು ಹತ್ತಿರದಿಂದ ಬಲ್ಲೆ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಪ್ರಧಾನಿ ಮೋದಿಗೆ ಅಪಾರ ಗೌರವವಿದೆ. ದುರ್ಯೋಧನ, ಚಾಯ್ ವಾಲಾ, ಹುಳ ಎಂಬ ಪದವೆಲ್ಲ ಬಳಸಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ವರುಣ ಕ್ಷೇತ್ರದಲ್ಲಿ ಸೋಮಣ್ಣಗೆ ಶಾಕ್​ ಕೊಡಲು ಕಾಂಗ್ರೆಸ್​ ಪ್ಲ್ಯಾನ್​: ಯಡಿಯೂರಪ್ಪ ಆಪ್ತನಿಗೆ ಗಾಳ ಹಾಕಿದ ಕಾಂಗ್ರೆಸ್​​

ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಡರೆ ಗೌರವ ಇದೆ. ಮಲ್ಲಿಕಾರ್ಜುನ ಖರ್ಗೆಗೆ ಇದನ್ನು ಸಹಿಸಲು ಆಗುತ್ತಿಲ್ಲ.​ ಮಲ್ಲಿಕಾರ್ಜುನ ಖರ್ಗೆ ಅನಾಗರಿಕರಂತೆ ಮೋದಿ ಬಗ್ಗೆ ಮಾತಾಡಿದ್ದಾರೆ. ಖರ್ಗೆಯವರ ರಾಜಕೀಯ ಮಾಲೀಕರು ಈ ರೀತಿ ಹೇಳಿಸಿದ್ದಾರೆ. ಮೋದಿ ಬಗ್ಗೆ ಖರ್ಗೆ ಮಾತನಾಡಿರುವುದನ್ನು ಯಾರೂ ಒಪ್ಪಲ್ಲ ಎಂದು ಹೇಳಿದರು.

ಭ್ರಷ್ಟಚಾರಿಗಳ ವಿರುದ್ದ ಮೋದಿ ವಿಷ ಸರ್ಪವೆ: ಸಿಟಿ ರವಿ

ಪ್ರಧಾನಿ ನರೇಂದ್ರ ಮೋದಿಯನ್ನು ವಿಷ ಸರ್ಪಕ್ಕೆ ಹೊಲಿಕೆ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಭ್ರಷ್ಟಚಾರಿಗಳ ವಿರುದ್ದ ಮೋದಿ ವಿಷ ಸರ್ಪವೆ. ದೇಶ ಭಕ್ತರಿಗೆ ಮೋದಿ ರಕ್ಷಣೆ ಕೊಡುತ್ತಾರೆ. ಭ್ರಷ್ಟಚಾರಿಗಳಿಗೆ ವಿಷ ಸರ್ಪವಾಗಿ ಮುಗಿಸುತ್ತಾರೆ ಎಂದು ಚಿಕ್ಕಬಳ್ಲಾಫುರ ಜಿಲ್ಲಯ ಬಾಗೇಪಲ್ಲಿ ಪಟ್ಟಣದಲ್ಲಿ ವಾಗ್ದಾಳಿ ಮಾಡಿದ್ದಾರೆ.

ಖರ್ಗೆ ಹೇಳಿಕೆಗೆ ಪ್ರಲ್ಹಾದ ಜೋಶಿ ತಿರುಗೇಟು

ಭಾರತದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಪ್ರಧಾನಿಯನ್ನು ವಿಷ ಸರ್ಪ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಷ ಉಗುಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿರುವ ಅವರು ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ, ವಿದೇಶಿ ಪ್ರಜೆಯ ಸೇವೆ ಮಾಡುವ ಹಾಗೂ ಭಾರತದ ಪ್ರಧಾನಮಂತ್ರಿಯನ್ನು ನಿಂದಿಸುವ ನಾಯಕರೇ ಕಾಂಗ್ರೆಸ್ ಪಕ್ಷದ ತುಂಬಾ ತುಂಬಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಳೆ ನಮ್ಮೆಲ್ಲರ ಹಣೆಯ ಕುಂಕುಮ ಅಳಿಸಿ ಹಾಕಬಹುದು: ಬಿಎಲ್​ ಸಂತೋಷ್

ಟ್ವೀಟ್ ಮೂಲಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಇಂದು ತಮ್ಮ ಹಣೆಯ ಕುಂಕುಮವನ್ನು ಅಳಿಸಿ ಹಾಕಿದವರು ನಾಳೆ ನಮ್ಮೆಲ್ಲರ ಹಣೆಯ ಕುಂಕುಮ ಅಳಿಸಿ ಹಾಕಬಹುದು ಎಂದರು.


ಜನರಿಂದ ಪ್ರಜಾಪ್ರಭುತ್ವದ ಅಡಿಯಲ್ಲಿ ಆಯ್ಕೆಯಾಗಿ, ರಾಷ್ಟ್ರವೇ ತನ್ನ ಕುಟುಂಬ ಎಂದು ಅವಿರತವಾಗಿ ಜನ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವ ನಾಯಕರಾಗಿದ್ದಾರೆ ಎಂದಿರುವ ಅವರು, ದೇಶದ 140 ಕೋಟಿ ಭಾರತೀಯರ ಪ್ರಧಾನ ಸೇವಕರು ನಮ್ಮ ನರೇಂದ್ರ ಮೋದಿ ಎಂಬುದನ್ನ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Thu, 27 April 23