Mangalore North Election 2023 Winner; ಬಿಜೆಪಿಯಿಂದ ಭರತ್​ ಶೆಟ್ಟಿ ಗೆಲುವು, ಎಲ್ಲ ಗೊಂದಲಕ್ಕೂ ತೆರೆ

|

Updated on: May 13, 2023 | 3:25 PM

ಈ ಬಾರಿಯ ಬಿಜೆಪಿ ಅಭ್ಯರ್ಥಿ ಭರತ್​ ಶೆಟ್ಟಿ ಅವರ ಜಯಶಾಲಿಯಾಗಿದ್ದಾರೆ. ಒಂದು ರೀತಿಯಲ್ಲಿ ಇಲ್ಲಿ ಗೊಂದಲ ಇದ್ದರು ಈ ಬಾರಿ ಬಿಜೆಪಿಯೇ ಬಂದಿದೆ.

Mangalore North Election 2023 Winner; ಬಿಜೆಪಿಯಿಂದ ಭರತ್​ ಶೆಟ್ಟಿ ಗೆಲುವು, ಎಲ್ಲ ಗೊಂದಲಕ್ಕೂ ತೆರೆ
ಭರತ್​​ ಶೆಟ್ಟಿ
Follow us on

ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ (Mangalore North South Assembly Constituency) ಕಾಂಗ್ರೆಸ್​​ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಗೆಲುವು ಸಾಧಿಸಿದೆ. ಭಾರೀ ಅಂತರದ ಮತದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಬಿಜೆಪಿ ಅಭ್ಯರ್ಥಿ ಭರತ್​ ಶೆಟ್ಟಿ ಅವರ ಜಯಶಾಲಿಯಾಗಿದ್ದಾರೆ. ಒಂದು ರೀತಿಯಲ್ಲಿ ಇಲ್ಲಿ ಗೊಂದಲ ಇದ್ದರು ಈ ಬಾರಿ ಬಿಜೆಪಿಯೇ ಬಂದಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಮುಸ್ಲಿಂರ ಮತ ಇನಾಯತ್​​ ಆಲಿಗೆ ಹೋಗಿದೆ. ಇಲ್ಲಿ ಈ ಬಾರಿ ಗೆಲ್ಲುವುದು ಅಷ್ಟು ಸುಲಭ ಮಾತ ಅಲ್ಲ, ಆದರೆ ಈ ಬಾರಿ ಈ ಎಲ್ಲ ಗೊಂದಲಕ್ಕೆ ಭರತ್​​ ಶೆಟ್ಟಿ ಗೆಲುವಿನ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಭರತ್​​ ಶೆಟ್ಟಿಗೆ ಅವರಿಗೆ ಕಾಂಗ್ರೆಸ್​​ನಿಂದ ಇನಾಯತ್​​ ಆಲಿ ಪೈಪೋಟಿ ನೀಡಿದ್ದು ಸೋತಿದ್ದಾರೆ, ಇಲ್ಲಿ ಭರತ್​ ಶೆಟ್ಟಿಗೆ ಹಿನ್ನಡೆಯಾಗಲು ಮುಸ್ಲಿಂ ಮತಗಳು ಕಾರಣವಾಗಬಹುದು ಎಂದು ಹೇಳಾಲಾಗಿತ್ತು. ಆದರೆ ಎಲ್ಲ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಇನ್ನೂ ಇಲ್ಲಿ ಜೆಡಿಎಸ್​​ನಿಂದ ಸುಮತಿ ಹೆಗ್ಡೆ ಸ್ಪರ್ಧಿಸುತ್ತಿದ್ದರು, ಅವರು ಕೂಡ ಹೀನಾಯ ಸೋಲು ಅನುಭವಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ