ಬಿಜೆಪಿ ಸೇರಿ ಸಚಿವರಾದ 3 ವರ್ಷಗಳಲ್ಲಿ ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಶೇ 23ರಷ್ಟು ಹೆಚ್ಚಳ!
ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವ ಸ್ಥಾನ ಪಡೆದ ಎಂಟಿಬಿ ನಾಗರಾಜ್ ಅವರ ಆಸ್ತಿ ಕೇಲವ ಮೂರೇ ವರ್ಷಗಳಲ್ಲಿ ಶೇ 23ರಷ್ಟು ಹೆಚ್ಚಳವಾಗಿದೆ.
ಎಂಟಿಬಿ ನಾಗರಾಜ್ ಆಸ್ತಿ ವಿವರ
Rakesh Nayak Manchi
Updated on:
Apr 17, 2023 | 7:32 PM
ಬೆಂಗಳೂರು: ಕರ್ನಾಟಕದ ಶ್ರೀಮಂತ ರಾಜಕಾರಣಗಳಿಲ್ಲಿ ಒಬ್ಬರಾಗಿರುವ ಸಚಿವ ಎಂಟಿಬಿ ನಾಗರಾಜ್ (MTB Nagaraj) ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಒಟ್ಟು ಆಸ್ತಿ ವಿವರವನ್ನೂ ಘೋಷಣೆ ಮಾಡಿದ್ದಾರೆ. ಅಚ್ಚರಿ ಎಂದರೆ, 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವ ಸ್ಥಾನ ಪಡೆದ ಎಂಟಿಬಿ ನಾಗರಾಜ್ ಅವರ ಆಸ್ತಿ ಕೇವಲ ಮೂರೇ ವರ್ಷಗಳಲ್ಲಿ ಶೇ 23ರಷ್ಟು ಹೆಚ್ಚಳವಾಗಿದೆ. ಸಲ್ಲಿಸಿದ ಆಸ್ತಿ ವಿವರಗಳ ಪ್ರಕಾರ, ಎಂಟಿಬಿ ಅವರು ಒಟ್ಟು 1510 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಹಾಗಿದ್ದರೆ ಎಂಟಿಬಿ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಏನೇನಿದೆ? ಎಷ್ಟೆಷ್ಟಿದೆ? ಎಂಬುದು ಇಲ್ಲಿದೆ.
ಎಂಟಿಬಿ ನಾಗರಾಜ್ ಹೆಸರಿನಲ್ಲಿ ಚರಾಸ್ತಿ-ಚಿರಾಸ್ತಿ
ಚರಾಸ್ತಿ ಮೌಲ್ಯ : 372 ಕೋಟಿ
ಸ್ತಿರಾಸ್ಥಿ ಮೌಲ್ಯ: 792 ಕೋಟಿ
ಎಂಟಿಬಿ ಪತ್ನಿ ಶಾಂತಮ್ಮ ನಾಗರಾಜ್ ಹೆಸರಿನಲ್ಲಿ ಚರಾಸ್ತಿ-ಚಿರಾಸ್ತಿ
2020ರ ಎಂಎಲ್‌ಸಿ ಚುನಾವಣೆ ಸಂದರ್ಭದಲ್ಲಿ ನಾಗರಾಜ್ ಅವರು ಒಟ್ಟು 1,220 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರು. 2020 ಮತ್ತು 2023 ರ ನಡುವೆ ಅವರ ಆಸ್ತಿಯಲ್ಲಿ ಶೇಕಡಾ 23.7 ರಷ್ಟು ಹೆಚ್ಚಳ ಕಂಡಿದ್ದು, ಸದ್ಯ ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.