Mulabagilu Election 2023 Winner: ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ​​​​​ ಸಮೃದ್ಧಿ ವಿ.ಮಂಜುನಾಥ ಗೆಲುವು

Mulbagal Assembly Election Result 2023 Winner : ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಭಾರೀ ಮನ್ನಡೆಯಲ್ಲಿ ಗೆಲುವು

Mulabagilu Election 2023 Winner: ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ​​​​​ ಸಮೃದ್ಧಿ ವಿ.ಮಂಜುನಾಥ ಗೆಲುವು
Mulbagal Assembly Election Results 2023

Updated on: May 13, 2023 | 3:35 PM

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ (Mulbagal Assembly Constituency) ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್ ಭಾರೀ ಮನ್ನಡೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ ಸುಂದರ್ ರಾಜ್ ಹಾಗೂ ಕಾಂಗ್ರೆಸ್​​​​ ಆಭ್ಯರ್ಥಿ ಆದಿ ನಾರಾಯಣ ಸೋಲು ಅನುಭವಿಸಿದ್ದಾರೆ.

ಈವರೆಗೆ ಕ್ಷೇತ್ರದಲ್ಲಿ 1957ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಲ್. ನಾರಾಯಣಸ್ವಾಮಿ, 1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಪ್ಪ, 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ನಾರಾಯಣಪ್ಪ, 1967ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಚನ್ನಯ್ಯ, 1972ರಲ್ಲಿ ಪಕ್ಷೇತರ ಅಭ್ಯರ್ಥಿ ಪಿ.ಮುನಿಯಪ್ಪ, 1978ರಲ್ಲಿ ಐಎನ್‌ಸಿ(ಐ)ಅಭ್ಯರ್ಥಿ ಜೆ.ಎಂ.ರೆಡ್ಡಿ,1983ರಲ್ಲಿ ಪಕ್ಷೇತರ ಅಭ್ಯರ್ಥಿ ಬೀರೇಗೌಡ, 1985ರಲ್ಲಿ ಸಿಪಿಎಂನ ಆರ್.ವೆಂಕಟರಾಮಯ್ಯ, 1989ರಲ್ಲಿ ಕಾಂಗ್ರೆಸ್‌ನ ಎಂ.ವಿ.ವೆಂಕಟಪ್ಪ, 1994ರಲ್ಲಿ ಜನತಾದಳದ ಆರ್.ಶ್ರೀನಿವಾಸ್, 1999ನೇ ಸಾಲಿನಲ್ಲಿ ಕಾಂಗ್ರೆಸ್‌ನ ಎಂ.ವಿ.ವೆಂಕಟಪ್ಪ,2004ರಲ್ಲಿ ಜೆಡಿಎಸ್‌ನ ಆರ್.ಶ್ರೀನಿವಾಸ್, 2008ನೇ ಸಾಲಿನಲ್ಲಿ ಕಾಂಗ್ರೆಸ್ ಅಮರೇಶ್ ಹಾಗೂ 2013 ರಲ್ಲಿ ಪಕ್ಷೇತರ ಕೊತ್ತೂರು ಜಿ ಮಂಜುನಾಥ್​ ಮತ್ತು 2018 ರಲ್ಲೂ ಕಾಂಗ್ರೇಸ್​ ಬೆಂಬಲಿತ ಅಭ್ಯರ್ಥಿ ಹೆಚ್​.ನಾಗೇಶ್​ ಗೆಲುವು ಸಾದಿಸಿದ್ದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:35 pm, Sat, 13 May 23