ಬಾಗಲಕೋಟೆ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರು ಸಾಂಕೇತಿಕವಾಗಿ ಜಿಲ್ಲೆಯ ಬೀಳಗಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಬೀಳಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಬೀಳಗಿ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿ ಕಾರಿಯಾಗಿರುವ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮುನ್ನ ಬೀಳಗಿ ಪಟ್ಟಣದ ಪ್ರಸಿದ್ದ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದರು. ನಿರಾಣಿಗೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿರುವ ಸಚಿವ ಮುರುಗೇಶ್ ನಿರಾಣಿ 27.22 ಕೋಟಿ ಚರಾಸ್ತಿ, 8.60 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಚರಾಸ್ತಿ: 27.22 ಕೋಟಿ ರೂ.
ಸ್ಥಿರಾಸ್ತಿ: 8.60 ಕೋಟಿ ರೂ.
ಚರಾಸ್ತಿ (ಪತ್ನಿ ಕಮಲಾ ನಿರಾಣಿ ಹೆಸರಲ್ಲಿ): 38.35 ಕೋಟಿ ರೂ.
ಸ್ಥಿರಾಸ್ತಿ (ಪತ್ನಿ ಕಮಲಾ ನಿರಾಣಿ ಹೆಸರಲ್ಲಿ): 23.85 ಕೋಟಿ ರೂ.
ಸಾಲ (ಮುರುಗೇಶ್ ನಿರಾಣಿ ಹೆಸರಿನಲ್ಲಿ): 22.62 ಕೋಟಿ ರೂ.
ಸಾಲ (ಪತ್ನಿ ಕಮಲಾ ನಿರಾಣಿ ಹೆಸರಿನಲ್ಲಿ): 47.56 ಕೋಟಿ ರೂ.
ಕಾರು: ಮುರುಗೇಶ್ ಹೆಸರಲ್ಲಿ ಮೂರು, ಪತ್ನಿ ಹೆಸರಲ್ಲಿ ಒಂದು
ಚಿನ್ನಾಭರಣ: ಮುರುಗೇಶ್ ನಿರಾಣಿ ಬಳಿ 350 ಗ್ರಾಂ, ಪತ್ನಿ ಬಳಿ 1150 ಗ್ರಾಂ ಚಿನ್ನಾಭರಣ
ಇಂದು ಬೀಳಗಿಯ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದೆನು. ಬಳಿಕ ಬೀಳಗಿ ಮಿನಿವಿಧಾನಸೌಧದ ಆವರಣದಲ್ಲಿರುವ ಶ್ರೀ ಗಣಪತಿ ದೇವರ ಆಶೀರ್ವಾದ ಪಡೆದು, ಅಪಾರ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಬೀಳಗಿ ಮತಕ್ಷೇತ್ರದಿಂದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಯಿತು. pic.twitter.com/zR0cNDHJdI
— Dr. Murugesh R Nirani (@NiraniMurugesh) April 13, 2023
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮುರುಗೇಶ್ ನಿರಾಣಿ, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಈಗ ಐದನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲ ಹಿರಿಯರು, ಕಾರ್ಯಕರ್ತರನ್ನು ಕರೆದುಕೊಂಡು ಎಪ್ರಿಲ್ 18 ರಂದು ಮತ್ತೊಮೆ ಸಲ್ಲಿಸುತ್ತೇನೆ. ನಾವು ಮಾಡಿರುವ ಕೆಲಸ ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನೋಡಿದರೆ, ಕಾಂಗ್ರೆಸ್, ಜೆಡಿಎಸ್ ತೊರೆದು ಹತ್ತಾರು ಸಾವಿರ ಜನರು ಬಿಜೆಪಿ ಸೇರಿದ್ದಾರೆ. ನನಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಪದ್ಮನಾಭನಗರ ಅಭ್ಯರ್ಥಿಗೆ ಬಿ ಫಾರಂ ನೀಡದ ಡಿಕೆ ಶಿವಕುಮಾರ್ ನಡೆಯ ಹಿಂದಿನ ಮರ್ಮವೇನು?
ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಂದರ್ಭ ಇದೆ. ಬಸವಪ್ರಭು ಸರನಾಡಗೌಡ ನಾನು ಒಳ್ಳೆಯ ಸ್ನೇಹಿತರು. ಅವರು ಕಾಂಗ್ರೆಸ್ನಲ್ಲಿ ಇದ್ದರೂ ಸಹಿತ ಒಳ್ಳೆಯ ಸ್ನೇಹಿತರು. ಅವರು ಎರಡು ಬಾರಿ ಅಖಾಡದಲ್ಲಿದ್ದರು. ಈಗ ಅವರು ನಮಗೆ ಬೆಂಬಲ ನೀಡಬಹುದು. ಅಥವಾ ನಮ್ಮ ಪಕ್ಷ ಸೇರುವ ವಿಶ್ವಾಸವಿದೆ. ಎಸ್ಆರ್ ಪಾಟಿಲ್ ದೇವರಹಿಪ್ಪರಗಿ ಟಿಕೆಟ್ಗಾಗಿ ಕಾಯುತ್ತಿದ್ದಾರೆ. ನಂತರ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.
ಒಳಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ನವರು ತಾಂಡಾ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದರು. ಮೀಸಲಾತಿಯನ್ನೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಹೇಳಿದ್ದರು. ತಿಳುವಳಿಕೆ ಕೊರತೆ ಕಾರಣ ಅವರು ವಿರೋಧ ಮಾಡಿದ್ದರು. ಆದರೆ ಈಗ ಎಲ್ಲರಿಗೂ ಮನವರಿಕೆ ಮಾಡಲಾಗಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ಬಾರಿ ಕಳೆದ ಚುನಾವಣೆಗಿಂತ ಹದಿನೈದು ಪ್ರತಿಶತ ಮತಗಳು ತಾಂಡಾದಲ್ಲಿ ಹೆಚ್ಚು ಬೀಳಲಿವೆ ಎಂದು ಹೇಳಿದರು.
ಇದನ್ನೂ ಓದಿ: YSV Datta: ಮತ್ತೆ ಜೆಡಿಎಸ್ ಸೇರಿದ ವೈಎಸ್ವಿ ದತ್ತಾ; ಕಡೂರು ಟಿಕೆಟ್ ಫಿಕ್ಸ್
ಸಿಎಂ ರೇಸ್ನಲ್ಲಿ ಹೆಸರು ಬಂದ ಹಿನ್ನೆಲೆ ಗೆಲುವು ಎಷ್ಟು ಸವಾಲು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ಚುನಾವಣೆ ಬಹಳ ಸರಳವಿದೆ. ನಿಶ್ಚಿತವಾಗಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ. ಮುಂದೆ ಏನು ಜವಾಬ್ದಾರಿ ಕೊಡುತ್ತಾರೆ ವರಿಷ್ಟರಿಗೆ ಬಿಟ್ಟಿದ್ದು. ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ. ಚುನಾವಣೆಯಲ್ಲಿ ಗೆದ್ದವರು ಎಲ್ಲರೂ ಸಿಎಂ ರೇಸ್ನಲ್ಲಿರುತ್ತಾರೆ. ಸಿಎಂ ಆಗಲಿಕ್ಕೆ ಯೋಗ್ಯ ಇರುವಂತವರಿಗೆ ಟಿಕೆಟ್ ಕೊಟ್ಟಿರುತ್ತಾರೆ. ಸಿಎಂ ಹುದ್ದೆಗೆ ಯಾರನ್ನು ಆಯ್ಕೆ ಮಾಡ್ತಾರೆ, ಅವರು ಅದನ್ನು ನಿಭಾಯಿಸುತ್ತಾರೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Thu, 13 April 23