ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ, ಪಂಚಮಸಾಲಿ, ರೆಡ್ಡಿ, ವಾಲ್ಮೀಕಿ, ಬೋವಿ ಮುಖಂಡರು ರೆಡ್ಡಿ ಪಕ್ಷ ಸೇರ್ಪಡೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 10, 2023 | 4:03 PM

ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಬಿರುಗಾಳಿ ಅಲೆ ಬೀಸಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಸಮುದಾಯದ ಮುಖಂಡರು ಬಿಜೆಪಿ ತೊರೆದು KRPP ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.

ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ, ಪಂಚಮಸಾಲಿ, ರೆಡ್ಡಿ, ವಾಲ್ಮೀಕಿ, ಬೋವಿ ಮುಖಂಡರು ರೆಡ್ಡಿ ಪಕ್ಷ ಸೇರ್ಪಡೆ
ಬಿಜೆಪಿ ಮುಖಂಡರು ರೆಡಿ ಪಕ್ಷ ಸೇರ್ಪಡೆ
Follow us on

ಕೊಪ್ಪಳ: ಕರ್ನಾಟಕ ವಿದಾನಸಭೆ ಚುನಾವಣೆಗೆ (Karnataka Assembly Election 2023) ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಈ ಹೊತ್ತಲ್ಲಿನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಕಲ್ಯಾಣ ಪ್ರಗತಿ ಪಕ್ಷ (kalyana pragati party) ಎಂಬ ಪ್ರಾದೇಶಿಕ ಪಕ್ಷ ಕಟ್ಟಿ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಹೀಗಿರುವಾಗಲೇ ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಬೆಂಬಲಿಗರು ಬಿಜೆಪಿ ತೊರೆದು ರೆಡ್ಡಿ ಅವರ ಕಲ್ಯಾಣ ಪ್ರಗತಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ಅನುಮತಿಗೆ ವಿಳಂಬ: ಬೊಮ್ಮಾಯಿ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌

ಹೌದು.. ಕೊಪ್ಪಳದ ಗಂಗಾವತಿಯ ಕೆಆರ್​ಪಿಪಿ ಕಚೇರಿಯಲ್ಲಿ ಇಂದು(ಜನವರಿ 10) ಜಿಲ್ಲೆಯ ಹಲವು ಬಿಜೆಪಿ ಮುಖಂಡರು KRPP ಸೇರ್ಪಡೆಯಾದರು. ಕೊಪ್ಪಳ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಯಮನೂರಪ್ಪ ಚೌಡ್ಕಿ ಸೇರಿದಂತೆ ಪಂಚಮಸಾಲಿ, ರೆಡ್ಡಿ, ವಾಲ್ಮೀಕಿ, ಬೋವಿ ಮುಖಂಡರು ಜನಾರ್ದನ ರೆಡ್ಡಿ ಅವರ ಕಲ್ಯಾಣ ಪ್ರಗತಿ ಪಕ್ಷ ಸೇರ್ಪಡೆಯಾಗುವ ಮೂಲಕ ಹಾಲಿ ಗಂಗಾವತಿ ಬಿಜೆಪಿ ಶಾಸಕ ಮುನವಳ್ಳಿಗೆ ಶಾಕ್ ಕೊಟ್ಟರು.

ಮೊನ್ನೇ ಅಷ್ಟೇ ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಮ್ಮೂರು ಶೇಖರ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದ್ದರು. ಅಲ್ಲದೇ ಗಂಗಾವತಿ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಡ್ಡಿಗೆ ಬೆಂಬಲ ವ್ಯಕ್ತವಾಗುತ್ತಿದೆ.

ಮೊನ್ನೆಯಷ್ಟೇ ಅಂದ್ರೆ ಇದೇ ಡಿಸೆಂಬರ್ 25, 2022ರಂದು ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ಎಲ್ಲರ ಗಮನ ಸೆಳೆದಿದ್ದಾರೆ. ಈಮೂಲಕ ರಾಜ್ಯ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ. ಇದು ರಾಜ್ಯ ಬಿಜೆಪಿಗೆ ಶಾಕ್ ಕೊಟ್ಟಿದ್ದಕ್ಕಿಂತ ಕಡಿಮೆಯೇನಿಲ್ಲ. ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ, ಬಿಜೆಪಿಯಲ್ಲಿ ದುಡಿದವರು. ಆದರೆ ನಂತರದ ದಿನಗಳಲ್ಲಿ ನಡೆದ ಬೆಳವಣಿಗೆಗಳಿಂದಾಗಿ ಜನಾರ್ದನ ರೆಡ್ಡಿ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ತೊರೆದದ್ದು ಸಾಕಷ್ಟು ಸದ್ದು ಮಾಡಿತ್ತು.

ಒಟ್ಟಿನಲ್ಲಿ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಸ್ಥಾಪನೆಯಾಗುತ್ತಿದ್ದಂತೆ ರಾಜಕೀಯದಲ್ಲಿ ಬಿರುಗಾಳಿ ಅಲೆ ಏಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ