ಬೆಂಗಳೂರು: ಹೈಕೋರ್ಟ್ (Karnataka High Court) ಅನುಮತಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿ ಅಧಿಕೃತಗೊಳಿಸಲಾಗಿದೆ. ನಾಳೆ (ಮೇ 6) ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ರೋಡ್ ಶೋ (Modi Road Show) ನಡೆಸಲು ಅವಕಾಶ ನೀಡಲಾಗಿದ್ದು, ಭಾನುವಾರ (ಮೇ 7) ಬೆಳಗ್ಗೆ 9ರಿಂದ ಬೆಳಗ್ಗೆ 11.30ರವರೆಗೆ ಅನುಮತಿ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಾಳೆ ನಗರದ 13 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 23 ಕಿಲೋ ಮೀಟರ್ ರೋಡ್ಶೋ ನಡೆಸುವ ಮೋದಿ, ಭಾನುವಾರಂದು 6.1 ಕಿ.ಮೀ. ರೋಡ್ಶೋ ನಡೆಸಲಿದ್ದಾರೆ. ಸಮಯ ಮೀರಿ ರ್ಯಾಲಿ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ನಿಗದಿತ ಸಮಯಕ್ಕಿಂತ ಹೆಚ್ಚು ಱಲಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು, ಆಯೋಗದ ಸಮಿತಿ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗಿರಿನಾಥ್ ಹೇಳಿದ್ದಾರೆ.
ಸಂಚಾರಕ್ಕೆ ಪರ್ಯಾಯ ಕ್ರಮ ತಗೆದುಕೊಳ್ಳಲಾಗಿದೆ ಎಂದು ಹೇಳಿದ ಗಿರಿನಾಥ್, ರ್ಯಾಲಿಗಳಿಗೆ ಕೇಂದ್ರ ಚುನಾವಣಾ ಆಯೋಗದ ನಿರ್ಭಂಧನೆಗಳು ಅನ್ವಯ ಮಾಡಲಾಗುತ್ತದೆ. ಪ್ರಧಾನಿ ಭದ್ರತೆಗೆ ಬ್ಲೂ ಬುಕ್ ಮಾರ್ಗಸೂಚಿಯಂತೆ ಮಾರ್ಗಸೂಚಿ ಇರಲಿದೆ. ಈ ಬಗ್ಗೆ ಆಯೋಜಕರಿಗೆ ಇವತ್ತಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ, ಆಯೋಜಕರು ರಕ್ಷಣೆ ಹಾಗೂ ಭದ್ರತೆ ಸಂಬಂಧ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆ ಮೋದಿ ರೋಡ್ ಶೋ: 34 ರಸ್ತೆಗಳು ಬಂದ್, ಯಾವುವು? ಇಲ್ಲಿದೆ ನೋಡಿ
ರವಿವಾರ 11:30 ರ ಒಳಗೆ ರ್ಯಾಲಿ ಮುಕ್ತಾಯಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಗಿರಿನಾಥ್, 11:30 ರೊಳಗೆ ರ್ಯಾಲಿ ಮುಕ್ತಾಯ ಮಾಡಬೇಕಿದೆ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು 1 ಗಂಟೆಗೆ ಕೊಠಡಿಗೆ ಹಾಜರಾಗಬೇಕಿದ್ದು, 2ಗಂಟೆಗೆ ಪರೀಕ್ಷೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ರೋಡ್ ಶೋ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ 108 ಆಂಬ್ಯೂಲೆನ್ಸ್ಗಳನ್ನ ಮಾನಿಟರ್ ಮಾಡಲಾಗುತ್ತದೆ ಎಂದು ಗಿರಿನಾಥ್ ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಮ್ ಮೂಲಕ ಆಂಂಬುಲೆನ್ಸ್ಗಳನ್ನು ನಿರ್ವಹಣೆ ಮಾಡಲಾಗುತ್ತದೆ. ತುರ್ತು ಸೆವೆಗಳಿಗೆ ಪರ್ಯಾಯ ಮಾರ್ಗಗಳ ಮೂಲಕ ಆದ್ಯತೆ ನೀಡಲಾಗುತ್ತದೆ. ಮಾದ್ಯಮ ಹಾಗೂ ಸಾಮಾಜಿಕ ಜಾಲತಣದ ಮೂಲಕವೂ ಜನರಿಗೆ ಸಲಹೆ ಸೂಚನೆ ನೀಡಲಾಗುತ್ತದೆ. ರಸ್ತೆ ಬದೀಯ ವ್ಯಾಪರಿಗಳು ಬೀದಿ ಬದಿ ಮುಖ್ಯೆ ರಸ್ತೆಯಲ್ಲಿ ವ್ಯಾಪರ ಮಾಡುವಂತಿಲ್ಲ. ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ಸೂಚನೆ ನೀಡಲಾಗಿದೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ