ಮೇ 6ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ; ಎಲ್ಲೆಲ್ಲಿ ಗೊತ್ತಾ?
Karnataka Elections 2023: ಬೆಂಗಳೂರಿನಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಬೆಳಗ್ಗೆ 8 ಕಿ.ಮೀ. ಮತ್ತು ಸಂಜೆ 28 ಕಿ.ಮೀ. ರೋಡ್ಶೋ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಕೇಂದ್ರದ ಬಿಜೆಪಿ ನಾಯಕರು ರಾಜ್ಯದಲ್ಲಿ ಮತಯಾತ್ರೆ ಕೈಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ರೋಡ್ ಶೋಗಳನ್ನು ನಡೆಸಿ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಹವಾ ಸೃಷ್ಟಿಸಲು ಮೇ 6ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸುತ್ತಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ರೋಡ್ ಶೋ (Road Show) ಮೂಲಕ ಮೋದಿ ಮತಯಾಚನೆ ನಡೆಸಲಿದ್ದಾರೆ.
ಆರಂಭದಲ್ಲಿ ಹಾಕಿಕೊಂಡ ಯೋಜನೆಯಂತೆ, ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮೋದಿ ರೋಡ್ ಶೋ ನಿಗದಿಪಡಿಸಲಾಗಿತ್ತು. ಸದ್ಯ ಎರಡು ದಿನದ ಬದಲು ಮೇ 6ರಂದು ಬೆಳಗ್ಗೆ ಮತ್ತು ಸಂಜೆ ರೋಡ್ ಶೋ ನಡೆಸಲು ಪ್ಲಾನ್ ಮಾಡಲಾಗಿದೆ. ಅಂದು ಬೆಳಗ್ಗೆ 8 ಕಿ.ಮೀ. ಮತ್ತು ಸಂಜೆ 28 ಕಿ.ಮೀ. ರೋಡ್ಶೋ ನಡೆಯಲಿದೆ. ಬೆಂಗಳೂರು ವ್ಯಾಪ್ತಿಯ ಒಟ್ಟು 23 ಕ್ಷೇತ್ರಗಳಲ್ಲಿ ನಡೆಯುವ ಈ ರೋಡ್ಶೋ ಮೂಲಕ ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ಮತಬೇಟೆ ನಡೆಸಲಿದ್ದಾರೆ.
ಇದನ್ನೂ ಓದಿ: PM Modi: ಕಾಂಗ್ರೆಸ್ನವರಿಗೆ ಹನುಮಂತನ ಕಂಡರೂ ಆಗಲ್ಲ; ಬಜರಂಗದಳ ನಿಷೇಧ ಪ್ರಸ್ತಾವಕ್ಕೆ ಮೋದಿ ಟಾಂಗ್
ಮೇ 6ರ ಬೆಳಗ್ಗೆ ಸಿ.ವಿ.ರಾಮನ್ನಗರದಿಂದ ಆರಂಭವಾಗಲಿರುವ ರೋಡ್ ಶೋ ಬ್ರಿಗೇಡ್ ರಸ್ತೆವರೆಗೆ ಸಾಗಲಿದೆ. ಸಂಜೆ ರೋಡ್ ಶೋ ಕೋಣನಕುಂಟೆಯಿಂದ ಆರಂಭವಾಗಿ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂತ್ಯವಾಗುವ ಸಾಧ್ಯತೆ ಇದೆ. ಸಂಜೆ ರೋಡ್ ಶೋ ಕೋಣನಕುಂಟೆಯಿಂದ ಆರಂಭವಾಗಿ ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್, ಮಾಗಡಿ ರಸ್ತೆ, ಟೋಲ್‌ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರ, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ರೋಡ್ಶೋ ನಡೆಯಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ