ಮೈಸೂರು: ಕಾಂಗ್ರೆಸ್(Congress) ಪ್ರಣಾಳಿಕೆಯಲ್ಲಿ ಭಜರಂಗ ದಳ ಬ್ಯಾನ್ ವಿಚಾರ ‘ಶಿವನ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿವರ್ತನೆ ಮಾಡಿದ ಡಿಕೆ ಶಿವಕುಮಾರ್(D. K. Shivakumar), ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯ(Siddaramaiah)ರಿಂದ ಬೇರೇನೂ ನಿರೀಕ್ಷೆ ಸಾಧ್ಯವೆಂದು ಸಂಸದ ಪ್ರತಾಪ್ ಸಿಂಹ(Pratap Simha) ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
‘ಮುಂದೆ ರಾಜ್ಯದಲ್ಲಿ ಘಜ್ನಿ ಮಹಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಪಿಎಫ್ಐ ಸತ್ತ ಹಾವು ಪಿಎಫ್ಐ ಬ್ಯಾನ್ ತೆಗೆದು ಭಜರಂಗದಳ ಬ್ಯಾನ್ ಮಾಡುತ್ತಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನವರಂಗಿ ಆಟ ಆಡುತ್ತಿದ್ದಾರೆ. ಸೀತೆ ಹುಡುಕಿಕೊಂಡು ಹೋದ ಭಜರಂಗಿ, ರಾಮನಿಗಾಗಿ ಪರ್ವತವನ್ನೆ ಎತ್ತಿ ಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ನ್ನು ಹಾಕಿ ಹೊಸಕಿ ಹಾಕುತ್ತಾರೆ. ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಮಾತನಾಡಿ ಎಂದರು.
ಇದನ್ನೂ ಓದಿ:Shivarajkumar: ‘ನಾನು ನಟ ಮಾತ್ರ.. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ’: ಚುನಾವಣಾ ಪ್ರಚಾರದ ವೇಳೆ ಶಿವಣ್ಣನ ನೇರ ಮಾತು
ರಾಮನ ಮೇಲೆ ಹನುಮಂತನ ಮೇಲೆ ಯಾಕೆ ಕಾಂಗ್ರೆಸಿಗರಿಗೆ ಯಾಕಿಷ್ಟು ಕೋಪ?, ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರಕಾರ ರಚನೆ ಆಗಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಅಕ್ರಮವಾಗಿ ಮುಸ್ಲಿಂರಿಗೆ ಮೀಸಲಾತಿ ಕೊಡಲಾಗುತ್ತಿತ್ತು. ಅದನ್ನ ನಾವು ತೆಗೆದಿದ್ದೇವೆ. ಕಾಂಗ್ರೆಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು ನಾವು ನ್ಯಾಯ ನೀಡಿದ್ದೇವೆ. ಭಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ?, ಯಾರನ್ನು ಕೊಲೆ ಮಾಡಿದ್ದಾರೆ?, ಅಶಾಂತಿ ಕದಡುವ ಕೆಲಸವೇನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪಿಎಫ್ಐ, ಕೆಎಫ್ಡಿ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಯಾವ ಹೋಲಿಕೆ? ಭಜರಂಗದಳದವರು ಗೋಮಾತೆ ರಕ್ಷಣೆಗೆ, ಹಿಂದುತ್ವದ ರಕ್ಷಣೆಗೆ, ಕರ್ನಾಟಕದ ಹಿತ ರಕ್ಷಣೆಗೆ ಭಜರಂಗದಳ ಹೋರಾಟ ಮಾಡಿದ್ದಾರೆ. ತಾಲಿಬಾನ್ ಸರ್ಕಾರ ಬಂದರೆ ಹಿಂದೂ ಸಂಘಟನೆಗಳಿಗೆ ಮಾತ್ರವಲ್ಲ ಹಿಂದೂಗಳಿಗೆ, ಹಿಂದೂತ್ವಕ್ಕೆ ಉಳಿಗಾಲ ಇರಲ್ಲ. ರಾಮನ ಆದರ್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲವೆಂದು
ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿದರು.
ಇದನ್ನೂ ಓದಿ:ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕೆಂಡ; ರಾಜಕೀಯ ಮುಖಂಡರಿಗೆ ನೀಡಿತು ಖಡಕ್ ಎಚ್ಚರಿಕೆ
ಬಿಜೆಪಿಯವರು ಮೋದಿ ಮುಖ ತೋರಿಸಿ ವೋಟ್ ಕೇಳ್ತಿದ್ದಾರೆ, ಬೊಮ್ಮಾಯಿ ಮುಖ ತೊರಿಸಿ ವೋಟ್ ಕೇಳಗಾಗುತ್ತಾ? ಹೆಚ್ಡಿ ಕುಮಾರಸ್ವಾಮಿ ಟಾಂಗ್
ಕೊಪ್ಪಳ: ರಾಜ್ಯದಲ್ಲಿ ಮೋದಿ ಪ್ರಚಾರದಿಂದ ನಮಗೆ ಜೋಶ್ ಬಂದಿದೆ ಎನ್ನುವ ಪ್ರತಾಪ್ ಸಿಂಹ ಹೇಳಿಕೆ ವಿಚಾರ ‘ ಅವರು ಹಾಗೇ ಹೇಳಲೇಬೇಕು, ಅವರಿಗೆ ಬೇರ ಗತಿಯಲ್ಲ, ಮೋದಿ ಮುಖ ತೊರಿಸಿ ವೋಟ್ ಕೇಳ್ತಿದ್ದಾರೆ. ಬೊಮ್ಮಾಯಿ ಮುಖ ತೊರಿಸಿ ವೋಟ್ ಕೇಳಗಾಗುತ್ತಾ? ಅವರು ಏನ್ ಶ್ರಮ ಹಾಕಿದ್ರು, ಹಳೆ ಮೈಸೂರು ಭಾಗದಲ್ಲಿ 10 ಸೀಟ್ ಗೆಲ್ಲಲ್ಲ. ಹೋದ ಬಾರಿ ಗೆದ್ದ ಕ್ಷೇತ್ರಗಳು ಕೂಡ ಬಿಜೆಪಿ ಕಳೆದುಕೊಳ್ಳುತ್ತೆ. ಶಿವಮೊಗ್ಗದವರೆಗೂ ಬಿಜೆಪಿ ಎಷ್ಟು ಗಳಿಸುತ್ತೆ ನೀವೆ ನೋಡಿ. ಈ ಭಾರಿ ನಂಜನಗೂಡು, ಗುಂಡ್ಲಪೇಟೆ, ಮಡಿಕೇರಿಯಲ್ಲಿ ಬಿಜೆಪಿ ಗೆಲ್ಲಲ್ಲ ಎಂದರು. ಇನ್ನು ಇದೇ ವೇಳೆ ಚನ್ನಪಟ್ಟಣದಲ್ಲಿ ಮೋದಿ ಪ್ರಚಾರ ಮಾಡಿದ ವಿಚಾರ ‘ಅದ್ರಿಂದ ಏನಾಯ್ತು, ಬಂದ್ರು ಹೊದ್ರು, ನಾನು ಇನ್ನೂ ಚನ್ನಪಟ್ಟಣಕ್ಕೆ ಹೋಗಿಲ್ಲ. ದೂರದ ಬೆಟ್ಟ ತೋರಿಸುತ್ತಿದ್ದಾರೆ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Wed, 3 May 23