ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಳಿ ನಗದು ಇರುವುದು ಕೇವಲ 88,967 ರೂ. ಮಾತ್ರ

ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಇಂದು ಸಾಂಕೇತಿಕವಾಗಿ ನಾಮಪತ್ರಸಲ್ಲಿದ್ದಾರೆ. ತಮ್ಮ ನಾಮಪತ್ರದಲ್ಲಿ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದಾರೆ.

ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬಳಿ ನಗದು ಇರುವುದು ಕೇವಲ 88,967 ರೂ. ಮಾತ್ರ
ರಾಜಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಿನೇಷನ್ ಫೈಲ್ ಮಾಡಿರು ಪುಟ್ಟಣ್ಣ ಸುಮಾರು 49 ಕೋಟಿ 65 ಲಕ್ಷ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಚರಾಸ್ತಿ 14 ಕೋಟಿ 65 ಲಕ್ಷ, ಸ್ಥಿರಾಸ್ತಿ ಸುಮಾರು 35 ಕೋಟಿ ಇದೆ. 29 ಲಕ್ಷ ಮೌಲ್ಯದ 550 ಗ್ರಾಂ ಗೋಲ್ಡ್, 30 ಲಕ್ಷ ಮೌಲ್ಯದ 294 ಗ್ರಾಂ ಡೈಮೆಂಡ್, 2 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಲ್ಕು ಕೆಜಿ ಬೆಳ್ಳಿ ಇದೆ, ತಮ್ಮ ಬಳಿ 88 ಸಾವಿರದ 967 ರೂಪಾಯಿ ನಗದು ಇರೋದಾಗಿ ಉಲ್ಲೇಖಿಸಿದ್ದಾರೆ. ಹಾಗೆಯೇ ವಾರ್ಷಿಕ ಆದಾಯ 35 ಲಕ್ಷದಿಂದ 46ಕ್ಕೆ ಏರಿಕೆಯಾಗಿದ್ದು, ವಿವಿಧ ಬ್ಯಾಂಕ್ ಷೇರುಗಳಲ್ಲಿ 2 ಕೋಟಿ 85 ಲಕ್ಷ ಹೊಡಿಕೆ, 9 ಕೋಟಿಯಷ್ಟು ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.

Updated on: Apr 17, 2023 | 3:44 PM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ದಿನಗಳು ಬಾಕಿ ಇವೆ. ಇತ್ತೀಚೆಗೆ ಬಿಜೆಪಿ ಹಾಲಿ ಎಂಎಲ್‌ಸಿ ಪುಟ್ಟಣ್ಣ (MLC Puttanna) ಮಾ. 09 ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಪುಟ್ಟಣ್ಣ ಅವರು ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಇಂದು ಸಾಂಕೇತಿಕವಾಗಿ ನಾಮಪತ್ರಸಲ್ಲಿದ್ದಾರೆ. ತಮ್ಮ ನಾಮಪತ್ರದಲ್ಲಿ ವೈಯಕ್ತಿ ಮತ್ತು ಕಟುಂಬದ ಆಸ್ತಿ ವಿವರ ನೀಡಿದ್ದು, ಪುಟ್ಟಣ್ಣ ಬಳಿ 88,967 ರೂಪಾಯಿ ನಗದು ಹಣ ಹೊಂದಿದ್ದಾರೆ.

ರಾಜಾಜಿನಗರ ‌ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಆಸ್ತಿ ವಿವರ ಹೀಗಿದೆ

ನಗದು: 88,967 ರೂಪಾಯಿ (ಪುಟ್ಟಣ್ಣ ಬಳಿ)

ವಾರ್ಷಿಕ ಆದಾಯ: 35 ಲಕ್ಷದಿಂದ 46 ಲಕ್ಷಕ್ಕೆ ಏರಿಕೆ

ಹೂಡಿಕೆ: ಬ್ಯಾಂಕ್, ಷೇರ್​ಗಳಲ್ಲಿ 2 ಕೋಟಿ 85 ಲಕ್ಷ ಹೂಡಿಕೆ

ವಾಹನ: ಇಲ್ಲ

ಚಿನ್ನಾಭರಣಗಳು (ಪುಟ್ಟಣ್ಣ ಬಳಿ): 29,15,000 ಮೌಲ್ಯದ 550 ಗ್ರಾಂ

ಡೈಮಂಡ್ (ಪುಟ್ಟಣ್ಣ ಬಳಿ): 30,40,000 ಲಕ್ಷ ಮೌಲ್ಯದ 294 ಗ್ರಾಂ

ಬೆಳ್ಳಿ (ಪುಟ್ಟಣ್ಣ ಬಳಿ): 2,40,000 ಮೌಲ್ಯದ ನಾಲ್ಕು ಕೆಜಿ ಬೆಳ್ಳಿ

ಒಟ್ಟು ಚರಾಸ್ತಿ: 14 ಕೋಟಿ 65 ಲಕ್ಷ

ಸ್ಥಿರಾಸ್ತಿ: ಸುಮಾರು 35 ಕೋಟಿ

ಸಾಲ: ವಿವಿಧ ಬ್ಯಾಂಕ್‌ಗಳಿಂದ 9 ಕೋಟಿ. ಓರ್ವ ರಾಜಕೀಯ ನಾಯಕರಿಂದ ಕೂಡ 1.5 ಕೋಟಿ ಸಾಲ ಪಡೆದ್ದಿದ್ದು, ತಮ್ಮ ಪತ್ನಿಗೂ 1 ಕೋಟಿ 49 ಲಕ್ಷ ಸಾಲ ನೀಡಿದ್ದಾರೆ.

ಇದನ್ನೂ ಓದಿ: ಸ್ವಂತ ವಾಹನವಿಲ್ಲ, ಕೋಟಿಗಟ್ಟಲೇ ಸಾಲ: ಇಲ್ಲಿದೆ ‘ಕಾಮನ್‌ ಮ್ಯಾನ್‌’ ಸಿಎಂ ಬಸವರಾಜ ಬೊಮ್ಮಾಯಿ ಆಸ್ತಿ ವಿವರ

ಬಿಜೆಪಿಯಲ್ಲಿ ಕೆಲಸ ಮಾಡಲು ಆಗದಂತ ಪರಿಸ್ಥಿತಿಯಿತ್ತು: ಪುಟ್ಟಣ್ಣ

ಇತ್ತೀಚೆಗೆ ಕಾಂಗ್ರೆಸ್​ ಸೇರ್ಪಡೆಯಾದ ಬಳಿಕ ಮಾತನಾಡಿದ್ದ ಎಂಎಲ್​ಸಿ ಪುಟ್ಟಣ್ಣ, ವಿಧಾನಪರಿಷತ್​ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಸಭಾಪತಿ ಕಚೇರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದೇನೆ. ಬಿಜೆಪಿಯಲ್ಲಿ ಕೆಲಸ ಮಾಡಲು ಆಗದಂತ ಪರಿಸ್ಥಿತಿ ಇತ್ತು. ಒಂದೇ ಒಂದು ಶಿಕ್ಷಕರ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಕೆಲಸ ಸರ್ಕಾರ ಮಾಡಿಲ್ಲ ಎಂದಿದ್ದರು.

142 ದಿನ ಶಿಕ್ಷಕರು ಅಹೋರಾತ್ರಿ ಧರಣಿ ಮಾಡಿದರು. ಇಬ್ಬರು ಆತ್ಮಹತ್ಯೆ ಮಾಡಿಕೊಂಡರು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು 30-40 ಬಾರಿ ಭೇಟಿ ಮಾಡಿದರೂ ಕೂಡ ಸಮಸ್ಯೆ ಬಗೆಹರಿಸಲಿಲ್ಲ. ಅವತ್ತು ನಾನು ಡಿ.ಕೆ. ಶಿವಕುಮಾರ್​ರನ್ನು ಭೇಟಿ ಮಾಡಿ ಶಿಕ್ಷಕರ ಆತ್ಮಹತ್ಯೆ ತಡೆಯಿರಿ ಅಂತ ಕೋರಿಕೊಂಡೆ. ಹತ್ತು ಹಲವಾರು ಸಮಸ್ಯೆಗಳಿವೆ. ಇಂಥ ಕಡು ಭ್ರಷ್ಟ ವ್ಯವಸ್ಥೆಯನ್ನು 20 ವರ್ಷದ ಜೀವನದಲ್ಲಿ ನಾನು ನೋಡಿಲ್ಲ. ನಾನು ಇಂಥ ತಪ್ಪು ಯಾಕೆ ಮಾಡಿಬಿಟ್ಟೆ ಅಂತ ಆತ್ಮಸಾಕ್ಷಿಗೆ ಬೇಜಾರಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಜೆಪಿಯ ಮತ್ತೋರ್ವ ಶಾಸಕ ರಾಜೀನಾಮೆ ಘೋಷಣೆ, ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್

ಪುಟ್ಟಣ್ಣಗೆ ಆರಂಭದಲ್ಲೇ ವಿಘ್ನ

ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ MLC ಪುಟ್ಟಣ್ಣಗೆ ಆರಂಭದಲ್ಲೇ ವಿಘ್ನ ಉಂಟಾಗಿತ್ತು. ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಕೆಪಿಸಿಸಿ ಕಚೇರಿ ಮುಂಭಾಗ ಟಿಕೆಟ್‌ ಆಕಾಂಕ್ಷಿಗಳಿಂದ ಪ್ರತಿಭಟನೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯಗೆ ಮುತ್ತಿಗೆ ಹಾಕಲು ಯತ್ನಸಿದ್ದು, ಪುಟ್ಟಣ್ಣಗೆ ರಾಜಾಜಿನಗರ ಕ್ಷೇತ್ರದ ಟಿಕೆಟ್ ನೀಡದಂತೆ ಘೋಷಣೆ ಕೂಗಲಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Mon, 17 April 23