Rajarajeshwari nagar Election Results: ಆರ್​​ಆರ್​ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 12,000 ಮತಗಳ ಅಂತರದಿಂದ ಗೆಲುವು

|

Updated on: May 13, 2023 | 2:46 PM

Rajarajeshwari nagar Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 12,000 ಮತಗಳ ಅಂತರದಿಂದ ಗೆಲುವು ದಕ್ಕಿದೆ.

Rajarajeshwari nagar Election Results: ಆರ್​​ಆರ್​ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 12,000 ಮತಗಳ ಅಂತರದಿಂದ ಗೆಲುವು
ಆರ್. ಆರ್. ನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್
Follow us on

Rajarajeshwari nagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 12,000 ಮತಗಳ ಅಂತರದಿಂದ ಗೆಲುವು ದಕ್ಕಿದೆ. ಮೇ 10 ರಂದು ನಡೆದ ಮತದಾನದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ (ಆರ್. ಆರ್. ನಗರ -Rajarajeshwari nagar Assembly Elections 2023) ಶೇ. 48.3ರಷ್ಟು ಮತದಾನವಾಗಿತ್ತು. ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುನಿರತ್ನ ತಮ್ಮ ವೈಯಕ್ತಿಕ ವರ್ಚಸಿನಿಂದಾಗಿಯೇ ಪ್ರಾಬಲ್ಯ ಮೆರೆದು ಎದುರಾಳಿಗಳ ವಿರುದ್ಧ ಅನಾಯಾಸ ಗೆಲುವು ಸಾಧಿಸುತ್ತಿದ್ದರು. ಆದರೆ, ಈ ಸಲ ಅವರು ಕಾಂಗ್ರೆಸ್‌ ನಿಂದ ನೇರ ಸ್ಪರ್ಧೆ ಎದುರಿಸಬೇಕಾಗಿದೆ.

2020ರಲ್ಲಿ ನಡೆದ ಉಪ ಚುನಾವಣೆಯಲ್ಲಿ 57 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಮುನಿರತ್ನ, ಈ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಎದುರಿಸುವಂತಹ ಸ್ಥಿತಿಯಿದೆ. ಈ ಬಾರಿಯೂ ಕಾಂಗ್ರೆಸ್ ಕಳೆದ ಉಪಚುನಾವಣೆಯಲ್ಲಿ ಸೋಲುಂಡಿದ್ದ ಎಚ್. ಕುಸುಮಾ ಅವರಿಗೆ ಟಿಕೆಟ್​ ನೀಡಿತ್ತು. ಇನ್ನು, ಜೆಡಿಎಸ್ ಈ ಬಾರಿ ಡಾ. ವಿ. ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನಂತೆ ಜೆಡಿಎಸ್‌ ಕೂಡ ಪ್ರತಿ ಬಾರಿಯೂ ಇಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡುತ್ತಿರುವುದರಿಂದ ಒಕ್ಕಲಿಗರ ಪ್ರಾಬಲ್ಯವಿದ್ದರೂ ಅದರ ಲಾಭ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಮುನಿರತ್ನ ನಾಯ್ಡು -ಬಿಜೆಪಿ, ಎಚ್.ಕುಸುಮಾ-ಕಾಂಗ್ರೆಸ್, ಡಾ.ವಿ. ನಾರಾಯಣಸ್ವಾಮಿ -ಜೆಡಿಎಸ್, ಎನ್. ನಾಗರಾಜು -ಬಿಎಸ್ ಪಿ, ಅನಂತ್ ಸುಭಾಷ್‌ ಚಂದ್ರ- ಆಮ್ ಆದ್ಮಿ ಪಕ್ಷ, ಎಸ್. ಚಂದ್ರಶೇಖರ್-ಕರ್ನಾಟಕ ರಾಷ್ಟ್ರ ಸಮಿತಿ, ಎಂ.ಮಂಜುನಾಥ್ – ಉತ್ತಮ ಪ್ರಜಾಕೀಯ ಪಾರ್ಟಿ, ಲಕ್ಷ್ಮೀ- ಸಂಯುಕ್ತ ಜನತಾದಳ, ವಿ.ಜ್ಞಾನಮೂರ್ತಿ – ಎಸ್‌ ಯುಸಿಐ. ಒಟ್ಟಾರೆ 14 ಮಂದಿ ಸ್ಪರ್ಧಾ ಕಣದಲ್ಲಿದ್ದು, ಬಿಜೆಪಿ- ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ‘ಏರ್ಪಟ್ಟಿದೆ. ಜೆ.ಪಿ. ಪಾರ್ಕ್, ಯಶವಂತಪುರ, ಎಚ್‌ಎಂಟಿ, ಲಗ್ಗೆರೆ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆ ಪಾಳ್ಯ, ಜ್ಞಾನಭಾರತಿ ಮತ್ತು ಆ‌ ಆರ್‌ ನಗರ 9 ವಾರ್ಡ್‌ಗಳನ್ನೊಳಗೊಂಡಿದೆ.

2020ರ ಉಪ ಚುನಾವಣಾ ಫಲಿತಾಂಶ – ಪ್ರಮುಖ ಅಭ್ಯರ್ಥಿಗಳು ಪಡೆದಿದ್ದ ಮತಗಳು: ಮುನಿರತ್ನ ನಾಯ್ಡು – ಬಿಜೆಪಿ 1,25,990 ಎಚ್. ಕುಸುಮಾ – ಕಾಂಗ್ರೆಸ್ 67,877 ಜೆಡಿಎಸ್‌ – ವಿ ಕೃಷ್ಣಮೂರ್ತಿ 10,269

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:04 am, Sat, 13 May 23