Ranebennuru Election Results: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಅರುಣ್​ ಕುಮಾರ್​, ಪ್ರಕಾಶ್​ಕೆ ಕೋಳಿವಾಡ​ ಮಧ್ಯೆ ಪೈಪೋಟಿ

| Updated By: Rakesh Nayak Manchi

Updated on: May 13, 2023 | 4:37 AM

Ranebennur Assembly Election Result 2023 Live Counting Updates: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್​ ಕುಮಾರ್​ ಕಾಂಗ್ರೆಸ್​ನಿಂದ ಪ್ರಕಾಶ್​ಕೆ ಕೋಳಿವಾಡ ಹಾಗೂ ಜೆಡಿಎಸ್​ನಿಂದ ಮಂಜುನಾಥ್​ ಗೌಡರ್​ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Ranebennuru Election Results: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಅರುಣ್​ ಕುಮಾರ್​, ಪ್ರಕಾಶ್​ಕೆ ಕೋಳಿವಾಡ​ ಮಧ್ಯೆ ಪೈಪೋಟಿ
ಅರುಣ್​ ಕುಮಾರ್, ಪ್ರಕಾಶ್​ಕೆ ಕೋಳಿವಾಡ​
Follow us on

Ranebennuru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ (Ranebennur Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಅರುಣ್​ ಕುಮಾರ್​ ಸ್ಪರ್ಧಿಸಿದ್ದಾರೆ. ಇನ್ನು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ 95,438 ಮತಗಳನ್ನ ಪಡೆದು ವಿಜಯಪತಾಕೆ ಹಾರಿಸಿದ್ದರು. ಈ ಬಾರಿ ಕೂಡ ಇವರಿಗೆ ಟಿಕೆಟ್​ ನೀಡಿದ್ದು, ಅಬ್ಬರದ ಪ್ರಚಾರ ಮಾಡಿದ್ದು, ಮತ್ತೊಮ್ಮೆ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ನಿಂದ ಪ್ರಕಾಶ್​ಕೆ ಕೋಳಿವಾಡ ಸ್ಪರ್ಧಿಸಿದ್ದು, ಈ ಹಿಂದೆ ನಡೆದ 2018ರ ಚುನಾವಣೆಯಲ್ಲಿ ಇವರ ತಂದೆ ಕೆ.ಬಿ ಕೋಳಿವಾಡ ಅವರು ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಎದುರು 23,222 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಇನ್ನು ಜೆಡಿಎಸ್​ನಿಂದ ಮಂಜುನಾಥ್​ ಗೌಡರ್ ಸ್ಪರ್ಧೆ ಮಾಡಿದ್ದು, ಇದರ ಜೊತೆ ಈ ಹಿಂದೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್​ ಶಂಕರ್, ಈ ಬಾರಿ ಎನ್​ಸಿಪಿ ಪಕ್ಷದಿಂದ ಕಣಕ್ಕೀಳಿದಿದ್ದು, ಬಾರಿ ಕುತೂಹಲ ಮೂಡಿಸಿದೆ. ಇನ್ನು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಮತಗಳು ನಿರ್ಣಾಯಕ ಮತಗಳಾಗಿವೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕುತೂಹಲ ಕೆರಳಿಸಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 4:31 am, Sat, 13 May 23