ಬೆಳಗಾವಿಯಲ್ಲಿ ಎಂಇಎಸ್ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್- ಬಿಜೆಪಿ ನಾಯಕರ ಪ್ರಚಾರಕ್ಕೆ ಆಕ್ಷೇಪ: ಕಪ್ಪು ಬಾವುಟ ಪ್ರದರ್ಶಿಸಲು ಕರೆ

|

Updated on: May 04, 2023 | 9:02 AM

ಎಂಇಎಸ್​ನಿಂದಕಣಕ್ಕಿಳಿದ ಅಭ್ಯರ್ಥಿಗಳ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಪ್ರಚಾರ ಮಾಡುತ್ತಿರುವುದಕ್ಕೆ ಸಂಜಯ್‌ ರಾವುತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್- ಬಿಜೆಪಿ ನಾಯಕರ ಪ್ರಚಾರಕ್ಕೆ ಆಕ್ಷೇಪ: ಕಪ್ಪು ಬಾವುಟ ಪ್ರದರ್ಶಿಸಲು ಕರೆ
ಸಂಜಯ್ ರಾವತ್
Follow us on

ಬೆಳಗಾವಿ: ಮತದಾನ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಫುಲ್ ಆ್ಯಕ್ಟಿವ್ ಆಗಿದ್ದಾರೆ(Karnataka Assembly Elections 2023). ಬಿರುಸಿನ ಪ್ರಚಾರ, ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತ ಒಬ್ಬರ ಮೇಲೊಬ್ಬರು ಎರಗುತ್ತಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲಿ ಚುನಾವಣೆಯ ಚಿತ್ರಣವೇ ಬದಲಾಗಿದೆ. ಹಲವು ವರ್ಷಗಳಿಂದ ಎಂಇಎಸ್(MES) ಹಾಗೂ ಕನ್ನಡಿಗರ ನಡುವೆ ಜಟಾಪಟಿ ಇದ್ದು ಈಗ ಚುನಾವಣೆ ಸಂದರ್ಭದಲ್ಲೂ ಅದು ಮುನ್ನಲೆಗೆ ಬಂದಿದೆ. ಮಹಾರಾಷ್ಟ್ರ ನಾಯಕರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು ಇದಕ್ಕೆ ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್(Sanjay Rawat) ಕಿಡಿಕಾರಿದ್ದಾರೆ.

ಎಂಇಎಸ್​ನಿಂದಕಣಕ್ಕಿಳಿದ ಅಭ್ಯರ್ಥಿಗಳ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಪ್ರಚಾರ ಮಾಡುತ್ತಿರುವುದಕ್ಕೆ ಸಂಜಯ್‌ ರಾವುತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಚುನಾವಣೆ ವೇಳೆ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಸಂಜಯ್ ರಾವತ್ ಯತ್ನಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಬಿಜೆಪಿ ಪರ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರಚಾರ ನಡೆಸುತ್ತಿದ್ದು, ಎಂಇಎಸ್ ವಿರುದ್ಧ ಪ್ರಚಾರ ಮಾಡಿದ್ರೆ ಕಪ್ಪು ಬಾವುಟ ಪ್ರದರ್ಶಿಸಿ ನಿಮ್ಮ ಸಿಟ್ಟನ್ನು ತೋರಿಸಿ ಎಂದು ಎಂಇಎಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಸಂಜಯ್ ರಾವುತ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶನ: ಮಹಾರಾಷ್ಟ್ರ ಪರ ಘೋಷಣೆ

ನಿನ್ನೆ ರಾತ್ರಿ (ಮೇ 03) ಬೆಳಗಾವಿಯ ಸಮಾದೇವಿ ಬೀದಿಯಲ್ಲಿ ನಡೆದ ಎಂಇಎಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಸಂಜಯ್ ರಾವುತ್, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರು ಪ್ರಚಾರ ಮಾಡ್ತಿದ್ದಾರೆ. ನಿಮ್ಮನ್ನು ಸೋಲಿಸಲು ಇಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಬೆಳಗಾವಿಗೆ ಪ್ರಚಾರ ಮಾಡಲು ದೇವೇಂದ್ರ ಫಡ್ನವಿಸ್ ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಗಡಿಭಾಗದಲ್ಲಿ ನೀವಿರುವಾಗ ಮಹಾರಾಷ್ಟ್ರದ ನಾಯಕರು ಹೇಗೆ ಪ್ರಚಾರ ಮಾಡ್ತಾರೆ? ನಿಮ್ಮ ವಿರುದ್ಧ ಪ್ರಚಾರ ಮಾಡಿದ್ರೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿ. ನಿಮ್ಮ ಸಿಟ್ಟು, ಕ್ರೋಧ ಅವರಿಗೆ ತೋರಿಸಿ ಎಂದು ಸಂಜಯ್ ರಾವುತ್ ಭಾಷಣ ಮಾಡಿದ್ದಾರೆ.

ಬಿಜೆಪಿಯವರು ಹಿಂದುತ್ವದ ಪ್ರಚಾರ ಮಾಡುತ್ತಾರೆ ಅಂತೆ. 300 ರೂಪಾಯಿಗೆ ಇವರ ಹಿಂದುತ್ವ ಇದೆ ಎಂದು ಸಂಜಯ್ ವ್ಯಂಗ್ಯವಾಡಿದ್ದಾರೆ. ದುಡ್ಡು ಚೆಲ್ಲಿ ಶಿವಸೇನೆ ಪಕ್ಷ ಒಡೆಯುವಾಗ ಇವರ ಹಿಂದುತ್ವ ಎಲ್ಲಿ ಹೋಗಿತ್ತು? ಸುಪ್ರೀಂಕೋರ್ಟ್‌‌ನಲ್ಲಿ ಗಡಿವಿವಾದ ವಿಚಾರಣೆ ಬಂದಾಗಲೆಲ್ಲ ಕರ್ನಾಟಕ ಸಿಎಂ ದೆಹಲಿಗೆ ಹೋಗ್ತಾರೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಎಷ್ಟು ಸಾರಿ ದೆಹಲಿಗೆ ಹೋಗಿದ್ದಾರೆ ಪ್ರಶ್ನಿಸಿ. ಎಷ್ಟು ಬಾರಿ ದೆಹಲಿಗೆ ಹೋಗಿ ಒತ್ತಡ ತಂದಿದ್ದೀರಿ ಅಂತಾ ಪ್ರಶ್ನಿಸಿ? ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರಕ್ಕೆ ನಿಮಗೆ ನಾಚಿಕೆ ಬರಲ್ವಾ? ನಿಮ್ಮ ರಕ್ತ ಮರಾಠಿಗನದ್ದೇ ಆಗಿದ್ರೆ ಎಂಇಎಸ್ ವಿರುದ್ಧ ಪ್ರಚಾರ ಮಾಡಬೇಡಿ. ಎಂಇಎಸ್ ವಿರುದ್ಧ ಪ್ರಚಾರಕ್ಕೆ ಆಗಮಿಸಿದ್ರೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರಶ್ನಿಸಿ ಎಂದು ಎಂಇಎಸ್ ಕಾರ್ಯಕರ್ತರಿಗೆ ಶಿವಸೇನೆ ವಕ್ತಾರ ಸಂಜಯ್ ರಾವುತ್ ಕರೆ ಕೊಟ್ಟಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ