Shiggaon Election Results: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಯಾರಿಗೆ ಒಲಿಯಲಿದ್ದಾನೆ ಮತದಾರ?

| Updated By: Rakesh Nayak Manchi

Updated on: May 13, 2023 | 4:23 AM

Shiggaon Assembly Election Result 2023 Live Counting Updates: ಶಿಗ್ಗಾಂವಿ​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್​ನಿಂದ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ ಹಾಗೂ ಜೆಡಿಎಸ್​ನಿಂದ ಶಶಿಧರ ಯಲಿಗಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Shiggaon Election Results: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಯಾರಿಗೆ ಒಲಿಯಲಿದ್ದಾನೆ ಮತದಾರ?
ಶಿಗ್ಗಾಂವಿ ವಿಧಾನಸಭೆ ಚುನಾವಣೆ, ಶಶಿಧರ ಯಲಿಗಾರ, ಬಸವರಾಜ ಬೊಮ್ಮಾಯಿ, ಯಾಸೀರ್​ ಅಹ್ಮದ್​ ಖಾನ್​ ಪಠಾಣ್(ಎಡದಿಂದ)
Follow us on

Shiggaon Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ​ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ( Shiggaon Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ಕಣಕ್ಕೀಳಿದಿದ್ದಾರೆ. ಇನ್ನು ಇವರು ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ 83,868 ಮತಗಳನ್ನ ಪಡೆದು ಗೆಲುವನ್ನ ಸಾಧಿಸಿದ್ದು, ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನ ಅಲಂಕರಿಸಿದ್ದರು. ಈ ಬಾರಿ ಕೂಡ ಗೆಲುವು ಕಾಣುವು ವಿಶ್ವಾಸವಿದ್ದು, ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.

ಕಾಂಗ್ರೆಸ್​​ನಿಂದ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ ಸ್ಪರ್ಧಿಸಿದ್ದು, ಈ ಮೂಲಕ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ಇನ್ನು ಇವರ ತಾಯಿ ಕೂಡ ಜಿಲ್ಲಾ ಪಂಚಾಯತ್​ ಸದಸ್ಯರಾಗಿದ್ದರು. ಜೊತೆಗೆ ಇವರು ಹಾನಗಲ್​ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರು. ಇನ್ನು ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸೈಯದ್ ಅಜೀಮ್ ಪೀರ್ ಖಾದ್ರಿ 74,603 ಮತವನ್ನ ಪಡೆದಿದ್ದು, 9,265 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ ಸ್ಪರ್ಧಿಸಿದ್ದು ಗೆಲ್ಲುವ ಭರವಸೆ ಹೊಂದಿದ್ದಾರೆ. ಇನ್ನು ಜೆಡಿಎಸ್​ನಿಂದ ಶಶಿಧರ ಯಲಿಗಾರ ಸ್ಪರ್ಧೆ ಮಾಡಿದ್ದು, ಇವರು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದರು, ಆದರೆ ಟಿಕೆಟ್​ ಕೈ ತಪ್ಪಿದ ಕಾರಣ, ಕೊನೆ ಕ್ಷಣದಲ್ಲಿ ಜೆಡಿಎಸ್​ ಜೊತೆ ಸೇರಿ ಸ್ಪರ್ಧಿಸಿದ್ದಾರೆ. ಇನ್ನು ಇವರು ಪಂಚಮಸಾಲಿ ಸಮುದಾಯದವರಾಗಿದ್ದು, ಕೊರೊನಾ ಸಮಯದಲ್ಲಿ ಜನರೊಟ್ಟಿಗಿದ್ದು, ಆಹಾರ ಕಿಟ್​ಗಳನ್ನ ಕೊಡುವುದರೊಂದಿಗೆ ಜನರ ವಿಶ್ವಾಸವನ್ನ ಗಳಿಸಿದ್ದಾರೆ. ಇನ್ನು ಕ್ಷೇತ್ರದಲ್ಲಿ ಬಹು ಮುಖ್ಯವಾಗಿ ಮುಸ್ಲಿಂ ಮತ್ತು ಪಂಚಮಶಾಲಿ ಮತಗಳು ನೀರ್ಣಾಯಕ ಮತಗಳಾಗಿವೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ