Shikaripur Election 2023 Winner: ತಂದೆಯ ಭದ್ರಕೋಟೆ ಶಿಕಾರಿಪುರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ವಿಜಯೇಂದ್ರಗೆ ಭಾರಿ ಗೆಲುವು

BY Vijayendra: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. 1983ರಿಂದ 2018ರವರೆಗೆ ಒಮ್ಮೆ ಮಾತ್ರ ಶಿಕಾರಿಪುರದ ಜನತೆ ಯಡಿಯೂರಪ್ಪರನ್ನು ಸೋಲಿಸಿತ್ತು.

Shikaripur Election 2023 Winner: ತಂದೆಯ ಭದ್ರಕೋಟೆ ಶಿಕಾರಿಪುರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ವಿಜಯೇಂದ್ರಗೆ ಭಾರಿ ಗೆಲುವು
ಬಿವೈ ವಿಜಯೇಂದ್ರ

Updated on: May 13, 2023 | 3:25 PM

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
1983ರಿಂದ 2018ರವರೆಗೆ ಒಮ್ಮೆ ಮಾತ್ರ ಶಿಕಾರಿಪುರದ ಜನತೆ ಯಡಿಯೂರಪ್ಪರನ್ನು ಸೋಲಿಸಿತ್ತು. ಯಡಿಯೂರಪ್ಪ ಹೊಸ ಪಕ್ಷ ಕಟ್ಟಿದಾಗಲೂ ಮತದಾರರು ಕೈ ಬಿಟ್ಟಿರಲಿಲ್ಲ. ಈ ಬಾರಿ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದು ಅವರ ಬದಲಿಗೆ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಟಿಕೆಟ್ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಎಂಟು ಬಾರಿ ಗೆಲ್ಲಿಸಿ, ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದ ಶಿಕಾರಿಪುರದ ಜನತೆ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ರಾಜಕೀಯ ಸ್ಥಿತ್ಯಂತರಗಳನ್ನು ಕಾಣುತ್ತಿದೆ.

ಕಾಂಗ್ರೆಸ್​ನಿಂದ ಜಿಬಿ ಮಾಲತೇಶ್​, ಜೆಡಿಎಸ್​ನಿಂದ ಸುಧಾಕರ್ ಶೆಟ್ಟಿ, ಆಪ್​ನಿಂದ ಚಂದ್ರಕಾಂತ್ ರೇವಣ್​ಕರ್ ಅಭ್ಯರ್ಥಿಯಾಗಿದ್ದರು. ಕಳೆದ ಬಾರಿ ಯಡಿಯೂರಪ್ಪ 35 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಅದಕ್ಕೂ ಮೊದಲು ಕೆಜೆಪಿಯಿಂದ ಸ್ಪರ್ಧಿಸಿದ್ದಾಗ, ಅವರ ಗೆಲುವಿನ ಅಂತರ 25 ಸಾವಿರ ಮತದಷ್ಟಿತ್ತು, ಆಗ ಬಿಜೆಪಿ ಅಭ್ಯರ್ಥಿಗೆ ಠೇವಣಿ ನಷ್ಟವಾಗಿತ್ತು ಎನ್ನುವುದನ್ನು ಗಮನಿಸಬಹುದು.

ಈ ಬಾರಿ ವಿಜಯೇಂದ್ರ ಹಾಗೂ ಮಾಲತೇಶ್ ನಡುವೆ ನೇರ ಪೈಪೋಟಿ ಇರಲಿದೆ. ಕಳೆದ ಬಾರಿಯೂ ಮಾಲತೇಶ್ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

 

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ