ಹಣ ಪಡೆದು ಕಾಂಗ್ರೆಸ್ ಬಿ ಫಾರಂ ವಿತರಣೆ ಆರೋಪ: ಚುನಾವಣಾ ಆಯೋಗಕ್ಕೆ ದೂರು ನೀಡದ ಶೋಭಾ ಕರಂದ್ಲಾಜೆ

|

Updated on: Apr 21, 2023 | 3:18 PM

ಕಾಂಗ್ರೆಸ್​ ಪಕ್ಷ ಹಣವನ್ನು ಪಡೆದುಕೊಂಡು ಬಿ ಫಾರ್ಮ್ ವಿತರಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್​ ಪಕ್ಷ ಹಣವನ್ನು ಪಡೆದುಕೊಂಡು ಬಿ ಫಾರ್ಮ್ ವಿತರಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಬಿ ಫಾರ್ಮ್ ಕೊಡಲು ನಿಯೋಜಿತರಾಗಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಭ್ಯರ್ಥಿಗಳ ಬಳಿ ಕಾಂಗ್ರೆಸ್ 2 ಲಕ್ಷ ಹಣ ಪಡೆದು ಬಿ ಫಾರಂ ನೀಡಿದೆ. ಈವರೆಗೂ 1,350 ಅರ್ಜಿಗಳು ಬಂದಿದ್ದು, ಡಿ.ಕೆ.ಶಿವಕುಮಾರ್​​​​​ ಹೇಳಿದಂತೆ 23 ಕೋಟಿ ಹಣ ಸಂಗ್ರಹ ಆಗಿದೆ‌. ಹೀಗೆ ಹಣ ನೀಡಿ ಬಿ ಫಾರಂ ನೀಡುವುದು ಅಪರಾಧ. ಜನಪ್ರತಿನಿಧಿ ಕಾಯ್ದೆ 171ಡಿ ಪ್ರಕಾರ ಇದು ಅಪರಾಧವಾಗಿದೆ. 223 ಅರ್ಜಿಗಳನ್ನು ಅನೂರ್ಜಿತಗೊಳಿಸುವಂತೆ ದೂರು ನೀಡಿದ್ದೇವೆ ಎಂದು ಹೇಳಿದರು.

ಇಮ್ರಾನ್ ಪ್ರತಾಪ್ ಘರಿ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್

ಇಮ್ರಾನ್ ಪ್ರತಾಪ್ ಘರಿಯನ್ನ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್ ಆಗಿ ಮಾಡಿಕೊಂಡಿದೆ. ಇತ್ತೀಚೆಗೆ ಮೃತಪಟ್ಟಿರುವ ಅತಿಕ್ ಅಹ್ಮದ್ ಮತ್ತು ಆಶ್ರಫ್ ಅಹಮದ್​ ಸ್ನೇಹಿತನಾಗಿದ್ದಾನೆ. ಅತಿಕ್ ಅಹ್ಮದ್ ಹಲವಾರು ಭಾಷಣಗಳಲ್ಲಿ ನನ್ನ ಛೋಟಾ ಬ್ರದರ್ ಅಂತ ಹೇಳಿದ್ದಾನೆ. ಅತಿಕ್ ಅಹ್ಮದ್​ ನನ್ನ ಗುರು ಅಂತ ಇಮ್ರಾನ್ ಘರಿಯ ಕರೆಯುತ್ತಿದ್ದ. ಮಾಫಿಯ ಜೊತೆಗೆ ಗ್ಯಾಂಗ್ ಸ್ಟಾರ್​ ಜೊತೆಗೆ ಸಂಬಂಧವನ್ನು ಹೊಂದಿದ್ದ ಅಂತವರನ್ನು ಕರ್ನಾಟಕದ ಕಾಂಗ್ರೆಸ್ ಪಾರ್ಟಿಯ ಸ್ಟಾರ್ ಕ್ಯಾಂಪೆನ್​​ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ಮನಸ್ಥಿತಿ ಗೊತ್ತಾಗುತ್ತೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್​ ಮಾರಾಟ ಮಾಡಿಕೊಂಡಿದ್ದಾರೆ; ಮೊಯ್ದೀನ್ ಬಾವಾ ಗಂಭೀರ ಆರೋಪ

ಡಿಕೆಶಿ ಮುಗಿಸೋಕೆ ಬಿಜೆಪಿ ಷಡ್ಯಂತರ; ಶೋಭಾ ಕರಂದ್ಲಾಜೆ ತಿರುಗೇಟು

ಡಿಕೆಶಿ ಮುಗಿಸೋಕೆ ಬಿಜೆಪಿ ಷಡ್ಯಂತರ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ ಮುಗಿಸೋಕೆ ಬಿಜೆಪಿ ಷಡ್ಯಂತರ ಮಾಡುತ್ತಿಲ್ಲ, ಅವರ ಪಕ್ಷದವರೇ ಮಾಡುತ್ತಿದ್ದಾರೆ. ಡಿಕೆಶಿಯನ್ನ ಮುಗಿಸೋಕೆ ಸಿದ್ದರಾಮಯ್ಯನವರು, ಸಿದ್ದರಾಮಯ್ಯನವರನ್ನ ಮುಗಿಸೋಕೆ ಡಿಕೆಶಿ ಅವರು,
ಡಿಕೆಶಿ ಮತ್ತೆ ಸಿದ್ದರಾಮಯ್ಯ ಇಬ್ಬರನ್ನು ಮುಗಿಸೋಕೆ ಖರ್ಗೆಯವರು. ಈ ಮೂವರನ್ನ ಮುಗಿಸೋಕೆ ಎಂ.ಬಿ ಪಾಟೀಲ್​ ರವರು ಷಡ್ಯಂತ್ರ ಮಾಡುತ್ತಿದ್ದಾರೆ. ಇದು ಅವರ ಪಾರ್ಟಿಯ ವಿದ್ಯಮಾನ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​ ಟಿಕೆಟ್​ ಮಾರಾಟ ಬಗ್ಗೆ ಮೊಯ್ದೀನ್ ಬಾವಾ ಹೇಳಿದಿಷ್ಟು 

ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವಾ ಅವರಿಗೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆ ಟಿವಿ9 ಜೊತೆ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಮತ್ತು ಮಾಜಿ ಸಚಿವ ಖಾದರ್​ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್​ನ್ನು ಮಾರಾಟ ಮಾಡಿದ್ದು, ಹಾಲಿ ಅಭ್ಯರ್ಥಿ ಇನಾಯತ್ ಅಲಿ ಟಿಕೆಟ್​ಗಾಗಿ 2 ಕೋಟಿ ರೂ. ಕೊಟ್ಟಿದ್ದಾರೆ. ಇನಾಯತ್ ಅಲಿ ಡಿಕೆ ಶಿವಕುಮಾರ್​ ಅವರ ಬಿಸ್ನೆಸ್ ಪಾರ್ಟ್ನರ್. ಇನಾಯತ್ ತಮ್ಮನಿಗೆ ಡಿಕೆಶಿ ವಿಚಾರವಾಗಿ ಇಡಿ, ಡ್ರಿಲ್ ಮಾಡಿತ್ತು. ಇದೇ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ, ಆರ್​​ಎಸ್​ಎಸ್ ಮಾಸ್ಟರ್ ಪ್ಲ್ಯಾನ್; ಹೀಗಿದೆ ರಣತಂತ್ರ

ಬಿಜೆಪಿ ಸರ್ಕಾರದಲ್ಲೂ ಇನಾಯತ್ ಅಲಿಗೆ ಗುತ್ತಿಗೆ ಕೊಡಿಸಿ 40, 50 ಪರ್ಸೆಂಟ್​​ ಕಮಿಷನ್ ಕೊಡಿಸಿದ್ದಾರೆ. ಈ ಬಗ್ಗೆ ವಿಜಯೇಂದ್ರ ಅವರ ಬಳಿ ಕೇಳಿ. ಬಿಜೆಪಿ ವಿರುದ್ಧ ಭ್ರಷ್ಟಾಚಾರ ಕುರಿತು ಮಾತನಾಡಲು ಕಾಂಗ್ರೆಸ್​ಗೆ ನೈತಿಕತೆ ಇಲ್ಲ. ಯಾವುದೇ ಪ್ರಭಾವ ಇಲ್ಲದೇ ರಾಹುಲ್ ಗಾಂಧಿಯವರು ಕಳಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ಎಂದು ಹೇಳಿದ್ದರು. ಸಿಇಸಿ ಚೇರ್​ಮನ್ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು ಎಂದಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Fri, 21 April 23