ನಾನು ಯಾರಿಗೂ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲ, ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ನಾಯಕರಿದ್ದಾರೆ: ಬಿಎಲ್ ಸಂತೋಷ್
ತಮ್ಮ ಕುರಿತು ಎದ್ದಿರುವ ಸುದ್ದಿಗಳಿಗೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿದ ಬಿ.ಎಲ್. ಸಂತೋಷ್(BL santhosh) ‘ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ, ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ಲೀಡರ್ಗಳಿದ್ದಾರೆ ಎನ್ನುವ ಮೂಲಕ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಮೈಸೂರು: ಬಿ.ಎಲ್. ಸಂತೋಷ್(BL Santhosh) ತಮ್ಮ ಕುರಿತು ಎದ್ದಿರುವ ಸುದ್ದಿಗಳಿಗೆ ಮಾಧ್ಯಮಗಳ ಮುಂದೆ ಸ್ಪಷ್ಟೀಕರಣ ಕೊಡಲು ನಿರಾಕರಿಸಿದ ಅವರು ‘ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ, ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ಲೀಡರ್ಗಳಿದ್ದಾರೆ ಎನ್ನುವ ಮೂಲಕ ಬಿಜೆಪಿ(BJP) ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಮೈಸೂರಿನ ಬನ್ನಿಮಂಟಪದ ಖಾಸಗಿ ಹೋಟೆಲ್ ಏರ್ಪಡಿಸಿದ್ದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು ‘ನಮ್ಮಲ್ಲಿ ಮಾತನಾಡಲು ಪ್ರತಾಪ್ ಸಿಂಹರಂತಹ ನಾಯಕ ಇದ್ದಾರೆ. ನಾನು ಯಾರಿಗೂ ಕಾಂಪಿಟೇಟರ್ ಆಗಲ್ಲ ಎಂದರು.
ಇತ್ತೀಚೆಗಷ್ಟೇ ಬಿಎಲ್ ಸಂತೋಷ ವಿರುದ್ದ ಜಗದೀಶ್ ಶೆಟ್ಟರ್ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದರು
ಹೌದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್ ತುರ್ತು ಸುದ್ದಿಗೋಷ್ಠಿ ನಡೆಸಿ ತಮಗೆ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕಾರಣ ಎಂದು ನೇರವಾಗಿ ಬಹಿರಂಗವಾಗಿಯೇ ಗಂಭೀರ ಆರೋಪ ಮಾಡಿದ್ದರು. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ಮಾಡಿದ್ದರು. ಅವರ ಟೀಂ ಕೂಡ ನನ್ನ ವಿರುದ್ಧ ತಂತ್ರಗಾರಿಕೆ ಮಾಡಿತ್ತು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಇದನ್ನೂ ಓದಿ:Prathap Simha : ಸೋಮಣ್ಣ ಪರ ಮತಯಾಚನೆಗೆ ಹೋಗಿದ್ದ ಪ್ರತಾಪ್ಸಿಂಹಗೆ ಸ್ಥಳೀಯರಿಂದ ತರಾಟೆ
ಕೋರ್ ಕಮಿಟಿ ಸಭೆಯಲ್ಲಿ ನನ್ನ ಹೆಸರು ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದ್ರೆ, ಕೊನೆಗೆ ಟಿಕೆಟ್ ಕೈತಪ್ಪುವುದಕ್ಕೆ ಸಂತೋಷ್ ಕಾರಣ. ಜೊತೆಗೆ ರಾಮದಾಸ್ ಕ್ಷೇತ್ರಕ್ಕೂ ನಾನು ಹೋಗಿದ್ದೆ. ರಾಮದಾಸ್ ನಿಂತರೆ ಗೆಲ್ಲುತ್ತಾರೆ. ರಾಮದಾಸ್ ಸಂತೋಷ್ ಆಪ್ತ ಅಲ್ಲ. ಶ್ರೀವತ್ಸ ಸಂತೋಷ್ ಅವರ ಆಪ್ತ. ಹಾಗಾಗಿ ರಾಮದಾಸ್ಗೆ ಟಿಕೆಟ್ ಕೈತಪ್ಪಿದ್ದು ಎಂದಿದ್ದರು. ರಾಮದಾಸ್ ಬಂಡಾಯ ಎದ್ದರೆ ಗೆಲ್ಲುವುದಕ್ಕೆ ಆಗಲ್ಲ. ಬಿಎಲ್ ಸಂತೋಷ್ ಕೇರಳದಲ್ಲಿ ಇನ್ಚಾರ್ಜ್ ಮಾಡಿದ್ರು ಒಂದು ಸೀಟ್ ಬರಲಿಲ್ಲ. ತಮಿಳುನಾಡಿನಲ್ಲಿ ಎರಡು ಮೂರು ಸೀಟ್ ಬಂತು. ಇವತ್ತು ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಸಂತೋಷ್ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Fri, 21 April 23