Prathap Simha : ಸೋಮಣ್ಣ ಪರ ಮತಯಾಚನೆಗೆ ಹೋಗಿದ್ದ ಪ್ರತಾಪ್ಸಿಂಹಗೆ ಸ್ಥಳೀಯರಿಂದ ತರಾಟೆ
ಸಚಿವ ವಿ ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ್ ಅವರಿಗೆ ವರುಣಾ ಕ್ಷೇತ್ರದ ಜನರು ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ,
ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಿಂದ(varuna Assembly constituency) ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪ್ರಚಾರ ನಡೆಸುತ್ತಿರುವ ವಿ ಸೋಮಣ್ಣಗೆ ಮೊನ್ನೇ ಲಲಿತಾದ್ರಿಪುರ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು. ಮೈಸೂರು(Mysuru) ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ? ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಮಡಿದ್ದರು. ಇದರಿಂದ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಮುಜುಗರ ಅನುಭವಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು(ಏಪ್ರಿಲ್ 21) ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ಪ್ರತಾಪ್ಸಿಂಹಗೆ(Pratap Simha )ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ. ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲಿಸುತ್ತೇವೆ ಅಂತೀರಾ? ಬಿಜೆಪಿಯ ಅಕ್ಕಿ, ಚೀಲ ಮಾತ್ರ ಸಿದ್ದರಾಮಯ್ಯರದ್ದು ಹೇಳುತ್ತೀರಿ ರಾಜ್ಯದಲ್ಲಿ ಈಗ ಯಾಕೆ ಪಡಿತರ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ಮೈಸೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗು ಏನು ಅಂತೀರಿ? ಸಿದ್ದರಾಮಯ್ಯ ಹತ್ತಿರ ಕುಳಿತುಕೊಳ್ಳಿ ಕೊಡುಗೆ ಗೊತ್ತಾಗುತ್ತದೆ. ರಸ್ತೆಗಳ ರಾಜ ಅಂಥ ಮಹದೇವಪ್ಪಗೆ ಬಿರುದು ಕೊಡುತ್ತೀರಾ, ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ ಎಂದು ಪ್ರತಾಪ್ ಸಿಂಹಗೆ ಸ್ಥಳೀಯ ನಿವಾಸಿಗಳು ಪ್ರಶ್ನಿಸಿ ತರಾಟೆ ತೆಗೆದುಕೊಂಡರು. ಇದರಿಂದ ಬಿಜೆಪಿ ನಾಯಕರು ತಬ್ಬಿಬ್ಬಾದರು.
ಮಾತಿನ ಚಕಮಕಿ ಬಗ್ಗೆ ಪ್ರತಾಪ್ ಸಿಂಹ ಸ್ಪಷ್ಟನೆ
ಇನ್ನು ಈ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಅವರಿಗೆ ಬೇಕಾದಷ್ಟನ್ನು ಮಾತ್ರ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್ ಕಮಂಗಿಗಳಿಂದ ಪ್ರತಾಪಸಿಂಹ ತರಾಟೆ ಎಂದು ಹಬ್ಬಿಸುತ್ತಾರೆ. ನಮಗೂ ಎದುರಿಸುವ ಶಕ್ತಿ ಇದೆ ನಾವು ಮಾಡಬಹುದು. ಅಕ್ಕಿ ಬಗ್ಗೆ ಪ್ರಸ್ತಾಪ ಮಾಡಿದರು. ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡಿದರು. 1950ರಲ್ಲಿ ಹಿಂದೂ ಪರ್ಸನಲ್ ಲಾ ಅಂಬೇಡ್ಕರ್ ತಂದಿದ್ದರು. ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಆಸ್ತಿಯಲ್ಲಿ ಕೊಡುವ ಬಿಲ್. ನೆಹರು ಆ ಬಿಲ್ ಪಾಸಾಗದಂತೆ ನೋಡಿಕೊಂಡವರು ನೆಹರು ಎಂದು ಹೇಳಿದೆ. 1952ರಲ್ಲಿ ಅಂಬೇಡ್ಕರ್ ವಿರುದ್ದ ಅಭ್ಯರ್ಥಿ ಹಾಕಿ ಸೋಲಿಸಿದವರು ಕಾಂಗ್ರೆಸ್ ಎಂದು ಹೇಳಿದೆ. ಆಗ ಅವನ ಬಳಿ ಮಾತಿರಲಿಲ್ಲ ಬಾಯಿ ಮುಚ್ಚಿಕೊಂಡ ಎಂದು ಸ್ಪಷ್ಟಪಡಿಸಿದರು.
ಈ ಬಾರಿ ವರುಣದಲ್ಲಿ ಬಾವುಟ ಹಾರಿಸಲೇ ಬೇಕು. ಮೈಸೂರು ಭಾಗದ ಹಳೆ ತಲೆಮಾರಿನ ರಾಜಕಾರಣಿಗಳನ್ನು ಕ್ಲೀನ್ ಅಪ್ ಮಾಡಬೇಕು. ಮೈಸೂರು ಬೆಂಗಳೂರು ರಸ್ತೆ ನಾನೇ ಹೇಳಿ ಮಂಡ್ಯದಲ್ಲಿ ಉದ್ಘಾಟನೆ ಮಾಡಿಸಿದ್ದು. ನನಗೆ ತುಂಬಾ ತೊಂದರೆ ಕೊಟ್ಟ ಕಾರಣ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿ ಅಲ್ಲೇ ಮಾಡಿಸಿದ್ದೆ. ಕಾರ್ಯಕ್ರಮ ತಡೆಯಲು ಸಾಕಷ್ಟು ಪ್ರಯತ್ನಪಟ್ಟರು. ಬಾಡೂಟ ಇಟ್ಟುಕೊಂಡರು ರಾಹುಲ್ ಗಾಂಧಿ ಕಾರ್ಯಕ್ರಮ ಅಂದರು. ಆದರೆ ಮಂಡ್ಯ ಜನ ಅದಕ್ಕೆ ಸೊಪ್ಪು ಹಾಕಲಿಲ್ಲ. ವರುಣಾ ಯಾವ ತಾಲ್ಲೂಕಿಗೆ ಸೇರುತ್ತದೆ ಎಂದು ಗೊತ್ತಿಲ್ಲದಂತಾಗಿದೆ ಎಂದರು.
ಮೊನ್ನೇ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲಲಿತಾದ್ರಿಪುರ ಗ್ರಾಮದಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಅವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನೂರಾರು ಕೋಟಿ ರೂಪಾಯಿ ಕೊಟ್ಟಿದ್ದೇವೆ ಎನ್ನುತ್ತೀರಿ., ನಮಗೇನು ಮಾಡಿದ್ದರೀರಾ| ನಮಗಿಲ್ಲಿ ಸಮುದಾಯ ಭವನವೂ ಇಲ್ಲ. ನೀವೇ ಉಸ್ತುವಾರಿ ಸಚಿವರಾಗಿದ್ದಾಗ ಏನು ಕೊಟ್ಟಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಇದೇ ವೇಳೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತೆಡೆದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಆದರೂ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:25 pm, Fri, 21 April 23